Advertisement
2 ವಾರಗಳಿಂದಲೂ ಜಿಲ್ಲಾಧಿಕಾರಿ ಕಚೇರಿಯ ಎದುರುಭಾಗದ ಗೇಟ್ ಹಾಗೂ ಹಿಂಬದಿಯಿಂದ ನಾಯಿಗಳು ಆಗಮಿಸುತ್ತಿದ್ದು, ಈಗಾಗಲೇ ಕೆಲವು ಮಂದಿ ಕಡಿತಕ್ಕೂ ಒಳಗಾಗಿದ್ದಾರೆ. ಇಲ್ಲಿನ ಭದ್ರತಾ ಸಿಬಂದಿ ನಾಯಿಯನ್ನು ಓಡಿಸುವ ಕೆಲಸ ಮಾಡುತ್ತಿದ್ದರೂ ಅದರ ಉಪಟಳ ಮಾತ್ರ ತಪ್ಪುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಟ್ಟಡ ಒಳಗೂ ಶ್ವಾನಗಳು ಮಲಗಿರುತ್ತವೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Related Articles
Advertisement
ಪೊದೆಗಳಲ್ಲಿ ಬಂಧಿಯಾದ ದಂಡಿ ಪ್ರತಿಮೆಡಿಸಿ ಕಚೇರಿ ಆವರಣದ ಒಳಗಿರುವ ದಂಡಿ ಸತ್ಯಾಗ್ರಹದ ಸ್ಮರಣೆಯ ಪ್ರತಿಮೆ ಪೊದೆಗಳಿಂದ ಆವರಿಸಿದೆ. ಸುತ್ತಲೂ ಪೊದೆಗಳು ಬೆಳೆದು ನಿಂತ ಪರಿಣಾಮ ನಾಯಿಗಳು ಹಾಗೂ ವಿಷಜಂತುಗಳು ಕೂಡ ಇಲ್ಲಿ ಆಶ್ರಯ ಪಡೆಯುತ್ತಿವೆ. ಅಲ್ಲದೆ ಸ್ಥಳೀಯ ಕಟ್ಟಡದ ತ್ಯಾಜ್ಯಗಳನ್ನು ಇಲ್ಲಿ ಎಸೆಯಲಾಗುತ್ತಿದೆ.