Advertisement

ಮಣಿಪಾಲ: ವಸತಿಗೃಹದಲ್ಲಿ ನೇಣು ಬಿಗಿದು ಪ್ರೊಫೆಸರ್‌ ಆತ್ಮಹತ್ಯೆ

01:25 AM Feb 23, 2023 | Team Udayavani |

ಮಣಿಪಾಲ: ನೇಣು ಬಿಗಿದು ಪ್ರೊಫೆಸರ್‌ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ದಶರಥ ನಗರದ ಖಾಸಗಿ ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಉತ್ತರಪ್ರದೇಶದ ಅಹ್ಮದ್‌ ಮಿರ್ಜಾ (38) ನೇಣಿಗೆ ಶರಣಾದವರು. ಮೃತಪಟ್ಟು ನಾಲ್ಕು ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಇವರು ಮಣಿಪಾಲದ ಆರ್ಕಿಟೆಕ್‌ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿದ್ದರು.

ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಎಸ್‌ಐ ನವೀನ್‌ ನಾಯ್ಕ್, ಹೆಡ್‌ಕಾನ್‌ಸ್ಟೆಬಲ್‌ ಸುಕುಮಾರ್‌, ಕಾನ್‌ಸ್ಟೆಬಲ್‌ ಉಮೇಶ್‌ ಘಟನ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next