Advertisement

ಮಣಿಪಾಲ ಮಾಹೆ: ದಾನ್‌ ಉತ್ಸವ

12:48 AM Oct 01, 2021 | Team Udayavani |

ಉಡುಪಿ: ಮಣಿಪಾಲ ಮಾಹೆ ವಿ.ವಿ.ಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ದಾನ್‌ ಉತ್ಸವ ಹಮ್ಮಿಕೊಳ್ಳಲಾಗಿದೆ.

Advertisement

ಮಾಹೆ ಕಳೆದ 10 ವರ್ಷಗಳಿಂದ ಈ ಉತ್ಸವವನ್ನು ಆಚರಿಸುತ್ತಿದ್ದು, ಡಾ| ಅನುಪ್‌ ನಾಹಾ ಅವರ ನಾಯಕತ್ವದಲ್ಲಿ ಎಲ್ಲ ಸಹಸಂಸ್ಥೆಗಳೊಂದಿಗೆ ಈ ಆಚರಣೆಯನ್ನು ನಡೆಸಲಾಗುತ್ತಿದೆ. ಸಮುದಾಯ ಸೇವೆಯನ್ನು ಹೇಗೆ ರಚನಾತ್ಮಕ ರೀತಿಯಲ್ಲಿ ಪಠ್ಯ

ಕ್ರಮದ ಭಾಗವಾಗಿ ಸೇರಿಸಿಕೊಳ್ಳಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿ ಈ ಉತ್ಸವವನ್ನು ವಿ.ವಿ.ಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಸಹ ವಿ.ವಿ.ಗಳಾದ ಮಣಿಪಾಲ ವಿ.ವಿ. ಜೈಪುರ, ಸಿಕ್ಕಿಂ ಮಣಿಪಾಲ ವಿ.ವಿ.ಯಲ್ಲೂ ಆಚರಿಸಲಾಗುತ್ತದೆ.

ಈ ವರ್ಷ 45ಕ್ಕೂ ಹೆಚ್ಚು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮಾಹೆಯ ವಿವಿಧ ಸಂಸ್ಥೆಗಳು ಅ. 2ರಿಂದ 8ರ ನಡುವೆ ಕಾರ್ಯಗತ ಗೊಳಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ವಸ್ತ್ರದಾನ, ಜ್ಞಾನದಾನ, ರಕ್ತದಾನ, ಅನ್ನದಾನ, ಶೂ ಕಲೆಕ್ಷನ್‌ ಡ್ರೈವ್‌, ಸ್ಟೇಷನರಿ ಡ್ರೈವ್‌, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಒಳಗೊಂಡಿವೆ.

ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಅವರು, ಈ ವರ್ಷ ಮಾಹೆ ವಿ.ವಿ. ಸಹಯೋಗದಲ್ಲಿ ರೋಟರಿ ಕ್ಲಬ್‌ ಮಣಿಪಾಲ ಟೌನ್‌ ಸಂಗ್ರಹಿಸಿದ ನಿಧಿಯೊಂದಿಗೆ ಬಡ ಮಕ್ಕಳ ಕ್ಯಾನ್ಸರ್‌ ರೋಗ ಚಿಕಿತ್ಸೆಗಾಗಿ ಹಣ ನೀಡಲು ನಿರ್ಧರಿಸಿರುವುದು ಸಂತೋಷದ ವಿಚಾರ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next