ಮಣಿಪಾಲ : ಪೊಲೀಸರು ಗುರುವಾರ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಮನೆ ಕಳ್ಳರನ್ನು ಸ್ವತ್ತುಗಳ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಮೂಡು ಅಲೆವೂರು ಆದರ್ಶ್ ನಗರದ ವರುಣ(19) ಮತ್ತು ಮೂಡು ಅಲೆವೂರಿನ ನೆಹರೂ ನಗರದ ಕಾರ್ತಿಕ ಪೂಜಾರಿ (19) ಎನ್ನುವವರಾಗಿದ್ದಾರೆ.
ಫೆ.18-19 ಉಡುಪಿಯ ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಮನೆಗೆ ನುಗ್ಗಿ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ್ದ 2,40,000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.
ಪೆರಂಪಳ್ಳಿ ಶೀಂಬ್ರ ಕ್ರಾಸ್ ಬಳಿ ಕಾರ್ಯಾಚರಣೆಗಿಳಿದ ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಿದ 2,40,000 ರೂ. ಮೌಲ್ಯದ ಚಿನ್ನಾಭರಣಗಳು, 1 ಸ್ಕೂಟರ್‌ಮತ್ತು ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಯ 2 ಪ್ರಕರಣಗಳು ಸೇರಿ ಒಟ್ಟು 3 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 3 ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಂದ ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಮ್ ಎಚ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ,ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ, ಪಿಎಸ್ಐ ನವೀನ್ ನಾಯ್ಕ್, ರುಕ್ಮ ನಾಯ್ಕ್ , ಮಣಿಪಾಲ ಠಾಣೆಯ ಸಿಬಂದಿಗಳಾದ ಎಎಸ್‌ಐ ಗಂಗಪ್ಪ ಎಸ್, ಎಎಸ್‌ಐ ನಾಗೇಶ್ ನಾಯಕ್, ಎಎಸ್‌ಐ ಶೈಲೇಶ್ ಕುಮಾರ್, ಹೆಚ್ ಸಿ ಪ್ರಸನ್ನ ಸಿ, ಇಮ್ರಾನ್, ಸುಕುಮಾರ್ ಶೆಟ್ಟಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು.