Advertisement

ಮಣಿಪಾಲದ ಹೃದಯ ಭಾಗದಲ್ಲಿ ಬೆಳಗದ ದೀಪಗಳು !

11:57 PM Jan 19, 2021 | Team Udayavani |

ಉಡುಪಿ: ಶಿಕ್ಷಣ ಸಂಸ್ಥೆ, ಆರೋಗ್ಯ ಮತ್ತು ಕೈಗಾರಿಕೆ ಕೇಂದ್ರಗಳನ್ನು ಹೊಂದಿರುವ ಮಣಿಪಾಲ ನಗರ ಕಳೆದೊಂದು ವರ್ಷದಿಂದ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಇದರಿಂದ ರಾತ್ರಿ ವೇಳೆ ಇಲ್ಲಿ ಓಡಾಡುವ ಮಹಿಳೆಯರ, ಹಿರಿಯ ನಾಗರಿಕರು, ಮಕ್ಕಳ ಸುರಕ್ಷತೆಗೆ ಅಭದ್ರತೆ ಕಾಡುತ್ತಿದೆ.

Advertisement

2019ರ ಕೊನೆಯಲ್ಲಿ ತೀರ್ಥಹಳ್ಳಿ- ಕಲ್ಸಂಕ ರಾ.ಹೆ.169(ಎ) ವಿಸ್ತರಣೆ ಕಾಮಗಾರಿ ಆರಂಭವಾಗಿತ್ತು. ಆ ಸಮಯದಲ್ಲಿ ಕಾಮಗಾರಿ ನಿಮಿತ್ತ ಮಣಿಪಾಲದಲ್ಲಿ ಹಾದು ಹೋಗುವ ಹೆದ್ದಾರಿಯ ಡಿವೈಡರ್‌ ಮಧ್ಯೆ ಈ ಹಿಂದೆ ಆಳವಡಿಸಲಾದ ಬೀದಿ ದೀಪ ಹಾಗೂ ಜಂಕ್ಷನ್‌ ಹೈಮಾಸ್ಟ್‌ ದೀಪಗಳನ್ನು ತೆರವುಗೊಳಿಸಲಾಗಿತ್ತು. ಇದೀಗ

ರಸ್ತೆ ಕಾಮಗಾರಿ ಪೂರ್ಣಗೊಂಡು ವರ್ಷ ಸಮೀಪಿಸುತ್ತಿದ್ದರೂ, ಸಂಬಂಧ ಪಟ್ಟ ಅಧಿಕಾರಿಗಳು ಹೊಸ ಬೀದಿ ದೀಪ, ಹೈಮಾಸ್ಟ್‌ ಆಳವಡಿಕೆಗೆ ಮುಂದಾಗಿಲ್ಲ.

ನಿರಂತರ ಒತ್ತಾಯ :

ಮಣಿಪಾಲ ನಗರದಲ್ಲಿ ನಕ್ಷತ್ರಗಳಂತೆ ಎಲ್ಲೋ ಒಂದೊಂದು ಬೀದಿದೀಪಗಳು ಬೆಳಕು ನೀಡುತ್ತಿರುವುದು ಹೊರತು ಪಡಿಸಿದರೆ ಇಡೀ ನಗರ ಕತ್ತಲಲ್ಲಿದೆ. ರಾತ್ರಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಹಲವಾರು ಮಂದಿ ನಗರಸಭೆಗೆ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಮಣಿಪಾಲಕ್ಕೆ ಬೀದಿದೀಪ ಅಳವಡಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

Advertisement

ಬಸ್‌ ನಿಲ್ದಾಣ ಕತ್ತಲು :

ಸಂಜೆ 7ರ ಬಳಿಕ ಮಣಿಪಾಲದ ಬಸ್‌ ನಿಲ್ದಾಣದಲ್ಲಿ ಸಂಪೂರ್ಣ ಕತ್ತಲು ಕವಿಯುತ್ತದೆ. ಇದರಿಂದಾಗಿ ಇಲ್ಲಿ ಬಸ್‌ಗಾಗಿ ಕಾಯುವ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಸಂಜೆ 7.30ರ ಅನಂತರ ಮಹಿಳೆಯರು, ಹಿರಿಯ ನಾಗರಿಕರು ಬಸ್‌ ನಿಲ್ದಾಣದಲ್ಲಿ ಬೆಳಕು ಇಲ್ಲದೆ ಇರುವುದರಿಂದ ನಿಲ್ದಾಣದ ಒಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸಮಸ್ಯೆ ತೀವ್ರತೆ ಅರಿವಿಲ್ಲ :

ನಗರಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿ ಎರಡು ತಿಂಗಳು ಕಳೆದಿದೆ. 2 ಸಾಮಾನ್ಯ ಸಭೆಯಲ್ಲಿ ಬೀದಿ ದೀಪಗಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಪ್ರಸ್ತಾಪಿದರೂ, ಮಣಿಪಾಲ ಹೃದಯ ಭಾಗದ ಕತ್ತಲು ಇರುವ ಕುರಿತು ಯಾರು ಮಾತನಾಡಿಲ್ಲ. ಸರಗಳ್ಳತನ, ದರೋಡೆ ಪ್ರಕರಣಗಳು ಹೆುಚ್ಚುತ್ತಿರುವ ಈ ಸಮಯದಲ್ಲಿ ನಗರಸಭೆ ಬೀದಿ ದೀಪಗಳನ್ನು ಆಳವಡಿಸಲು ಮುಂದಾಗದೆ ಇರುವುದು ವಿಪರ್ಯಾಸ. ಅನಾಹುತ ಸಂಭವಿಸುವವರೆಗೂ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ತೀವ್ರತೆಯ ಅರಿವು ಮೂಡುವುದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಕತ್ತಲು ಕವಿದ ಬಳಿಕ ಬಸ್‌ ನಿಲ್ದಾಣದಲ್ಲಿ ನಿಂತುಕೊಳ್ಳಲು ಭಯವಾಗುತ್ತದೆ. ಆದಷ್ಟು ಶೀಘ್ರ ಲೈಟ್‌ಗಳನ್ನು ಅಳಡಿಸಿದರೆ ಉತ್ತಮ.ಸೌಮ್ಯಾ, ಮಣಿಪಾಲದ ಉದ್ಯೋಗಿ

ರಾ.ಹೆ. ಕಾಮಗಾರಿ ವೇಳೆಯಲ್ಲಿ ಬೀದಿ ದೀಪಗಳನ್ನು ತೆಗೆಯಲಾಗಿತ್ತು. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು.ಮಂಜುನಾಥ ಮಣಿಪಾಲ ಈಶ್ವರನಗರ ವಾರ್ಡ್‌ ಸದಸ್ಯರು, ನಗರಸಭೆ ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next