Advertisement

ಫೆ. 11: ಮಣಿಪಾಲ್‌ ಮ್ಯಾರಥಾನ್‌-2018

01:55 PM Jan 13, 2018 | |

ಉಡುಪಿ: ಮಾಹೆ ಮಣಿಪಾಲ, ಸಿಂಡಿಕೇಟ್‌ ಬ್ಯಾಂಕ್‌, ಅದಾನಿ ಯುಪಿಸಿಎಲ್‌ ಉಡುಪಿ ಹಾಗೂ ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಸಹಯೋಗದಲ್ಲಿ  ಫೆ. 11ರಂದು ಬೆಳಗ್ಗೆ 6.30ಕ್ಕೆ ಮಣಿಪಾಲದಲ್ಲಿ ಮಣಿಪಾಲ್‌ ಮ್ಯಾರಥಾನ್‌-2018 ಜರ ಗಲಿದೆ ಎಂದು ಮ್ಯಾರಥಾನ್‌ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಹಾಫ್ ಮ್ಯಾರಥಾನ್‌ 21 ಕಿ.ಮೀ. ದೂರದ್ದಾಗಿದ್ದು, ಪ್ರಥಮ ಬಹುಮಾನವಾಗಿ 75,000 ರೂ. ನಗದು, ದ್ವಿತೀಯ 35,000 ರೂ., ತೃತೀಯ 20,000 ರೂ., 4ನೇ 10,000 ರೂ. ಹಾಗೂ 5ನೇ ಬಹುಮಾನವಾಗಿ 7,500 ರೂ. ನೀಡಲಾಗುತ್ತದೆ. 

ಮಧ್ಯ ವಯಸ್ಕರಿಗೂ ಸ್ಪರ್ಧೆ
ಈ ವರ್ಷದಿಂದ ಮಧ್ಯ ವಯಸ್ಕರಿಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ 35ರಿಂದ 55 ವರ್ಷದ ವರೆಗಿನ ವರಿಗೆ 21 ಕಿ.ಮೀ. ಮ್ಯಾರಥಾನ್‌ ಏರ್ಪಡಿ ಸಲಾಗಿದೆ. ಪ್ರಥಮ 30,000 ರೂ., ದ್ವಿತೀಯ 20,000 ರೂ. ಹಾಗೂ ತೃತೀಯ 10,000 ರೂ.ನಗದು ಬಹುಮಾನ ನೀಡಲಾಗುತ್ತದೆ. 

56 ವರ್ಷದ ಮೇಲ್ಪಟ್ಟವರಿಗೆ, ಮುಕ್ತ ವಿಭಾಗಕ್ಕೆ 10 ಕಿ.ಮೀ. ಹಾಗೂ 5 ಕಿ.ಮೀ.; 35ರಿಂದ 55 ವರ್ಷದವರಿಗೆ 10 ಕಿ.ಮೀ.; 56 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಣಿಪಾಲ ಮಾಹೆ ಸಿಬಂದಿಗಳಿಗೆ, ವಿದ್ಯಾರ್ಥಿಗಳಿಗಾಗಿ 10. ಕಿ.ಮೀ. ಓಟ, 35ರಿಂದ 55 ವರ್ಷದ ಮೇಲ್ಪಟ್ಟವರಿಗೆ 5 ಕಿ.ಮೀ., ಕಾರ್ಪೊರೇಟ್‌ ವಿಭಾಗಕ್ಕೆ ಮ್ಯಾರ ಥಾನ್‌  ಸ್ಪರ್ಧೆ ನಡೆಯಲಿದೆ. ಒಟ್ಟು 8.50 ಲಕ್ಷ ರೂ. ಬಹುಮಾನ ವನ್ನು ನೀಡಲಾಗುತ್ತದೆ ಎಂದರು.  

ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಮಾತನಾಡಿ, ಈ ಬಾರಿ ಮ್ಯಾರಥಾನ್‌ ಮಾಹೆಯ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಅಕಾಡೆಮಿ ಆಫ್ ಜನ ರಲ್‌ ಎಜುಕೇಶನ್‌ನ 75ನೇ ವರ್ಷದ ಸಂಭ್ರಮದಲ್ಲಿ  ಮಾದಕದ್ರವ್ಯ ಮುಕ್ತದಡಿ ನಡೆಯಲಿರುವುದು ವಿಶೇಷ ವಾಗಿದೆ, ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜು ಏಕೇಶನ್‌ನ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಕಾಡೆಮಿ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮ್ಯಾರಥಾನ್‌ ಏರ್ಪಡಿಸಲಾಗಿದೆ.  

Advertisement

ಆಸಕ್ತರು www.manipalmarathon.com ಇಲ್ಲಿ ಹೆಸರನ್ನು ನೋಂದಾಯಿಸಬೇಕಾಗಿದೆ.  ಪ್ರವೇಶಪತ್ರ ನೀಡಲು  ಫೆ. 8 ಕೊನೆಯ ದಿನಾಂಕ. ಸುದ್ದಿಗೋಷ್ಠಿಯಲ್ಲಿ ಅದಾನಿ ಯುಪಿಸಿಎಲ್‌ ಉಡುಪಿ ಇದರ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ, ಸಿಂಡಿಕೇಟ್‌ ಬ್ಯಾಂಕ್‌ ಉಪ ಮಹಾ ಪ್ರಬಂಧಕ ಹಿರೇಮs…, ಮ್ಯಾರಥಾನ್‌ ಸಮಿತಿ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಅಶೋಕ್‌ ಅಡ್ಯಂತಾಯ, ಡಾ| ಗಿರೀಶ್‌ ಮೆನನ್‌, ರಘುರಾಮ ನಾಯಕ್‌, ದಿನೇಶ್‌ ಕೋಟ್ಯಾನ್‌, ಡಾ| ದೀಪಕ್‌ ರಾಮ್‌ ಬಾಯರಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next