Advertisement
ಪ್ರತಿ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರದ ಸರಕಾರಗಳು ತಮ್ಮ ಪ್ರವಾಸೋದ್ಯಮ ತಾಣಗಳ ಕುರಿತು ಇಂಥ ಬಜಾರ್ ಗಳಲ್ಲಿ ಸಿನಿಮಾ ಮಂದಿಗೆ ಪರಿಚಯಿಸಲೆತ್ನಿಸುವುದು ಸಹಜ. ಈಶಾನ್ಯ ಭಾರತದಿಂದ ಬರುವುದೇ ಕಡಿಮೆ. ಈ ಬಾರಿ ಇದಕ್ಕೆ ಅಪವಾದವೆಂಬಂತೆ ಮೊದಲ ಬಾರಿಗೆ ಮಣಿಪುರದ ಸಿನಿಮಾ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮಣಿಪುರದ ಪೆವಿಲಿಯನ್ ಏರ್ಪಡಿಸಲಾಗಿತ್ತು.
Related Articles
Advertisement
ಸೊಸೈಟಿಯ ಕಾರ್ಯದರ್ಶಿ ಸುಂಝು ಬಚಸ್ಪತಿಮಾಯುಂ, ಕಥೆ ಹೇಳುವ ಬೃಹತ್ ಪರಂಪರೆ ಮಣಿಪುರದಲ್ಲಿದೆ. ಖೊಂಗ್ಜೊಂ ಪರ್ವ ಹಲವಾರು ಶತಮಾನಗಳಿಂದ ಇಂದಿಗೂ ಹರಿದು ಬಂದಿರುವ ಹಾಡುಗಳ ಜಾನಪದ ಪರಂಪರೆ ಮತ್ತಿತರ ಸಂಗತಿ ಕುರಿತು ವಿವರಿಸಲಾಯಿತು.
2020 ರಲ್ಲಿ ಮಣಿಪುರ ಸರಕಾರವೂ ನೂತನ ಸಿನಿಮಾ ನೀತಿಯನ್ನು ಜಾರಿಗೊಳಿಸಿದೆ. ಈ ಮೂಲಕ ಸ್ಥಳೀಯರ ಹಾಗೂ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗುವ ಎಲ್ಲರ ಹಿತವನ್ನು ಕಾಯುವುದು ಈ ನೀತಿಯ ಉದ್ದೇಶ ಎಂದು ವಿವರಿಸಿದರು.
ಇದರೊಂದಿಗೆ ಬಿಹಾರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್, ಮಧ್ಯಪ್ರದೇಶ, ಗುಜರಾತ್, ಛತ್ತೀಸ್ ಗಡ, ದಿಲ್ಲಿ, ಪುದುಚರಿಯ ದೇಶಗಳು ಫಿಲ್ಮ್ ಬಜಾರ್ ನಲ್ಲಿ ಫೆವಿಲಿಯನ್ ಗಳನ್ನು ನಿರ್ಮಿಸಿದ್ದವು.
ಕರ್ನಾಟಕದ್ದೇನೂ ಕಾಣಲೇ ಇಲ್ಲ
ಫಿಲ್ಮ್ ಬಜಾರ್ ನಲ್ಲಿ ಈ ಬಾರಿಯೂ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯಾಗಲೀ, ಸಿನಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ಪೆವಿಲಿಯನ್ ಆಗಲೀ, ಮಾಹಿತಿಯಾಗಲೀ ಇರಲಿಲ್ಲ. ಕರ್ನಾಟಕದಲ್ಲಿ ಉಳಿದೆಲ್ಲ ರಾಜ್ಯ ಹಾಗೂ ವಿದೇಶಗಳಿಗಿಂತ ಒಳ್ಳೆಯ ತಾಣಗಳಿವೆ. ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕ, ಅರಣ್ಯ, ಜಲಪಾತ ಹಾಗೂ ಸಮುದ್ರ ತೀರಗಳಿವೆ. ವಿಶೇಷವಾಗಿ ಪಡುಬಿದ್ರಿ ಸಮುದ್ರ ತೀರಕ್ಕೆ ಪ್ರತಿಷ್ಠಿತ ಬ್ಲ್ಯೂ ಟ್ಯಾಗ್ ಗೌರವ ಸಿಕ್ಕಿದೆ. ಇವೆಲ್ಲವುಗಳನ್ನು ಸರಿಯಾಗಿ ಪ್ರೊಮೋಷನ್ ಮಾಡಿದರೆ ಪ್ರವಾಸಿಗರು ಹಾಗೂ ಸಿನಿಮಾ ಮಂದಿಯ ಸಂಖ್ಯೆ ಹೆಚ್ಚಾಗಬಹುದು. ಸುಮಾರು ಹತ್ತು ಸಾವಿರ ಮಂದಿಗಳು ಭಾಗವಹಿಸುವಂತೆ ಮಾಡಬಹುದು. ಆದರೆ ಫಿಲ್ಮ್ ಬಜಾರ್ ನಲ್ಲಿ ಯಾವುದೂ ಕಾಣ ಬರಲಿಲ್ಲ.