- ತಿಳಿದವರ ಕೈವಾಡ?
ಉಡುಪಿ: ಸೂಪರ್ ಮಾರ್ಕೆಟ್‌ವೊಂದಕ್ಕೆ ನುಗ್ಗಿದ ಇಬ್ಬರು ಆಗಂತುಕರು ಪಿಸ್ತೂಲ್ ತೋರಿಸಿ, ತಲವಾರು ಝಳಪಿಸಿ ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಘಟನೆ ಸೋಮವಾರ ಬೆಳಗ್ಗಿನ ಜಾವ ಮಣಿಪಾಲ ಸಮೀಪದ ಲಕ್ಷ್ಮೀಂದ್ರ ನಗರದ ಶೀರೂರು ಟವರ್ನಲ್ಲಿರುವ “ಮೋರ್-ಫಾರ್ ಯೂ’ ಮಳಿಗೆಯಲ್ಲಿ ಸಂಭವಿಸಿದೆ.
Advertisement
ಸೋಮವಾರ ಬೆಳಗ್ಗೆ 6.30ರ ವೇಳೆಗೆ ಎಂದಿನಂತೆ “ಮೋರ್-ಫಾರ್ ಯೂ’ ಸೂಪರ್ ಮಾರ್ಕೆಟ್‌ನ ಸ್ಟೋರ್ ಮ್ಯಾನೇಜರ್ ಪ್ರವೀಣ್ ಮಳಿಗೆಯನ್ನು ತೆರೆದಿದ್ದು, ಅದಾಗಿ ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಸ್ಕೂಟಿಯಲ್ಲಿ ಬಂದ ಇಬ್ಬರು ಅಲ್ಲಿದ್ದ ಪ್ರವೀಣ್ ಮೇಲೆ ತಲವಾರಿನಿಂದ ಹಲ್ಲೆಗೈದು ಕ್ಯಾಶ್ ಡ್ರಾವರ್‌ನಲ್ಲಿದ್ದ ಹಣ ಹಾಗೂ ವೋಚರ್ ಸೇರಿ ಒಟ್ಟು 2.95 ಲ.ರೂ. ದೋಚಿ ಪರಾರಿಯಾಗಿದ್ದಾರೆ. ಈ ವೇಳೆ ಪ್ರವೀಣ್ ಕಿವಿಗೆ ಗಾಯವಾಗಿದೆ.
ಸ್ಕೂಟಿಯಲ್ಲಿ ಬಂದ ಇಬ್ಬರು ದರೋಡೆಧಿಕೋರರು ಜರ್ಕಿನ್ ಹಾಗೂ ಹೆಲ್ಮೆಟ್ ಧರಿಸಿಧಿದ್ದರು. ಇದರಿಂದ ಅಲ್ಲಿದ್ದ ಪ್ರವೀಣ್‌ಗೆ ಅವರ ಪರಿಚಯಧಿವಾಗಿಲ್ಲ. ಪಿಸ್ತೂಲ್ ತೋರಿಸಿ, ತಲವಾರಿಧಿನಿಂದ ಹಲ್ಲೆಗೈದು ಕ್ಯಾಶ್ ಡ್ರಾವರ್ ಅನ್ನು ಮುರಿದು ಹಣವನ್ನು ದೋಚಿ ಉಡುಪಿ ಕಡೆಗೆ ಪರಾರಿಯಾಗಿದ್ದಾರೆ. ದರೋಡೆಕೋರರು ಸುಮಾರು 30ರಿಂದ 35 ವರ್ಷದವರಾಗಿದ್ದು, ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಸ್ಟೋರ್ ಮ್ಯಾನೇಜರ್ ತಿಳಿಸಿದ್ದಾರೆ ತಿಳಿದವರ ಕೃತ್ಯ?
