Advertisement
ಗುಂಡಿಗಳಿಗೆ ಜಲ್ಲಿ ಕಲ್ಲುಪರ್ಕಳ -ಮಣಿಪಾಲ ಮಾರ್ಗದ ಸಿಂಡಿಕೇಟ್ ಸರ್ಕಲ್, ಐನಾಕ್ಸ್, ರೈಲ್ವೇ ಸೇತುವೆ ಸಮೀಪದ ಬೃಹತ್ ಗಾತ್ರದ ಗುಂಡಿಗಳನ್ನು ಮಳೆಗಾಲದಲ್ಲಿ ಜಲ್ಲಿ ಕಲ್ಲು ಬಳಸಿ ಮುಚ್ಚಲಾಗಿತ್ತು.
ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಎದ್ದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿಚಕ್ರ ವಾಹನಗಳು ಪಲ್ಟಿ (ಸ್ಕಿಡ್) ಹೊಡೆಯತ್ತಿದೆ. ವಾಹನಗಳ ಟೈರ್ ಪಂಕ್ಚರ್ ಆಗುತ್ತಿದ್ದು ಸಮಸ್ತೆಗೆ ಕಾರಣವಾಗಿದೆ.
Related Articles
ಈ ಮಾರ್ಗದಲ್ಲಿ ಸಂಚರಿಸುವ ಸವಾರರು ಸವಾರರು ಮೈ ಕೈ ನೋವು, ಉಸಿರಾಟದ ಸಮಸ್ಯೆ, ಕಣ್ಣು ಉರಿ ತೋರಿಸಿಕೊಳ್ಳಲು ಆಸ್ಪತ್ರೆಯ ದಾರಿ ಹಿಡಿದಿದ್ದಾರೆ.
ಮಳೆಗಾಲದಲ್ಲಿ ರಾ.ಹೆ. 169 ಪರ್ಕಳ- ಕಲ್ಸಂಕ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಪರ್ಕಳ- ಟೈಗರ್ ಸರ್ಕಲ್ ಮಾರ್ಗದಲ್ಲಿ ಕಾಮಗಾರಿಯನ್ನು ಪ್ರಾರಂಭವಾಗಿದೆ. ಇಂದ್ರಾಳಿಯಲ್ಲಿ ಹೊಸ ರೈಲ್ವೇ ಬ್ರಿಡ್ಜ್ ನಿರ್ಮಾಣವಾಗಬೇಕು. ಅದರ ಕಾಮಗಾರಿ ಸಂಪೂರ್ಣ ರೈಲ್ವೇ ಇಲಾಖೆ ಮಾಡಬೇಕಾಗಿದೆ. ಇನ್ನೂ ಐನಾಕ್ಸ್, ಸಿಂಡಿಕೇಟ್ ಸರ್ಕಲ್ ಬಳಿಯ ಎರಡು ಕಡೆಗಳಲ್ಲಿ ಪಕ್ಕ ರಸ್ತೆ ನಿರ್ಮಾಣವಾದರೆ ಈ ಮಾತ್ರ ಸಮಸ್ಯೆಗೆ ಮುಕ್ತಿ ಸಿಗಲಿದೆ.
Advertisement
ಬೈಕ್ ಪಲ್ಟಿ ಹೊಡೆಯುತ್ತಿದೆಸಿಂಡಿಕೇಟ್ ಸರ್ಕಲ್, ಐನಾಕ್ಸ್, ಇಂದ್ರಾಳಿ ಮಾರ್ಗದಲ್ಲಿ ಹಾಕಿರುವ ಜಲ್ಲಿ ಕಲ್ಲುಗಳಿಂದ ಬೈಕ್ ಪಲ್ಟಿ ಹೊಡೆಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸಿದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ.
-ರವೀಂದ್ರ ನಾಯಕ್,
ಪರ್ಕಳ ಬೈಕ್ ಸವಾರ