ಆವರಣದಲ್ಲಿ ಆಯೋಜಿಸಿದ್ದ “ನಮ್ಮ ಸಂತೆ’ಗೆ ಎರಡನೇ ದಿನ ರವಿವಾರವೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
Advertisement
ಸಾವಯವ ಉತ್ಪನ್ನಗಳು, ಖಾದಿ, ಜವಳಿ ದಿರಿಸು ಸಹಿತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಅತ್ಯಂತ ವಿಶಿಷ್ಟವಾಗಿ ಗಮನ ಸೆಳೆದಿದ್ದು, ಉಡುಪಿ, ಮಣಿಪಾಲ, ಪರ್ಕಳ, ಮಲ್ಪೆ ಸಹಿತ ಆಸುಪಾಸಿನ ಜನರು ಭಾಗವಹಿಸಿ ಖರೀದಿ ಮಾಡಿದರು. ಇಲ್ಲಿನ 50ಕ್ಕೂ ಹೆಚ್ಚು ಮಳಿಗೆಗಳಲ್ಲಿಯೂ ವ್ಯಾಪಾರ ಪ್ರಕ್ರಿಯೆ ಜೋರಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ವ್ಯಾಪಾರಿಗಳು ಅಲಂಕಾರಿಕ, ಗೃಹೋಪಯೋಗಿ, ಖಾದಿ, ಹ್ಯಾಂಡ್‌ಮೇಡ್ ಆಭರಣಗಳ ಮಾರಾಟ ಉತ್ತಮವಾಗಿತ್ತು ಎಂದುಅಭಿಪ್ರಾಯಪಟ್ಟರು.
ಕಾಳುಮೆಣಸು, ಹಲಸಿನ ಕಾಯಿಯ ಉತ್ಪನ್ನ, ಮಾವಿನಕಾಯಿ ಉತ್ಪನ್ನ, ಕಣಿಲೆ ಉತ್ಪನ್ನಗಳನ್ನು ಖರೀದಿ ಮಾಡಿದರು.
Related Articles
Advertisement
ಒಣಗಿದ ಹೂ, ಮೊಗ್ಗು, ಎಲೆಗಳಿಂದ ಪ್ರಕೃತಿ, ಪ್ರಾಣಿ, ಪಕ್ಷಿಗಳ ಆಕರ್ಷಕ ಕಲಾಕೃತಿಗಳು, ಆಯುರ್ವೇದಿಕ್ ಉತ್ಪನ್ನಗಳ ವ್ಯಾಪಾರವೂ ಜೋರಾಗಿತ್ತು. ಕುಟುಂಬ ಸಮೇತರಾಗಿ ಬಂದ ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿ ಸಂತೋಷಪಟ್ಟರು. ನಮ್ಮ ಸಂತೆಯಲ್ಲಿ ಫುಡ್‌ಝೋನ್, ಪ್ಲೇಝೋನ್, ಉದಯವಾಣಿ ಸ್ಟಾಲ್ ಜನರನ್ನು ವಿಶೇಷವಾಗಿಆಕರ್ಷಿಸಿತು. ಎರಡು ದಿನಗಳಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ನಮ್ಮ ಸಂತೆಗೆ ಭೇಟಿ ನೀಡಿದರು.