Advertisement
ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ| ಎಚ್. ಸುದರ್ಶನ್ ಬಲ್ಲಾಳ್, ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಇಂಟರ್‌ವೆಲ್‌ನ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ| ರೆಡ್ಡಿ ಪ್ರಸಾದ್ ಯಾದವಲಿ, ಕ್ವೀನ್ ಎಲಿಜಬೆತ್ ವಿಶ್ವವಿದ್ಯಾನಿಲಯ ಹಾಸ್ಪಿಟಲ್ ಇಂಟರ್ವೆಲ್‌ನ ರೇಡಿಯಾಲಜಿ ವಿಭಾಗದ ಸಲಹಾತಜ್ಞ ಡಾ| ರಾಮ್ ಸುಂದರ್ ಕಸ್ತೂರಿ ಸಮ್ಮುಖದಲ್ಲಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಡಾ| ಸುದರ್ಶನ್ ಬಲ್ಲಾಳ್ ಮಾತನಾಡಿ, ರೋಗನಿರ್ಣಯ, ಹಸ್ತಕ್ಷೇಪಾತ್ಮಕ ಚಿಕಿತ್ಸೆಯಲ್ಲಿ ಕೌಶಲಗಳನ್ನು ವಿಸ್ತರಿಸಿಕೊಳ್ಳಲು ಈ ಪಾಲುದಾರಿಕೆ ಸಹಕಾರಿ. ಜಾಗತಿಕ ಪರಿಣಿತರಿಂದ ಕಲಿತುಕೊಳ್ಳಲು ವಿಕಿರಣಶಾಸ್ತ್ರ ತಜ್ಞರಿಗೆ ಹಿಂದೆಂದೂ ಇಲ್ಲದ ಅವಕಾಶವನ್ನು ಈ ಸಹಭಾಗಿತ್ವ ಪೂರೈಸಲಿದೆ. ಈ ಪಾಲುದಾರಿಕೆ ನಮ್ಮ ವೈದ್ಯರು ಮತ್ತು ರೋಗಿಗಳಿಗೆ ಮಾತ್ರ ಲಾಭದಾಯಕವಾಗಿರುವುದಲ್ಲದೇ, ದೇಶದಲ್ಲಿ ವಿಶೇಷ ವಿಭಾಗವಾಗಿ ಉನ್ನತೀಕರಿಸಲು ಸಹ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ನಮಗಿದೆ. ಕ್ವೀನ್ ಎಲಿಜಬೆತ್ ವಿ.ವಿ. ಆಸ್ಪತ್ರೆಯು ಅತ್ಯಾಧುನಿಕ ಅತ್ಯುನ್ನತ ಮಟ್ಟದ ಆರೈಕೆ ಕೇಂದ್ರವಾಗಿದೆ ಎಂದರು. ಹೆಚ್ಚಿನ ಶೈಕ್ಷಣಿಕ ಅವಕಾಶ
ಈ ಪಾಲುದಾರಿಕೆಯಿಂದ ವಿಕಿರಣಶಾಸ್ತ್ರ ತಜ್ಞರಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳು ಸಿಗಲಿವೆ. ಇದರಿಂದ ಈ ತಜ್ಞರು ಉನ್ನತ ತಂತ್ರಗಳು ಮತ್ತು ಉನ್ನತ ಹಂತದ ವೈದ್ಯಕೀಯ ಕಾರ್ಯ ವಿಧಾನಗಳ ಬಗ್ಗೆ ಕಲಿಯಲು ಸಹಾಯವಾಗಲಿದೆ. ಇದೇ ರೀತಿಯಲ್ಲಿ ಗ್ಲಾಸ್ಕೋನ ಕ್ಯೂಇಯುಎಚ್‌ನಲ್ಲಿ ತರಬೇತಿ ಪಡೆಯುತ್ತಿರುವವರು ಬೆಂಗಳೂರಿನ ಮಣಿಪಾಲ್‌ಆಸ್ಪತ್ರೆಯಲ್ಲಿ ವೈದ್ಯರು ಅಳವಡಿಸಿಕೊಳ್ಳುವ ನೂತನ ತಂತ್ರಗಳನ್ನು ಕಲಿತುಕೊಳ್ಳಲು ಸಾಧ್ಯವಾಗಲಿದೆ.