Advertisement

ಅವಧಿ ಪೂರ್ವ ಜನಿಸಿದ ಶಿಶುವಿಗೆ: ಸೂಕ್ತಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮಚಿಕಿತ್ಸೆ

03:25 PM Nov 20, 2019 | Naveen |

ಮಣಿಪಾಲ್ ಕಾಲೇಜ್ ಅಫ್ ನರ್ಸಿಂಗ್ ಹಾಗೂ ಕಸ್ತೂರ್ಭಾ ಮಣಿಪಾಲ ಆಸ್ಪತ್ರೆ ಮಕ್ಕಳ ವಿಭಾಗ  ಜಂಟಿಯಾಗಿ ವಿಶ್ವ ಅವಧಿ ಪೂರ್ವ ಜನಿಸಿದ ಶಿಶುಗಳ ದಿನಾಚರಣೆಯನ್ನು 2019 ನವೆಂಬರ್ ತಾರೀಕು 18  ರಂದು ಆಚರಿಸಿತು . ಇದರ ಪ್ರಯುಕ್ತ ನವೆಂಬರ್ 11ರಿಂದ 18 ರ ವರೆಗೆ ನವಜಾತ ಶಿಶುವಿನ ಆರೈಕೆ ಶುಷ್ರೂಕರು ಹಾಗೂ ಅವಧಿ ಪೂರ್ವ ಜನಿಸಿದ ಶಿಶುಗಳ ಪೋಷಕರಿಗೆ ಉತ್ತಮ ಗುಣ ಮಟ್ಟದ ಹಾಗೂ ಧೈಹಿಕ ಭೆಳವಣಿಗೆಯೊಂದಿಗೆ ಮೆದುಳಿನ ಬೆಳವಣಿಗೆಗೆ ಪೂರಕ ವಾಗುವ ಆರೈಕೆಯನ್ನು ನೀಡುವ ಅರಿವಳಿಕೆಯನ್ನು ನೀಡುವ ಉದ್ದೇಶದಿಂದ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

ಕಸ್ತೂರ್ಬಾ ಆಸ್ಪತ್ರೆಯ ನವಜಾತ ಶಿಶು ಘಟಕದ ಮುಖ್ಯಸ್ಥರಾದ ಡಾಕ್ಟರ್ ಲೆಸ್ಲಿ ಲೂಯಿಸ್, ಮಣಿಪಾಲ್ ಕಾಲೇಜ್  ಅಫ಼್ ನರ್ಸಿಂಗ್ ಅಸಿಸ್ಟೆಂಟ್  ಪ್ರೊಫ಼ೆಸರಾದ ಶ್ರೀಮತಿ ಯಶೋದ ಸತೀಶ್ ಹಾಗೂ ಶ್ರೀಮತಿ ಬಿನು ಮಾರ್ಗರೆಟ್ ರವರು ಈ ಮಾಹಿತಿ ನೀಡಿದರು.

ನವೆಂಬರ್ ತಾರೀಕು 18 ರಂದು  ನವಜಾತ ಶಿಶು ಘಟಕದಲ್ಲಿ ಚಿಕಿತ್ಸೆ ಪಡೆದ ಐದು ವರ್ಷದ ಕೆಳಗಿನ ಪೋಷಕರು ತಮ್ಮ ಮಕ್ಕಳು  ಆಸ್ಪತ್ರೆಯ ಧಾಖಲಾದ ದಿನದಿಂದ ತಮ್ಮ  ಮಕ್ಕಳನ್ನು ಯಾವ ವಿಶೇಷ ರೀತಿಯಲ್ಲಿ ಬಹಳ ಜಾಗ್ರತೆ ಯಲ್ಲಿ ನವಜಾತ ಶಿಶು ಘಟಕದಲ್ಲಿ ನೋಡಿಕೊಂಡದ್ದನ್ನು ಸ್ಮರಿಸಿ ಅಬಿನಂದಿಸಿದರು  ಹಾಗೂ ತಮ್ಮ ಮಕ್ಕಳನ್ನು ಮನೆಯಲ್ಲಿ ಬೆಳೆಸುವಾಗ ಎದುರಿಸಿದ ಸಮಸ್ಯೆಯನ್ನು ಏಲ್ಲರೊಡನೆ ಹಂಚಿಕೊಂಡರು. ಕಾರ್ಯ ಕ್ರಮದ ಕೊನೆಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಹುಟ್ಟಿದಾಗ 500 ಗ್ರಾಮ್ಸ್ ಗಿಂತಲೂ ಕಡಿಮೆ ತೂಕದ ಹಾಗೂ ಗರ್ಭಾವಸ್ತೆಯ ಸಮಯದ ಆರು ತಿಂಗಳ ಮೊದಲು ಜನಿಸಿದ ಮಗುವಿದ್ದು ಆ ಮಗು ಕೂಡಾ ಎಲ್ಲಾ ಇತರ ಮಕ್ಕಳಂತೆ ಬೆಳವಣಿಗೆಯನ್ನು ಪಡೆದಿರುತ್ತದೆ ಎಂಬುದು ಸಂತಸದ ವಿಷಯ.

