Advertisement

ಮಣಿಪಾಲ MIC ಪ್ರಾಯೋಜಕತ್ವದ ನಮ್ಮ ಅಂಗಡಿ ಮೇಳ: ಏ.9, 10 ಮತ್ತು 11ರಂದು ಆನ್ ಲೈನ್ ಸೇಲ್

11:10 AM Apr 06, 2021 | Team Udayavani |

ಮಣಿಪಾಲ: ಕಳೆದ ಎರಡು ದಶಕಗಳಿಂದ ಮಣಿಪಾಲದ ಎಂಐಸಿ  ವಿದ್ಯಾರ್ಥಿಗಳ ಅವಿಭಾಜ್ಯ ಪಾಲ್ಗೊಳ್ಳುವಿಕೆ ಮೂಲಕ ಪ್ರತಿ ವರ್ಷ “ನಮ್ಮ ಅಂಗಡಿ” ಎಂಬ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನ ನಡೆಯುತ್ತಿದ್ದು, ಈ ವರ್ಷ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಏಪ್ರಿಲ್ 9, 10 ಮತ್ತು 11ರಂದು ಆನ್ ಲೈನ್ ಶಾಪಿಂಗ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ನಮ್ಮ ಅಂಗಡಿಯ 17ನೇ ವರ್ಷದ ಮಾರಾಟ ಮೇಳವನ್ನು ಮಣಿಪಾಲದ ಎಂಐಸಿಯ 2ನೇ ವರ್ಷದ ವಿದ್ಯಾರ್ಥಿಗಳ ನೆರವಿನೊಂದಿಗೆ ಆನ್ ಲೈನ್ ಶಾಪಿಂಗ್ ನಡೆಯಲಿದ್ದು, ನಿಮ್ಮ ಮನೆ ಹಾಗೂ ಅಂಗಡಿಗಳಿಗೆ ಬೇಕಾದ ಕರಕುಶಲ ವಸ್ತುಗಳು, ಮಹಿಳೆಯರು ಮತ್ತು ಪುರುಷರಿಗೆ ಬೇಕಾದ ಕೈಮಗ್ಗದ ಬಟ್ಟೆಗಳು, ಪುಸ್ತಕಗಳು, ಬ್ಯಾಗ್ ಸೇರಿದಂತೆ ವಿವಿಧ ಗೃಹಬಳಕೆ ವಸ್ತುಗಳು ನಮ್ಮಲ್ಲಿ ಖರೀದಿಸಬಹುದಾಗಿದೆ ಎಂದು ಎಂಐಸಿ ನಿರ್ದೇಶಕಿ ಡಾ.ಪದ್ಮರಾಣಿ ತಿಳಿಸಿದ್ದಾರೆ.

ದೇಶಾದ್ಯಂತ ಕೋವಿಡ್ 2ನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ನಮ್ಮ ಅಂಗಡಿ ಈ ಬಾರಿ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. ಈ ಮೇಳದ ಪ್ರಾಮುಖ್ಯತೆ ಬಗ್ಗೆ ತಿಳಿದಿದೆ. ನಮ್ಮ ಅಂಗಡಿ ಮೇಳದ ಜತೆ ಭಾವನಾತ್ಮಕ ಸಂಬಂಧವೂ ಇದೆ. ಆದರೆ ಕೋವಿಡ್ ಪ್ರಕರಣ ದಿನೇ, ದಿನೇ ಹೆಚ್ಚಳವಾಗುತ್ತಿದ್ದ ಪರಿಣಾಮ ನೇರ ಮಾರಾಟ ಮೇಳವನ್ನು ಆಯೋಜಿಸುವ ಯೋಜನೆ ಕೈಬಿಟ್ಟು, ಆನ್ ಲೈನ್ ಮಾರಾಟಕ್ಕೆ ಒತ್ತು ನೀಡಿರುವುದಾಗಿ ನಮ್ಮ ಅಂಗಡಿ ಪ್ರಾಜೆಕ್ಟ್ ಮ್ಯಾನೇಜರ್ ನೈರಿಕಾ ಗುಹಾ ರಾಯ್ ತಿಳಿಸಿದ್ದಾರೆ.

