Advertisement

Manipur ರಾಹುಲ್ ಗಾಂಧಿಯವರ ಬೆಂಗಾವಲು ಪಡೆಯನ್ನು ತಡೆದ ಪೊಲೀಸರು

07:35 PM Jun 29, 2023 | Team Udayavani |

ಇಂಫಾಲ: ಬಿಷ್ಣುಪುರದಲ್ಲಿ ರಾಹುಲ್ ಗಾಂಧಿಯವರ ಬೆಂಗಾವಲು ಪಡೆಯನ್ನು ರಾಜ್ಯ ಪೊಲೀಸರು ತಡೆದಿದ್ದರಿಂದ ಮಣಿಪುರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಮಣಿಪುರ ಪೊಲೀಸರು ಮಾರ್ಗದುದ್ದಕ್ಕೂ ಹಿಂಸಾಚಾರದ ಭೀತಿಯಿಂದ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯನ್ನು ಇಂಫಾಲ್‌ನಿಂದ 20 ಕಿಮೀ ದೂರದಲ್ಲಿ ನಿಲ್ಲಿಸಲಾಯಿತು. ರಾಹುಲ್ ಗಾಂಧಿಯವರು ಚುರಚಂದಪುರಕ್ಕೆ ತೆರಳುತ್ತಿದ್ದರು.ರಾಜ್ಯದಲ್ಲಿ ಜನಾಂಗೀಯ ಘರ್ಷಣೆಯಿಂದ ನಿರಾಶ್ರಿತರಾದ ಪರಿಹಾರ ಶಿಬಿರಗಳಲ್ಲಿ ಜನರನ್ನು ಭೇಟಿ ಮಾಡಲು ನಿರ್ಧರಿಸಲಾಗಿತ್ತು.

ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಮಣಿಪುರ ಪೊಲೀಸರು ರಾಹುಲ್ ಗಾಂಧಿ ಅವರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುವಂತೆ ಸೂಚಿಸಿದ್ದೇವೆ ಎಂದು ಬಿಷ್ಣುಪುರ ಎಸ್ಪಿ ಹೈಸ್ನಮ್ ಬಲರಾಮ್ ಹೇಳಿದ್ದಾರೆ.

ನಾನು ಮಣಿಪುರದ ನನ್ನ ಎಲ್ಲಾ ಸಹೋದರ ಸಹೋದರಿಯರ ಮಾತನ್ನು ಕೇಳಲು ಬಂದಿದ್ದೇನೆ. ಎಲ್ಲಾ ಸಮುದಾಯಗಳ ಜನರು ತುಂಬಾ ಸ್ವಾಗತ ಮತ್ತು ಪ್ರೀತಿಯಿಂದ ಇದ್ದಾರೆ. ಸರ್ಕಾರ ನನ್ನನ್ನು ತಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ಮಣಿಪುರಕ್ಕೆ ಚಿಕಿತ್ಸೆ ಅಗತ್ಯವಿದೆ. ಶಾಂತಿ ಮಾತ್ರ ನಮ್ಮ ಆದ್ಯತೆಯಾಗಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಇಂಫಾಲಕ್ಕೆ ವಾಪಸಾಗುತ್ತಿದ್ದು, ರಾತ್ರಿ ಇಲ್ಲಿಯೇ ತಂಗಲಿದ್ದಾರೆ. ನಾಳೆ(ಶುಕ್ರವಾರ)ನಿಗದಿಯಾಗಿರುವ ಅವರ ಭೇಟಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೇಶಾಮ್ ಮೇಘಚಂದ್ರ ತಿಳಿಸಿದ್ದಾರೆ.

Advertisement

ಬೇಜವಾಬ್ದಾರಿ ವರ್ತನೆ: ಬಿಜೆಪಿ ಆಕ್ರೋಶ

ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ಮಣಿಪುರ ಉಸ್ತುವಾರಿ ಸಂಬಿತ್ ಪಾತ್ರ, ”ರಾಹುಲ್ ಗಾಂಧಿ ಅವರದ್ದು ಬೇಜವಾಬ್ದಾರಿ ವರ್ತನೆ, ಕಾಂಗ್ರೆಸ್ ನಾಯಕರ ಹಠಮಾರಿತನದಿಂದ ಕಲಹ ಪೀಡಿತ ರಾಜ್ಯದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಹೆಲಿಕಾಪ್ಟರ್ ನಲ್ಲಿ ಚುರಂಚಂದಪುರಕ್ಕೆ ಭೇಟಿ ನೀಡುವಂತೆ ಸ್ಥಳೀಯ ಆಡಳಿತವು ಗಾಂಧಿಯವರನ್ನು ಕೇಳಿತ್ತು, ಆದರೆ ಅವರು ನಿರಾಕರಿಸಿ ರಸ್ತೆಯ ಮೂಲಕ ಪ್ರದೇಶವನ್ನು ಭೇಟಿ ಮಾಡಲು ಮುಂದಾದರು” ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next