Advertisement

ಜನಾಂಗೀಯ ಹಿಂಸಾಚಾರ ಮಣಿಪುರ DGP ಗೆ ಸಮನ್ಸ್‌

12:36 AM Aug 02, 2023 | Team Udayavani |

ಹೊಸದಿಲ್ಲಿ: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಂವಿಧಾನಿಕ ಯಂತ್ರವು ಸಂಪೂರ್ಣ ಹಳ್ಳ ಹಿಡಿದಿದೆ ಎಂದು ಮಣಿಪುರ ಸರಕಾ ರವನ್ನು ಸುಪ್ರೀಂ ಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದೆ.

Advertisement

ಇದೇ ವೇಳೆ ತನ್ನ ಪ್ರಶ್ನೆಗಳಿಗೆ ಆ.7ರಂದು ಪ್ರತಿಕ್ರಿಯೆ ನೀಡು ವಂತೆ ಡಿಜಿಪಿಗೆ ಸಮನ್ಸ್‌ ಜಾರಿ ಗೊಳಿಸಿದೆ. ಮಣಿಪುರ ಪ್ರಕರಣದ ಕುರಿತು ಮಂಗಳವಾರ ವಿಚಾರಣೆ ನಡೆಸಿ ದ ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃ ತ್ವದ ನ್ಯಾಯಪೀಠ, ಮಣಿಪುರ ರಾಜ್ಯ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ತಮ್ಮ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಜನಾಂಗೀಯ ಹಿಂಸಾಚಾರ ಮತ್ತು ಮಹಿಳಾ ಕೇಂದ್ರಿತ ದೌರ್ಜನ್ಯಗಳ ಘಟನೆಗಳ ತನಿಖೆಯಲ್ಲಿ ತಡ ಮತ್ತು ಆಲಸ್ಯ ಎದ್ದು ಕಾಣುತ್ತಿದೆ ಎಂದು ಕಿಡಿ ಕಾರಿತು. ಇದೇ ವೇಳೆ ಘಟನೆಗಳನ್ನು ಪ್ರತ್ಯೇಕಿಸಿ ಸಂಪೂರ್ಣ ವಾಗಿ ವಿವರ ನೀಡುವಂತೆ ಮಣಿಪುರ ಸರಕಾರಕ್ಕೆ ಸೂಚಿಸಿತು. ಇದೇ ವೇಳೆ, ಬುಧವಾರ ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ನೇತೃತ್ವದ ವಿಪಕ್ಷಗಳ ನಿಯೋಗವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಣಿಪುರ ವಿಚಾರದ ಕುರಿತು ಚರ್ಚಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next