Advertisement

ಮಣಿಪಾಲ ಲ್ಯಾಬ್‌: ಹೊಸ ಯಂತ್ರ ಅಳವಡಿಕೆ

09:39 AM May 28, 2020 | sudhir |

ಉಡುಪಿ : ಕೋವಿಡ್ ಶಂಕಿತರ ಗಂಟಲದ್ರವ ಪರೀಕ್ಷೆಯ ವೇಗವನ್ನು ಹೆಚ್ಚಿಸಲು ಅನುಕೂಲವಾಗುವ ಹೊಸ ಎರಡು ಸ್ವಯಂಚಾಲಿತ ಯಂತ್ರಗಳನ್ನು ಈಗಾಗಲೇ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಅಳವಡಿಸಲಾಗಿದೆ. ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಇದರ ಕಾರ್ಯಾರಂಭವಾಗಲಿದೆ.

Advertisement

ಪ್ರಯೋಗಾಲಯವು ಮೇ 19ರಂದು ಕಾರ್ಯಾರಂಭವಾಗಿದ್ದು ಈಗಾಗಲೇ ಸುಮಾರು 900 ಮಾದರಿಗಳನ್ನು ಪರೀಕ್ಷಿಸಿ ವರದಿ ನೀಡಲಾಗಿದೆ. ಉಡುಪಿ ಜಿಲ್ಲೆ ಮಾದರಿಗಳ ಸಂಗ್ರಹದಲ್ಲಿ ಮುಂದೆ ಇದೆ. ಹೀಗಾಗಿ ಮಣಿಪಾಲ ಪ್ರಯೋಗಾಲಯದ ಮೇಲೆ ಒತ್ತಡ ಹೆಚ್ಚಿಗೆ ಇದೆ. ಇದರ ಜತೆ ಉತ್ತರ ಕನ್ನಡ ಜಿಲ್ಲೆಯ ಮಾದರಿಗಳೂ ಬರುತ್ತಿವೆ.

ಹೈ ರಿಸ್ಕ್- ಲೋ ರಿಸ್ಕ್ ವರ್ಗೀಕರಣ
ಹೈ ರಿಸ್ಕ್ ಮತ್ತು ಲೋ ರಿಸ್ಕ್ ಶಂಕಿತರನ್ನು ಎರಡು ರೀತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಹೈ ರಿಸ್ಕ್ ವ್ಯಕ್ತಿಗಳು ಪ್ರಾಥಮಿಕ ಸಂಪರ್ಕದವರಾದರೆ, ಲೋ ರಿಸ್ಕ್ ನವರು ದ್ವಿತೀಯ ಸಂಪರ್ಕದವರು. ಲೋ ರಿಸ್ಕ್ ನವರ ಮಾದರಿಗಳನ್ನು ಗುಂಪು ಗುಂಪಾಗಿ ಅಂದರೆ 5- 10 ಮಾದರಿಗಳನ್ನು ಏಕಕಾಲದಲ್ಲಿ ಪರೀಕ್ಷಿಸಲು ಸಾಧ್ಯವಾಗುತ್ತದೆ.

ಗುಂಪಿನಲ್ಲಿ ಎಲ್ಲಿಯಾದರೂ ಒಂದು ಪಾಸಿಟಿವ್‌ ಬಂದರೂ ಉಳಿದುದೆಲ್ಲವನ್ನೂ ಒಂದೊಂದಾಗಿ ಪರೀಕ್ಷಿಸಬೇಕಾಗುತ್ತದೆ. ಹೈ ರಿಸ್ಕ್ ಮತ್ತು ಲೋ ರಿಸ್ಕ್ ವರ್ಗೀಕರಣವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿಯೇ ಪ್ರಯೋಗಾಲಯಕ್ಕೆ ಕಳುಹಿಸುತ್ತದೆ.

ಈಗಾಗಲೇ ನಮ್ಮ ಪ್ರಯೋಗಾಲಯದ ಸಾಮರ್ಥ್ಯ ವನ್ನು ಹೆಚ್ಚಿಸಲಾಗಿದೆ. ಬುಧವಾರ ಸುಮಾರು 300 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಂದೆರಡು ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯ ವೃದ್ಧಿಯಾಗಲಿದೆ. ಅನಂತರ ನಮಗೆ ಬಂದ ಮಾದರಿಗಳನ್ನು ಬಹಳ ತ್ವರಿತಗತಿಯಲ್ಲಿ ಪರೀಕ್ಷಿಸುತ್ತೇವೆ.
– ಡಾ|ಅವಿನಾಶ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next