ಇದು ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ಮೋರ್‌ನಲ್ಲಿ ಕಾರ್ಯ ನಿರ್ವಹಿಸುವ ಸಿಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಮೋರ್ ಮಳಿಗೆ ಬಗ್ಗೆ ತಿಳಿದವರೇ ಮಾಡಿರುವ ಕೃತ್ಯ ಇದಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ನಡುವೆ ಮಳಿಗೆಯಲ್ಲಿ ಕಾರ್ಯನಿರ್ವಹಿಸುವ ಒಳಗಿನವರೇ ಕೃತ್ಯದಲ್ಲಿ ಭಾಗಿಯಾಗಿದ್ದರೇ ಅಥವಾ ನೆರವಾಗಿದ್ದಾರೆಯೇ ಎನ್ನುವ ಅನುಮಾನ ಕೂಡ ಮೂಡಿದೆ. ಈ ಬಗ್ಗೆ ಅಲ್ಲಿನ ಸಿಬಂದಿ ಕೂಡ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದು ಇದು ಕೂಡ ಅನುಮಾನ ಬರುವಂತೆ ಮಾಡಿದೆ. ಈ ಬಗ್ಗೆ ಸಿಬಂದಿ ಬಳಿ ಕೇಳಿದ್ದಕ್ಕೆ ಮೇಲಧಿಕಾರಿಗಳು ನಮಗೆ ಯಾರಿಗೂ ಮಾಹಿತಿ ನೀಡಬಾರದು ಎನ್ನುವ ನಿರ್ದೇಶನ ಬಂದಿದೆ ಎನ್ನುತ್ತಾರೆ.
Related Articles
ಶನಿವಾರ ಮತ್ತು ರವಿವಾರ ಬ್ಯಾಂಕ್‌ಗೆ ರಜೆ ಇದ್ದುದರಿಂದ ಶುಕ್ರವಾರದ ವ್ಯಾಪಾರದ ಹಣ ಸಹಿತ ಮೂರು ದಿನಗಳ ವಹಿವಾಟಿನ ಹಣವೆಲ್ಲ ಮಳಿಗೆಯಲ್ಲಿಯೇ ಇರುವುದು ಗೊತ್ತಿದ್ದವರೇ ಈ ಕೃತ್ಯ ನಡೆಸಿರುವ ಸಂಶಯ ಇದೆ.
Advertisement
ಸಿಸಿಟಿವಿ ಇರಲಿಲ್ಲಮೋರ್ ಒಂದು ಬೃಹತ್ ಸೂಪರ್ ಮಾರ್ಕೆಟ್ ಅಗಿದ್ದು, ಬೇರೆ ಬೇರೆ ಕಡೆ ಇದರ ಮಳಿಗೆಗಳು ಇವೆ. ಹೆಚ್ಚಿನ ಎಲ್ಲ ಕಡೆಗಳಲ್ಲಿ ಮೋರ್ ಮಳಿಗೆಯ ಒಳಗೆ ಸಿಸಿಟಿವಿ ಇರುತ್ತವೆ. ವಿಶೇಷವೆಂದರೆ ಕಳವಾದ ಲಕ್ಷ್ಮೀಂದ್ರ ನಗರದ ಮೋರ್ ಮಳಿಗೆಯಲ್ಲಿ ಸಿಸಿಟಿವಿ ಇರಲಿಲ್ಲ. ಮೂರು ತನಿಖಾ ತಂಡ ರಚನೆ
ಪ್ರಕರಣ ಸಂಬಂಧ ಈಗಾಗಲೇ ಡಿವೈಎಸ್‌ಪಿ ಕುಮಾರಸ್ವಾಮಿ ನೇತೃತ್ವದಲ್ಲಿ 3 ತನಿಖಾ ತಂಡಗಳನ್ನು ರಚಿಸಲಾಗಿದೆ. ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಕಟ್ಟಡದ, ಅಕ್ಕಪಕ್ಕ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ಮುಂದುವರಿಸಿದ್ದಾರೆ. ಆ ಮಳಿಗೆಯ ಮ್ಯಾನೇಜರ್, ಸಿಬಂದಿ ಮೇಲೂ ಅನುಮಾನಗಳಿದ್ದು, ಅವರ ಮೇಲೂ ತನಿಖೆಯನ್ನು ನಡೆಸಲಾಗುತ್ತಿದೆ. ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹೇಳಿದ್ದಾರೆ.