Advertisement

ಮಣಿಪುರ CM ಕಾರ್ಯಕ್ರಮದ ವೇದಿಕೆ ದುಷ್ಕರ್ಮಿಗಳಿಂದ ಧ್ವಂಸ: ಚುರಚಂದಪುರದಲ್ಲಿ ಸ್ಥಿತಿ ಗಂಭೀರ

09:48 PM Apr 28, 2023 | Team Udayavani |

ಇಂಫಾಲ್‌: ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಭಾಗವಹಿಸಬೇಕಿದ್ದ ಕಾರ್ಯಕ್ರಮದ ವೇದಿಕೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಬೆನ್ನಲ್ಲೇ, ಮಣಿಪುರದ ಚುರಚಂದ್‌ಪುರದಲ್ಲಿ ಶುಕ್ರವಾರ ಅಂತರ್ಜಾಲ ಸೇವೆ ನಿರ್ಬಂಧಿಸಲಾಗಿದೆ ಜತೆಗೆ ಜನರು ಗುಂಪುಸೇರುವುದನ್ನು ನಿಷೇಧಿಸಲಾಗಿದೆ. ಕ್ಷೇತ್ರದ ಶಾಸಕರ ಮನವಿಯ ಮೇರೆಗೆ ಕಾರ್ಯಕ್ರಮವೊಂದರಲ್ಲಿ ಬಿರೇನ್‌ ಭಾಗವಹಿಸಬೇಕಿತ್ತು. ಆದರೆ, ಅದಕ್ಕೂ ಮುಂಚೆಯೇ ರಾಜ್ಯದಲ್ಲಿ ಮೀಸಲು ಅರಣ್ಯ ಪ್ರದೇಶ ಹಾಗೂ ಜೌಗು ಪ್ರದೇಶಗಳ ಸಮೀಕ್ಷೆ ನಡೆಸಲು ಬಿಜೆಪಿ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ, ಸಿಎಂ ಆಗಮನಕ್ಕೆ ಅಡ್ಡಿಪಡಿಸಲು ದುಷ್ಕರ್ಮಿಗಳು ವೇದಿಕೆಗೆ ಗುರುವಾರ ರಾತ್ರಿ ಬೆಂಕಿ ಹಾಕಿದ್ದಾರೆ.

Advertisement

ಸ್ಥಳೀಯ ಬುಡಕಟ್ಟು ಜನಾಂಗಗಳ ವೇದಿಕೆಯೊಂದು ಮುಷ್ಕರಕ್ಕೂ ಕರೆ ನೀಡಿದೆ. ಈ ಹಿನ್ನೆಲೆ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚುವ ಸಾಧ್ಯತೆಗಳನ್ನು ತಡೆಗಟ್ಟಲು ಅಂತರ್ಜಾಲ ಸ್ಥಗಿತ ಹಾಗೂ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next