Advertisement
ಅವರು ಶುಕ್ರವಾರ ಮಣಿಪಾಲ ಅನಂತನಗರದ ರೋಟರಿ ಭವನದಲ್ಲಿ ನಡೆದ ನಗರಸಭಾ ವ್ಯಾಪ್ತಿಯ ಮಣಿಪಾಲ ವಾರ್ಡ್ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಾನು ಶಾಸಕನಾಗುವ ಮೊದಲು ಉಡುಪಿ ಕೇÒತ್ರದ ಜನತೆಗೆ 24 ಗಂಟೆ ನೀರು ಮತ್ತು ವಿದ್ಯುತ್ತನ್ನು ಕೊಡುವ ಭರವಸೆ ನೀಡಿದ್ದೆ. ಅದರಂತೆ ಇದೀಗ ದಿನದ 24 ಗಂಟೆ ನಿರಂತರ ವಿದ್ಯುತ್ತನ್ನು ಕೊಡುವ ಮೂಲಕ ಉಡುಪಿ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಂತೆ ಎ. 29ರಿಂದ ಜೂ. 10ರ ವರೆಗೆ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಬರಿದಾಗಿದ್ದ ಸಂದರ್ಭದಲ್ಲಿ 45 ದಿವಸ 30 ಸಾವಿರ ಮನೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿವಿಧ ಮೂಲಗಳಿಂದ ನೀರು ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕೆ ಸುಮಾರು 1 ಕೋಟಿ ರೂ. ವೆಚ್ಚ ತಗಲಿದೆ. ಇದು ಜನರ ಹಿತದೃಷ್ಟಿಯಿಂದ ಸರಕಾರ, ನಗರಾಡಳಿತ ಜವಾಬ್ದಾರಿಯೂ ಆಗಿದೆ ಎಂದರು. ಒಳಚರಂಡಿ ಮತ್ತು ಕುಡಿಯುವ ನೀರು ಯೋಜನೆಗೆ ಕುಡ್ಸೆಂಪ್‌ನಿಂದ 370 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದಾರೆ ಎಂದರು.
ಅಂಗವಿಕಲ ವೇತನ, ವಿಧವಾ ವೇತನ, ಮನಸ್ವಿನಿ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ನಗರಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಣಿಪಾಲ ವಾರ್ಡ್‌ನ ನಗರಸಭಾ ಸದಸ್ಯ ನರಸಿಂಹ ನಾಯಕ್, ನಾರಾಯಣ ಪಿ. ಕುಂದರ್, ಗಣೇಶ್ ನೆರ್ಗಿ, ಜನಾರ್ದನ ಭಂಡಾರ್‌ಕರ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಡಿವೈಎಸ್ಪಿ ಕುಮಾರಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು. ನಗರಸಭಾ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು. ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಬಸ್ ರೂಟ್ ರಾಷ್ಟ್ರೀಕರಣ ?
ನರ್ಮ್ ಬಸ್ಸನ್ನು ವಿಶೇಷ ರಿಯಾಯಿತಿ ದರದಲ್ಲಿ ಹಿರಿಯ ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಡವರಿಗಾಗಿ ಉಪಯೋಗವಾಗುವಂತೆ ತರಲಾಗಿದೆ. ಆದರೆ ಖಾಸಗಿ ಬಸ್ಸಿನವರು ಮಾತ್ರ ಇದಕ್ಕೆ ತೀವ್ರ ವಿರೋಧ ಮಾಡುತ್ತಿದ್ದಾರೆ. ಖಾಸಗಿಯವರ ವಿರೋಧ ಜಾಸ್ತಿಯಾದ ಹಿನ್ನೆಲೆಯಲ್ಲಿ ಈಗಾಗಲೇ ಯಾರೋ ಒಬ್ಬರು ಉಡುಪಿ ಜಿಲ್ಲೆಯನ್ನು ರಾಷ್ಟ್ರೀಕರಣ ಮಾಡಿ ಎಂದು ಮನವಿಯನ್ನು ಕೂಡ ನೀಡಿದ್ದರು. ಹಾಗಾಗಿ ಸರಕಾರಕ್ಕೆ ಸವಾಲು ಹಾಕುವ ಕೆಲಸಕ್ಕೆ ಖಾಸಗಿ ಬಸ್ ಮಾಲಕರು ಬರಬಾರದು. ಖಾಸಗಿ ಬಸ್ಸಿನವರು ಸರಕಾರದ ಮುಂದೆ ಆಟವಾಡಲು ಬಂದರೆ ಸರಕಾರಕ್ಕೂ ಏನು ಮಾಡಬೇಕು ಎಂದು ಗೊತ್ತಿದೆ ಎಂದರು.