ಆದರೆ ಮಣಿಪಾಲ ಬಸ್ ನಿಲ್ದಾಣದಿಂದ ಪೂರ್ವಕ್ಕೆ ಹೋಗುವಾಗ ಫುಟ್‌ಪಾತ್‌ನಲ್ಲೂ ವಾಹನಗಳನ್ನು ಪಾರ್ಕ್ ಮಾಡಿರುವುದರಿಂದ ಪಾದಚಾರಿಗಳಿಗೆ ಕಷ್ಟವಾಗಿದೆ.
ಫುಟ್‌ಪಾತ್‌ನಲ್ಲೇ ಪಾರ್ಕಿಂಗ್ ಮಾಡುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದು ಹೋಗುತ್ತಾರೆ. ಜತೆಗೆ ರಸ್ತೆ ದಾಟುವವರಿಗೂ ಕಿರಿಕಿರಿ. ಪಾದಚಾರಿಗಳು ರಸ್ತೆಯಲ್ಲೇ ನಡೆಯುವುದರಿಂದ ವಾಹನ ಸವಾರರೂ ಗೊಂದಲಕ್ಕೊಳಗಾಗಿ ಅಪಘಾತ ಸಂಭವಿಸುತ್ತವೆ. ಈ ಭಾಗದಲ್ಲಿ ನಿತ್ಯವೂ ವಾಹನ ಢಿಕ್ಕಿ ಪ್ರಕರಣಸಾಮಾನ್ಯವಾಗಿವೆ. ಸ್ಥಳ ಆಕ್ರಮಿಸುವವ ರನ್ನು ನಿಭಾಯಿಸುವುದೂ ಪೊಲೀಸರಿಗೂ ಕಷ್ಟವಾಗಿದ್ದು, ಘನವಾಹನಗಳಿಗೆ ಈ ಪ್ರದೇಶದಲ್ಲಿ ಸಾವಕಾಶವಾಗಿ ಚಲಿಸುವುದೂ ಕಷ್ಟಕರವಾಗಿದೆ.
Advertisement
ನಿತ್ಯವೂ 25-30 ಪ್ರಕರಣ ದಾಖಲುನಾವು ಹಲವಾರು ಬಾರಿ ಪ್ರಯತ್ನಿಸಿದ್ದೇವೆ. ವಾಹನಗಳನ್ನು ಎಳೆದುಕೊಂಡು ಹೋಗಿದ್ದೇವೆ. ಬ್ಯಾರಿಕೇಡ್ ಕೂಡ ಹಾಕಿದ್ದೇವೆ. ಫುಟ್‌ಪಾತ್‌ನಲ್ಲಿ ನಿಲುಗಡೆ ಮಾಡದಂತೆ ಮಾಡಲು ಎತ್ತರಕೆ ಕಲ್ಲು ಕಟ್ಟಲು ರಾ.ಹೆ. ಅಧಿಕಾರಿಗಳಿಗೂ ತಿಳಿಸಿದ್ದೇವೆ. ನಿತ್ಯ 25-30 ಪ್ರಕರಣಗಳನ್ನು ದಾಖಲಿಸಿದರೂ, ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಸಮಸ್ಯೆಯಾಗುತ್ತಿದೆ.
– ಸುದರ್ಶನ್
ಇನ್ಸ್‌ಪೆಕ್ಟರ್, ಮಣಿಪಾಲ ಪೊಲೀಸ್ ಠಾಣೆ.