Advertisement

Manipal: ಮಾಹೆ ವಿಶ್ವ ವಿದ್ಯಾಲಯದಲ್ಲಿ ಮಹಿಳಾ ಟೆನಿಸ್‌ ಪಂದ್ಯಾವಳಿ ಆಯೋಜನೆ

02:44 AM Dec 05, 2024 | Team Udayavani |

ಮಣಿಪಾಲ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹ ಯೋಗದಲ್ಲಿ ಮಣಿಪಾಲದ ಮಾಹೆ ವಿ.ವಿ. ದಕ್ಷಿಣ ವಲಯ ಮತ್ತು ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಟೆನಿಸ್‌ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ತಿಳಿಸಿದರು.

Advertisement

ಡಿ. 7ರಿಂದ 10ರ ವರೆಗೆ ದಕ್ಷಿಣ ವಲಯ ಪಂದ್ಯಾವಳಿ ನಡೆಯಲಿದೆ. ದಕ್ಷಿಣ ವಲಯ ಸೇರಿದಂತೆ ನಾಲ್ಕು ವಲಯಗಳಲ್ಲಿ ವಿಜೇತ ತಂಡಗಳಿಗೆ ಡಿ. 13ರಿಂದ 16ರ ವರೆಗೆ ಅಖೀಲ ಭಾರತ ಅಂತರ್‌ ವಿ.ವಿ. ಪಂದ್ಯಾವಳಿ ನಡೆಯಲಿದೆ. ದೇಶದ ವಿವಿಧ ಭಾಗದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ 300ಕ್ಕೂ ಅಧಿಕ ಮಹಿಳಾ ಟೆನಿಸ್‌ ಆಟಗಾರ್ತಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾಹೆ, ಎಂಐಟಿ, ಕೆಎಂಸಿ ಹಾಗೂ ಮರೇನಾದಲ್ಲಿರುವ ಒಟ್ಟು 6 ಟೆನಿಸ್‌ ಕೋರ್ಟ್‌ಗಳಲ್ಲಿ ಪಂದ್ಯಾಟ ನಡೆಯಲಿದೆ. ದಕ್ಷಿಣ ವಲಯ ಪಂದ್ಯಾಟದಲ್ಲಿ 38 ತಂಡ ಗಳು ಭಾಗವಹಿಸಲಿದ್ದು, ಇದರಲ್ಲಿ ಮಾಹೆ ತಂಡವೂ ಆಡಲಿದೆ. ಇಲ್ಲಿ ವಿಜೇತರಾದವರು ಅಖೀಲ ಭಾರತ ಮಟ್ಟದ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ವಲಯದ 4 ತಂಡಗಳಂತೆ 16 ತಂಡಗಳು ಪಾಲ್ಗೊಳ್ಳಲಿದೆ. ಸಿಂಗಲ್‌, ಡಬಲ್ಸ್‌ ಹಾಗೂ ನಾಲ್ವರು… ಹೀಗೆ 3 ವಿಭಾಗದಲ್ಲಿ ಪಂದ್ಯ ನಡೆಯಲಿದೆ ಎಂದು ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next