Advertisement

ಮಣಿಪುರದಲ್ಲಿ 130 ದಿನಗಳ ಆರ್ಥಿಕ ದಿಗ್ಬಂಧನ ಮುಕ್ತಾಯ

10:08 AM Mar 20, 2017 | Team Udayavani |

ಇಂಫಾಲ: ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 130 ದಿನಗಳಿಂದ ಜಾರಿಯಲ್ಲಿದ್ದ ಆರ್ಥಿಕ ದಿಗ್ಬಂಧನ ಹಿಂಪಡೆಯಲಾಗಿದೆ. ರವಿವಾರ ತಡರಾತ್ರಿಯಿಂದ ಯಾವುದೇ ರೀತಿಯ ಸಮಸ್ಯೆಗಳು ಇರುವುದಿಲ್ಲವೆಂದು ಸೇನಾಪತಿ ಜಿಲ್ಲೆಯಲ್ಲಿ ಕೇಂದ್ರ, ರಾಜ್ಯ ಮತ್ತು ನಾಗಾ ಸಂಘಟನೆಗಳ ನಡುವಿನ ಮಾತುಕತೆಯಲ್ಲಿ ತೀರ್ಮಾನಿಸಲಾಗಿದೆ. ಬಂಧಿತ ಯುನೈಟೆಡ್‌ ನಾಗಾ ಕೌನ್ಸಿಲ್‌ನ ಮುಖಂಡರನ್ನು ಸರಕಾರ ಬೇಷರತ್‌ ಬಿಡುಗಡೆ ಮಾಡಲಿದ್ದು, ಆರ್ಥಿಕ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ನಾಗಾ ಬುಡಕಟ್ಟು ಮುಖಂಡರು ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಿದೆ.

Advertisement

ಮತ್ತೂಂದು ಗಮನಾರ್ಹ ಬೆಳವಣಿಗೆಯಲ್ಲಿ ಎನ್‌.ಬೈರೇನ್‌ ಸಿಂಗ್‌ ನೇತೃತ್ವದ ಮೈತ್ರಿಕೂಟದ ಸರಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಹೀಗಾಗಿ, ಬಿಜೆಪಿ ಶಾಸಕರು ಗುವಾಹಾಟಿಯ ರೆಸಾರ್ಟಲ್ಲಿ ಆಶ್ರಯ ಪಡೆದಿದ್ದಾರೆ. ಬೆಳಗ್ಗೆ ವಿಶೇಷ ವಿಮಾನದಲ್ಲಿ ಇಂಫಾಲಕ್ಕೆ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next