ಈ ಸಮಯ ದಲ್ಲಿ ನವಜಾತ ಶಿಶು ಘಟಕದ ಮುಖ್ಯಸ್ಥರಾದ  ಡಾಕ್ಟರ್ ಲೆಸ್ಲಿಯವರು ಜಗತ್ತಿನಾದ್ಯಂತ ಪ್ರತೀ ವರ್ಷ 15 ಮಿಲಿಯನ್ ಶಿಶುಗಳ ಜನನವಾಗುತ್ತಿದ್ದು ಇದರಲ್ಲಿ ಒಂದು ಮಿಲಿಯನ್ಗಿಂತಲೂ ಜಾಸ್ತಿ ಅವದಿಪೂರ್ವ ಶಿಶುಗಳ  ಜನನವಾಗಿತ್ತಿದೆ ಇದರಲ್ಲಿ ಹತ್ತನೇ ಒಂದು ಪಾಲು ಮಕ್ಕಳು ಮರಣ ಹೊಂದುವುದು ಅಥವಾ ಮೆದುಳಿನ ತೊಂದರೆ ಒಳಗಾಗುವ ಸಂಭವ ಜಾಸ್ತಿ ಎಂದರು. ಇದನ್ನು ತಡೆಗಟ್ಟಲು ಅವದಿ ಪೂರ್ವ ಜನಿಸಿದ ಶಿಶುವಿಗೆ ಸೂಕ್ತಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಗಳೊಂದಿಗೆ ತಾಯಿಯು ಮಗುವಿನೊಂದಿಗೆ ಇದ್ದು ಅವಳ ಸೌಮ್ಯ ಸ್ಪರ್ಷ, ಅತೀ ಹೆಚ್ಚು ಕಾಂಗರೂ ಆರೈಕೆ, ತಾಯಿಯ ಹೆಚ್ಚಿನ ಹಾಲಿನ ಅಗತ್ಯತೆ ಹಿತಮಿತವಾದ ವಾತಾವವರಣ , ಹಾಗೂ ಸೋಂಕುವಿನಿಂದ ತಡೆಗಟ್ಟಲು ಶುಚಿತ್ವ ಕಾಪಾಡಿಕೊಳ್ಳು ವುದು, ಸೋಂಕು ಹೊಂದಿದವರಿಂದ ಮಗುವನ್ನು ದೂರವಿರಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಅರೊಗ್ಯ ತಪಾಸಣೆ ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಇದರಿಂದ ಹೆಚ್ಚಿನ ಅವದಿ ಪೂರ್ವ ಶಿಶುವಿನ ಅರೊಗ್ಯವನ್ನು ಕಾಪಾಡಬಹುದು ಹಾಗೂ ಶಿಶುಗಳಿಗೆ ಬರುವಂತಹಾ ತೊಂದರೆಯನ್ನು ತಪ್ಪಿಸಿ  ಈ  ರೀತಿ  ಉತ್ತಮ ಬೆಳವಣಿಗೆಗೆ ಸೂಕ್ತ ಸಮಯದಲ್ಲಿ ಉತ್ತಮ ವ್ಯವಸ್ಥೆಯ ಸೂಕ್ತ ಆರೋಗ್ಯ ಸೇವೆಯಿಂದ ಮಾತ್ರ ಈ ಪ್ರತಿಫಲ ಸಾದ್ಯ, ಅಲ್ಲದೆ ಇತರ ಸಾಮಾನ್ಯ ಮಕ್ಕಳಂತೆ ಅವಧಿ ಪೂರ್ವ ಜನಿಸಿದ ಶಿಶುವನ್ನೂ  ದೇಶದ ಆತ್ಯುತ್ತಮ ಪ್ರಜೆಗಳನ್ನಾಗಿ ಮಾಡಬಹುದು ಎನ್ನುವ ಸಂದೇಷವನ್ನು ಅವಧಿ ಪೂರ್ವ ಪೋಷಕರಿಗೆ ಮನದಟ್ಟು ಮಾಡಿದರು.