ಏಪ್ರಿಲ್ 9, 10 ಮತ್ತು 11ರಂದು ಆನ್ ಲೈನ್ ಸೇಲ್ ಜತೆಗೆ ಈ ಮೂರು ದಿನಗಳ ಕಾಲ ನಮ್ಮ ಭೂಮಿ ಕುಂದಾಪುರ ನೇರ ಮಾರಾಟ ಮೇಳವನ್ನು ಆಯೋಜಿಸಿದ್ದು, ಇಲ್ಲಿಯೂ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಹೇಳಿದೆ.

ಕಳೆದ 17 ವರ್ಷಗಳಿಂದ ನಮ್ಮ ಅಂಗಡಿ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳುತ್ತಿದ್ದು, ಸಾಮಾಜಿಕ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿಯೂ ಸಂವೇದನೆ ಬೆಳೆಸುವುದು, ನಮ್ಮ ಭೂಮಿಯ ಮಕ್ಕಳು ಹಾಗೂ ಇತರ ಕರಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಜತೆಗೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಜ್ಞಾನ ಒದಗಿಸುವ ಉದ್ದೇಶದಿಂದ ಇಂತಹ ಪ್ರದರ್ಶನ ಆಯೋಜಿಸಲಾಗುತ್ತಿತ್ತು ಎಂದು ತಿಳಿಸಿದೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದೇಶಾದ್ಯಂತ ಲಭ್ಯವಾಗುವಂತೆ ಮೂರು ದಿನಗಳ ಕಾಲ ಆನ್ ಲೈನ್ ಸೇಲ್ ನಡೆಯಲಿದೆ. ಇದರಿಂದ ಬಂದ ಲಾಭವನ್ನು ನಮ್ಮ ಅಂಗಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತದೆ. #ವೋಕಲ್ ಫಾರ್ ಲೋಕಲ್ ಧ್ಯೇಯೋದ್ದೇಶದ ನಮ್ಮ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮನ್ನು ಬೆಂಬಲಿಸಿ. ಇದಕ್ಕಾಗಿ ನಮ್ಮ ಅಂಗಡಿ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಿ “ಮೆಗಾ ಸೇಲ್ “ ನಲ್ಲಿ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸುವಂತೆ ನಮ್ಮ ಅಂಗಡಿ ಬಳಗ ಮನವಿ ಮಾಡಿಕೊಂಡಿದೆ.

ನಮ್ಮಂಗಡಿಯಲ್ಲಿ ಏನೇನಿವೆ?

ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕಲಾಕೃತಿಗಳು, ಬೆಡ್‌ಶೀಟ್‌, ಅಲಂಕಾರಿಕ ವಸ್ತುಗಳು, ರೆಡಿಮೇಡ್‌ ಬಟ್ಟೆಗಳು, ಆಹಾರ ತಿನಿಸುಗಳು, ನೂತನ ಟ್ರೆಂಡ್‌ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಆಭರಣಗಳು ಹೀಗೆ ವಿವಿಧ ವಸ್ತುಗಳು ಆನ್ ಲೈನ್ ನಲ್ಲಿ ಲಭ್ಯವಿದೆ.

ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಸೇಲ್:

ಗ್ರಾಹಕರು ಏಪ್ರಿಲ್ 9, 10, ಮತ್ತು 11ರಂದು ನಮ್ಮ ಅಂಗಡಿಯ ಫೇಸ್ ಬುಕ್, ಇನ್ಸ್ ಟಾಗ್ರಾಮ್ ಮತ್ತು ವಾಟ್ಸಪ್ ಮೂಲಕ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ವಸ್ತುಗಳನ್ನು ಆರ್ಡರ್ ಮಾಡಬಹುದು. ನೀವು ಖರೀದಿಸಿದ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಾಟ್ಸಪ್ ನಂಬರ್: 8861238691

Advertisement

Udayavani is now on Telegram. Click here to join our channel and stay updated with the latest news.

Next