Advertisement

ರೋಗಿಗಳ ಸುರಕ್ಷತೆಗೆ ಮಣಿಪಾಲ್‌ ಆಸ್ಪತ್ರೆ ಆದ್ಯತೆ

05:47 AM Jun 26, 2020 | Lakshmi GovindaRaj |

ಮಂಡ್ಯ: ಕೋವಿಡ್‌ 19 ಹರಡುವುದನ್ನು ನಿರ್ಬಂಧಿಸಲು ಮಣಿಪಾಲ್‌ ಆಸ್ಪತ್ರೆ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಿದೆ ಎಂದು ಮಣಿಪಾಲ್‌ ಆಸ್ಪತ್ರೆ ಛೇರ¾ನ್‌ ಡಾ.ಸುನೀಲ್‌ ಕಾರಂತ್‌ ಹೇಳಿದರು.

Advertisement

ಮಣಿಪಾಲ್‌ ಆಸ್ಪತ್ರೆ, ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೋವಿಡ್‌ 19 ನಿಯಂತ್ರಣ ಕುರಿತು ಪತ್ರಕರ್ತರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ವಿಡಿಯೋ ಸಂವಾದದ ಮೂಲಕ ಮಾತನಾಡಿ, ಸುರಕ್ಷತೆ ನಮ್ಮೊಂದಿಗೆ ಆರಂಭ ಅಭಿಯಾನದಡಿ  ಸೋಂಕು ತಡೆಗೆ ಕಟ್ಟುನಿ ಟ್ಟಿನ ನಿಬಂಧನೆಗಳು, ಸ್ನೇಹಪೂರ್ಣ ಸೇವೆಗಳು ಮತ್ತು ಹಲವಾರು ಉನ್ನತ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳ ಭದ್ರತೆ ಮತ್ತು ಸುರಕ್ಷತೆ ಅವರೊಂ ದಿಗೇ ಆರಂಭವಾಗಬೇಕು ಎಂದರು.

ವೈಜ್ಞಾನಿಕ ಮುನ್ನೆಚ್ಚರಿಕೆ ಕ್ರಮ: ನಮ್ಮಲ್ಲಿ ವೈಜ್ಞಾನಿಕವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಗುಣಮಟ್ಟದ ವೈಯಕ್ತಿಕ ಸುರಕ್ಷತಾ ಉಪಕರಣಗಳ ನ್ನು ಪೂರೈಸಿದೆ. ವಿಕಿರಣಶಾಸ್ತ್ರ ತಜ್ಞರು, ಪ್ರಯೋ ಗಾಲಯ ತಂತ್ರಜ್ಞರು,  ಆಹಾರ ಮತ್ತು ಪೇಯಗಳ ಮಾರಾಟಗಾರರು ಹಾಗೂ ವೈದ್ಯರು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗೆ ಔಪಚಾರಿಕವಾದ ಸುರಕ್ಷತಾ ತರಬೇತಿ ನೀಡಲಾಗಿದೆ ಎಂದರು.

ಸಂದರ್ಶಕರಿಗೆ ಜ್ವರ ಲಕ್ಷಣಗಳು ಅಥವಾ ಉಸಿರಾಟದ ಅಸ್ವಸ್ಥತೆ,  ನೆಗಡಿ, ಕೆಮ್ಮು ಮುಂತಾದ ಲಕ್ಷ ಣಗಳು ಇರುವುದು ವರದಿಯಾದಲ್ಲಿ ಅವರಿಗೆ ಮುನ್ನಚ್ಚರಿಕೆಯ ಕ್ರಮವಾಗಿ ವೈದ್ಯರಿಂದ ಅಗತ್ಯ ಪರೀಕ್ಷೆ ನಡೆಸಲು ಫೀವರ್‌ ಕ್ಲಿನಿಕ್‌ಗಳಿಗೆ ಕರೆದೊಯ್ಯಲಾಗುವುದು. ಸರ್ಕಾರದ ನಿಯಮಗಳಿಗೆ  ಅನುಗುಣವಾಗಿ, ಮಾಸ್ಕ್, ಸ್ಯಾನಿಟೈಸರ್‌ ಬಳಕೆ, ಒಬ್ಬ ರೋಗಿ-ಒಬ್ಬರು ಆರೈಕೆ ಮಾಡುವವರು ಎಂಬ ನಿಯಮವನ್ನು ಪಾಲಿಸುವುದು ಒಳ್ಳೆ ಯದು.

ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಜನ ಸೇರುವುದನ್ನು ತಪ್ಪಿಸಬಹುದು. ಸೋಂಕುಗಳಿಗೆ  ಸುಲಭವಾಗಿ ತುತ್ತಾಗಬಲ್ಲ ಹಿರಿಯ ವಯಸ್ಕರು ಮಕ್ಕಳು, ತಾಯಂದಿರಾಗುವ ನಿರೀಕ್ಷೆಯಲ್ಲಿರುವವರಿಗೆ ಮನೆಯಲ್ಲಿಯೇ ಆರೋಗ್ಯ ಸೇವೆ ನೀಡುವ ಮತ್ತು ಟೆಲಿಕನ್ಸಲ್ಟೆಷನ್‌ ಮೂಲಕ ಸಲಹೆ ನೀಡುವ ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

Advertisement

ಕಟ್ಟುನಿಟ್ಟಿನ ನಿಯಮ ಜಾರಿ:ತುರ್ತು ಶಸ್ತ್ರಕ್ರಿಯಾ ಪ್ರಕರಣಗಳಿಗಾಗಿ ಆಸ್ಪತ್ರೆ ಕಟ್ಟುನಿಟ್ಟಿನ ನಿಯಮಜಾರಿಗೆ ತಂದಿದೆ. ಪ್ರಾಥಮಿಕವಾಗಿ ರೋಗಿಗಳ ರೋಗ ನಿರೋಧಕತೆ, ಲಕ್ಷಣಗಳ ತೀವ್ರತೆ ಆಧರಿಸಿ ಶಸ್ತ್ರಕ್ರಿಯಾ ಕ್ರಮಗಳನ್ನು ಉನ್ನತ  ಮತ್ತು ಕಡಿಮೆ ಎಂದು ಗುರುತಿಸಲಾಗುವುದು. ಎಲ್ಲಾ ಸುರಕ್ಷತಾ ಅಗತ್ಯಗಳನ್ನು ಪೂರೈಸುವಂತಹ ಸಂಪೂರ್ಣವಾಗಿ ಸಜ್ಜಾಗಿರುವ ಶಸ್ತ್ರಕ್ರಿಯಾ ಕೊಠಡಿಗಳ ಪ್ರದೇಶಗಳಲ್ಲಿ ಅಥವಾ ನಿಯೋಜಿತ ಶಸ್ತ್ರಕ್ರಿಯಾ ಕೊಠಡಿಗಳಲ್ಲಿ ಶಸ್ತ್ರಕ್ರಿಯೆಯನ್ನು ನಂತರ ನಡೆಸಲಾಗುವುದು  ಎಂದು ಹೇಳಿದರು.

ವಿಶ್ವದಾದ್ಯಂತ ಮಣಿಪಾಲ್‌ ಆಸ್ಪತ್ರೆ ಯಶಸ್ವಿ ಯಾಗಿ 15 ಆಸ್ಪತ್ರೆಗಳಲ್ಲಿ 5900ಕ್ಕೂ ಹೆಚ್ಚಿನ ಹಾಸಿಗೆ ಗಳನ್ನು ನಿರ್ವಹಿಸುತ್ತಿದೆ. ಮಣಿಪಾಲ್‌ ಆಸ್ಪತ್ರೆ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆ ಯುವ ಆರೈಕೆಯನ್ನು ವಿಶ್ವದ ಎಲ್ಲೆಡೆ  ರೋಗಿಗಳಿಗೆ ನೀಡುತ್ತಿದೆ. ನೈಜೀರಿಯಾದ ಲಾಗೋಸ್‌ನಲ್ಲಿ ಮಣಿಪಾಲ್‌ ಆಸ್ಪತ್ರೆ ಒಂದು ಡೇ ಕೇರ್‌ ಕ್ಲಿನಿಕ್‌ ಹೊಂದಿದೆ ಎಂದು ಹೇಳಿದರು.

ಎಚ್ಚರಿಕೆಯಿಂದ ಕೆಲಸ ಮಾಡಿ: ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ, ಕೋವಿಡ್‌ 19 ಸಮು ದಾಯಕ್ಕೆ ಹರಡುವ ಭೀತಿ ನಿರ್ಮಾಣವಾಗಿದ್ದು, ಕೋವಿಡ್‌ 19 ವಾರಿಯರ್ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.  ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ್‌, ರಾಜ್ಯ ಉಪಾಧ್ಯಕ್ಷ ಎಂ.ಆರ್‌.ಜಯರಾಮು, ಆಸ್ಪತ್ರೆ ಪಿಆರ್‌ಒ ಅರುಣ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next