ಈ ಸಮಯದಲ್ಲಿ ಕಣ್ಣಿನ ತಜ್ಣರಾದ ಡಾ. ಸುಲತಾ ಭಂಡಾರಿಯವರು ಅವದಿ ಪೂರ್ವ ಶಿಶುವಿನ ಭೆಳವಣಿಗೆಯ ಹಂತದಲ್ಲಿ ನಿಯಮಿತ ಸಮಯದಲ್ಲಿ ಕಣ್ಣಿನ ತಪಾಸಣೆಯ ಮಹತ್ವವನ್ನು ಪೋಷಕರಿಗೆ ವಿವರಿಸಿದರು.

Advertisement

ಭಾರತ ಸರಕಾರದ ವತಿಯಿಂದ ಮಿನಿಸ್ಟ್ರಿ ಅಫ಼್ ಸಯನ್ಸ್ ಅಂಡ್ ಟೆಕ್ನಾಲಾಜಿ  ಬಯಾಟೆಕ್ ಫ಼ಂಡಿನಿಂದ ದೊರೆತ” ನಿಯೊರಕ್ಷ ಮೊಬೈಲ್ ಆರೋಗ್ಯ ಆಪ್” ಈ ಸಾದನವು ಅವಧಿ ಪೂರ್ವ ಜನಿಸಿದ ಶಿಶುಗಳ ಪೋಷಕರಿಗೆ ನೀಡಲಾಗಿದ್ದು ಇದರಲ್ಲಿ ಈ ಶಿಶುಗಳ ಫೋಷಣೆ, ಹಾಗೂ ಬೆಳವಣಿಗೆಯ ಮಾಹಿತಿ ಹೊಂದಿದ್ದು ಇದು ಪೋಷಕರು, ಆಶ ಕಾರ್ಯಕರ್ತೆಯರು ಹಾಗೂ ನವಜಾತ ಶಿಶುವಿವಿನ ಘಟಕದ ತಂಡದ ನೇರ ಸಂಪರ್ಕ ಹೊಂದಿರುತ್ತದೆ . ಇದನ್ನು ಉಪಯೋಗಿಸಿದ ತಾಯಂದಿರು ತಮ್ಮ ಅಭಿಪ್ರಾಯವನ್ನು ಈ ಸಮಯ ಇತರರೊಂದಿಗೆ ಹಂಚಿಕೊಂಡರು. ಈ ಕಾರ್ಯ ಕ್ರಮದಲ್ಲಿ ಮಣಿಪಾಲ್ ಕಾಲೇಜ್ ಅಫ಼್ ನರ್ಸಿಂಗ್ನ ಅಸ್ಸೊಸಿಯೇಟ್ ಡೀನ್ ಡಾ, ಜೂಡಿತ್ ನೊರೊನ್ಹಾ , ಮಕ್ಕಳ ಶುಷ್ರೂಷ ವಿಭಾಗದ ಡಾ. ಬೇಬಿ ಎಸ್ ನಾಯಕ್. ನವಜಾತ ಶಿಶುವಿವಿನ ಘಟಕದ ಪ್ರೊಫ಼ೆಸ್ಸರ್ ಡಾ.ಜಯಶ್ರೀ ಹಾಗೂ  ಡಾ. ಅಪ್ಪೊರ್ವ  ಉಪಸ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next