Advertisement

Manipal Marathon 2024: ನೋಂದಣಿ ಪ್ರಕ್ರಿಯೆ ಆರಂಭ

11:34 PM Nov 07, 2023 | Team Udayavani |

ಮಣಿಪಾಲ: ಮಾಹೆ ವಿ.ವಿ.ಯ ಆಶ್ರಯದಲ್ಲಿ ನಡೆಯಲಿರುವ ಮಣಿಪಾಲ ಮ್ಯಾರಥಾನ್‌ 6ನೇ ಆವೃತ್ತಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

Advertisement

ಗಂಭೀರ ಕಾಯಿಲೆಗಳಿಂದ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಆರೈಕೆಯ ವಿಶ್ರಾಂತಿ ಗೃಹದ (ಹಾಸ್ಪೈಸ್‌ ಕೇರ್‌) ಕುರಿತ ಅರಿವು ಮೂಡಿಸುವ ಉದ್ದೇಶವನ್ನು ಮಣಿಪಾಲ ಮ್ಯಾರಥಾನ್‌ ಹೊಂದಿದೆ. ದೇಶ ವಿದೇಶದಿಂದ ಸುಮಾರು 15 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

2024ರ ಫೆ.11ರ ಬೆಳಗ್ಗೆ ಮ್ಯಾರಥಾನ್‌ ಸ್ಪರ್ಧೆ ಮಣಿಪಾಲದಲ್ಲಿ ಆರಂಭವಾಗಲಿದೆ. https://manipalmarathon.in/ ಮೂಲಕ ನೋಂದಣಿ ಮಾಡಬಹುದು. ಜಾಗತಿಕ ಮಟ್ಟದ ಓಟದ ಅನುಭವ ವನ್ನು ಖಾತರಿ ಪಡಿಸುವ ಐಐಎಎಫ್‌, ಎಐಎಂಎಸ್‌ನಿಂದ ಅಂತಾರಾಷ್ಟ್ರೀಯ ದೃಢೀಕರಣ, ಓಟದ ಬಳಿಕ ಉತ್ಸವದ ಸಾಮೂಹಿಕ ಚೈತನ್ಯದ ಸಂಭ್ರಮ, ವಿಭಿನ್ನ ವಿಭಾಗಗಳನ್ನು ಪೂರ್ಣಗೊಳಿಸಿದವರಿಗೆ ಆಕರ್ಷಕ ಬಹುಮಾನ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next