Advertisement
ಮಣಿಪಾಲ ಪದವಿ ಪೂರ್ವ ಕಾಲೇಜಿನ (ಎಂಜೆಸಿ) ಅಮೃತ ಮಹೋತ್ಸವ ಸಂಭ್ರಮ “ಅಮೃತ ಸಿಂಚನ’ದ ಅಂಗವಾಗಿ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸಮಗ್ರ ಬದುಕನ್ನು ಕಾಣಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಶಿಕ್ಷಣ ಕಲಿತಾಗ ಸಮರ್ಥ ಪ್ರಜೆಯಾಗಿ ಮೂಡಿಬರಲು ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್, ಟಿವಿ, ಇಂಟರ್‌ನೆಟ್‌ಗಳನ್ನು ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಬಳಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಪಾಲಕರು ವಿದ್ಯಾರ್ಥಿಗಳ ಮೇಲೆ ನಿರಂತರ ಗಮನಹರಿಸಿ ಅವರ ಭವಿಷ್ಯಕ್ಕೆ ದಾರಿ ಕೊಡಬೇಕಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ ಶಿಕ್ಷಣದ ಅಗತ್ಯವಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಬಂಧ ಉಳಿಸುವ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಪ್ರಾಂಶುಪಾಲೆ ರೂಪಾ ಎಲ್. ಭಟ್ ಪ್ರಸ್ತಾವನೆಗೈದರು. ಎನ್.ಆರ್. ದಾಮೋದರ ಶರ್ಮ ಬಾರಕೂರು ನಿರೂಪಿಸಿದರು. ಉಪಪ್ರಾಂಶುಪಾಲೆ ಅನಿತಾ ಮಲ್ಯ ಎಚ್. ವಂದಿಸಿದರು. ಉಪನ್ಯಾಸಕ ಪ್ರಭಾಕರ ಭಂಡಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಗೌರವ ಸಮರ್ಪಣೆ
ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲರು/ಉಪಪ್ರಾಂಶುಪಾಲರಾದ ಎಂ. ನಾರಾಯಣ ಭಟ್, ದಯಾನಂದ ನಾಯಕ್, ಪಿ.ಡಿ. ಪೂಜಾರಿ, ಇಂದಿರಾ ಎನ್. ರಾವ್, ಪಿ.ಜಿ. ಪಂಡಿತ್, ವೇದಾವತಿ, ನಿವೃತ್ತ ಉಪನ್ಯಾಸಕರು/ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಎಸ್. ಶ್ರೀನಿವಾಸ ಅಡಿಗ, ಡಿ. ಪರಮೇಶ್ವರಪ್ಪ, ಎಲ್ವಿರಾ ಡಿ’ಸೋಜಾ, ಸೀತಾರಾಮ ಜಿ. ಹೆಗ್ಡೆ, ಮಾಲತಿ ರಾವ್, ಮೋಹನದಾಸ ಶೆಟ್ಟಿ, ಎಂ. ಸುನಂದಾ, ಗುಲಾಬಿ, ಶಾರದಾ, ಬೋಧಕೇತರ ಸಿಬಂದಿ, ದಾನಿಗಳು, 48 ವರ್ಷಗಳಿಂದ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಡಾ| ಟಿಎಂಎ ಪೈ ಮತ್ತು ರಮೇಶ್ ಯು. ಪೈ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಸಲ್ಲಿಸಿದರು.