Advertisement
ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕರಾವಳಿ ಜಂಕ್ಷನ್‌ನಿಂದ ಕಡಿಯಾಳಿವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ಇದೆ. ಕಡಿಯಾಳಿಯಿಂದ ಮಣಿಪಾಲದವರೆಗೆ 30 ಮೀ. ಅಗಲದ ರಸ್ತೆಯಾಗಲಿದೆ. ಭೂ ಸ್ವಾಧೀನಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ ಎಂದರು.
ಪರ್ಕಳ ಭಾಗದಲ್ಲಿ ಗದ್ದೆ ಪ್ರದೇಶದಲ್ಲಿ ಸುಸಜ್ಜಿತ ಹೆದ್ದಾರಿ ನಿರ್ಮಾಣವಾಗಲಿದೆ. ಈಗ ಇರುವ ರಸ್ತೆಗೂ ಕಾಂಕ್ರೀಟ್ ಹಾಕಲಾಗುತ್ತದೆ. ಭೂಮಿಗೆ ಗರಿಷ್ಠ ಪರಿಹಾರಕ್ಕೆ ಸೂಚಿಸಲಾಗಿದೆ. ಈ ಕುರಿತು 15ದಿನದಲ್ಲಿ ಸಭೆ ನಡೆಸಲಾಗುವುದು. ಸಾಧ್ಯವಾದರೆ ಆತ್ರಾಡಿವರೆಗೂ ಚತುಷ್ಪಥವಾಗಲಿದೆ ಎಂದರು. ಪ್ರತ್ಯೇಕ ಸೇತುವೆ
ಇಂದ್ರಾಳಿಯಲ್ಲಿ ಈಗ ಇರುವ ರೈಲ್ವೆ ಸೇತುವೆಯೊಂದಿಗೆ ಮಣಿಪಾಲ ಕಡೆಗೆ ಹೋಗುವುದಕ್ಕಾಗಿಯೇ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗಲಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಸಂಚಾರ ಸುವ್ಯವಸ್ಥೆಗಾಗಿ ಟ್ರಾಫಿಕ್ ಸಿಗ್ನಲ್ ಮತ್ತಿತರ ಕೆಲಸಗಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಸಲಾಗಿದೆ. ರಸ್ತೆಗಳು ಚರಂಡಿ, ಪುಟ್‌ಪಾತ್‌ಗಳನ್ನು ಕೂಡ ಒಳಗೊಂಡಿರುತ್ತವೆ ಎಂದರು.
Related Articles
ಆದಿಉಡುಪಿ-ಮಲ್ಪೆ ಬಂದರು ಗೇಟ್‌ವರೆಗೆ ಕಾಂಕ್ರೀಟ್ ಮಾಡಿ ಚತುಷ್ಪಥಗೊಳಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ. ಇದಕ್ಕೆ ಪೂರ್ಣಪ್ರಮಾಣದಲ್ಲಿ ಭೂಸ್ವಾಧೀನದ ಆವಶ್ಯಕತೆ ಇದೆ ಎಂದರು.
Advertisement