Advertisement

ಮಣಿಪಾಲ ಕೆಎಂಸಿಯಲ್ಲಿ ಎಂಡೋಸ್ಕೋಪಿ ಸ್ಪಾಂಜ್‌ ಚಿಕಿತ್ಸೆ : ಇದು ರಾಜ್ಯದಲ್ಲೇ ಮೊದಲು

02:21 PM Oct 08, 2022 | Team Udayavani |

ಮಣಿಪಾಲ : ಇಲ್ಲಿನ ಕೆಎಂಸಿ ಮತ್ತು ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಅನ್ನನಾಳದ ರಂಧ್ರಕ್ಕೆ ಮತ್ತು ಅನಾಸ್ಟೊಮೊಟಿಕ್‌ ಸೋರಿಕೆ ಸಮಸ್ಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್‌ (ಎಂಡೋವಾಕ್‌) ಚಿಕಿತ್ಸೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದೆ.

Advertisement

ಶಸ್ತ್ರಚಿಕಿತ್ಸಾ ಅನಾಸ್ಟೊಮೊಸಿಸ್‌ ವಿಫಲವಾದಾಗ ಮತ್ತು ಶಸ್ತ್ರಚಿಕಿತ್ಸಾ ಸಂಪರ್ಕದಿಂದ ಮರುಸಂಪರ್ಕಿತ ದೇಹದ ಚಾನಲ್‌ನ ವಿಷಯ ಗಳು ಸೋರಿಕೆಯಾದಾಗ ಅನಾಸ್ಟೊ ಮೊಟಿಕ್‌ ಸೋರಿಕೆ ಸಂಭವಿಸುತ್ತದೆ. ಇದು ಕರುಳಿನ ಛೇದನದ ಶಸ್ತ್ರ ಚಿಕಿತ್ಸೆಯ ಅತ್ಯಂತ ಗಂಭೀರ ತೊಡಕುಗಳಲ್ಲಿ ಒಂದಾಗಿದೆ.

51 ವರ್ಷದ ವ್ಯಕ್ತಿಗೆ ಅನ್ನನಾಳದ ಕ್ಯಾನ್ಸರ್‌ ಇರುವುದು ಪತ್ತೆಯಾದ ಅನಂತರ ಶಸ್ತ್ರಚಿಕಿತ್ಸೆ ನಡೆಸಿ, ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಲಾಯಿತು. ಒಂದು ವಾರದ ಅನಂತರ ಅವರಲ್ಲಿ ಅನಾಸ್ಟೊಮೊಟಿಕ್‌ ಡಿಹಿಸೆನ್ಸ್‌ ನೊಂದಿಗೆ ಮೆಡಿಯಾಸ್ಟಿನಿಟಿಸ್‌ ವೃದ್ಧಿಯಾಯಿತು. ಇದನ್ನು ಸರಿಪಡಿ ಸಲು ವೈದ್ಯರು ಮತ್ತೂಂದು ಶಸ್ತ್ರ ಚಿಕಿತ್ಸೆಯ ಆವಶ್ಯಕತೆಯ ಬಗ್ಗೆ ಆಲೋಚಿಸಿದರು. ಆದರೆ ರೋಗಿಯ ಸಾಮಾನ್ಯ ಸ್ಥಿತಿಯು ಮತ್ತೂಂದು ಶಸ್ತ್ರಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಇರಲಿಲ್ಲ.

ಇದಕ್ಕೆ ಪ್ರತಿಯಾಗಿ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ| ಶಿರನ್‌ ಶೆಟ್ಟಿ, ಡಾ| ಬಾಲಾಜಿ, ಸರ್ಜಿಕಲ್‌ ಓಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ| ನವೀನ ಕುಮಾರ್‌, ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಜೋಸೆಫ್‌ ಥಾಮಸ್‌ ವೈದ್ಯರ ತಂಡವು ಎಂಡೋಸ್ಪಾಂಜ್‌/ವ್ಯಾಕ್ಯೂಮ್‌ ಥೆರಪಿ ಎಂಬ ನವೀನ ಚಿಕಿತ್ಸೆಗೆ ನಿರ್ಧರಿಸಿದರು.

ಇದನ್ನೂ ಓದಿ : ದೊಡ್ಡ ಹಿಟ್ ಆಯ್ತು ಮಣಿರತ್ನಂ ಸಿನಿಮಾ: ಪೊನ್ನಿಯನ್ ಸೆಲ್ವನ್ ಚಿತ್ರ ಗಳಿಸಿದ್ದೆಷ್ಟು?

Advertisement

ಇಲ್ಲಿ ಎಂಡೋಸ್ಕೋಪಿ ಮೂಲಕ ಸ್ಪಾಂಜ್‌ಅನ್ನು ಮೆಡಿಯಾಸ್ಟಿನಮ್‌ ಕುಳಿಯಲ್ಲಿ ಇರಿಸಲಾಯಿತು. ಇದು ನೈಸರ್ಗಿಕವಾಗಿ ಮತ್ತು ಯಾವುದೇ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ದೋಷವನ್ನು ಮುಚ್ಚಲು ಸಹಾಯ ಮಾಡಿತು. ಮೂರು ವಾರಗಳ ಅನಂತರ ರೋಗಿಯು ನೇರವಾಗಿ ಬಾಯಿಯ ಮೂಲಕ ತಿನ್ನಲು ಸಾಧ್ಯವಾಯಿತು.

ಇದು ದಕ್ಷಿಣ ಭಾರತದ ಈ ಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಮಾಡಿದ ಮೊದಲ ವಿನೂತನ ವಿಧಾನವಾಗಿದೆ ಮತ್ತು ಕಡಿಮೆ ವೆಚ್ಚದ ಮತ್ತು ಸುರಕ್ಷಿತ ವಿಧಾನವಾಗಿದೆ ಎಂದು ಡಾ| ಶಿರನ್‌ ಶೆಟ್ಟಿ ತಿಳಿಸಿದ್ದಾರೆ.

ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಅವರು, ಈ ಅಪರೂಪದ ಚಿಕಿತ್ಸ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡ ವನ್ನು ಅಭಿನಂದಿಸಿ, ಆಸ್ಪತ್ರೆಯಲ್ಲಿ ಈ ರೀತಿಯ ಸಂಕೀರ್ಣ ಶಸ್ತ್ರಚಿಕಿತ್ಸೆಯು ತಜ್ಞ ವೈದ್ಯರ ತಂಡದಿಂದ ಸಾಧ್ಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next