Advertisement

Manipal: ಮಣಿಪಾಲ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲೇ ಪ್ರಮುಖ: ಡಿಕೆಶಿ

11:53 PM Oct 24, 2023 | Team Udayavani |

ಬೆಂಗಳೂರು: ಜೀವನದಲ್ಲಿ ಶಿಸ್ತು, ಸಂಯಮ, ಶ್ರದ್ಧೆ ಮೈಗೂಡಿಸಿಕೊಂಡರೆ ನಾವು ಸುಲಭವಾಗಿ ನಮ್ಮ ಗುರಿ ಮುಟ್ಟಬಹುದು. ನಾವು ಧನಾತ್ಮಕವಾದ ಚಿಂತನೆಯನ್ನು ಹೊಂದಿರಬೇಕು. ನಕಾರಾತ್ಮಕ ಚಿಂತನೆಗಳಿಂದ ದೂರವಿರಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಬೆಂಗಳೂರಿನ ಯಲಹಂಕದಲ್ಲಿರುವ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಆವರಣದಲ್ಲಿ ಡಾ| ರಾಮದಾಸ್‌ ಎಂ. ಪೈ ಸಮ್ಮೇಳನ ಸಭಾಂಗಣ ಹಾಗೂ ಫ‌ುಡ್‌ ಕೋರ್ಟ್‌ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಾ ಗಾಂಧಿ ಅವರು ಹೇಳಿದಂತೆ ನೀವು ನಿಮ್ಮನ್ನು ನಿಯಂತ್ರಣ ಮಾಡಿಕೊಳ್ಳಲು ನಿಮ್ಮ ಮಿದುಳನ್ನು ಬಳಸಿ, ಇತರರನ್ನು ನಿಯಂತ್ರಿಸಲು ಹೃದಯವನ್ನು ಬಳಸಿ ಎಂದು. ಯಾವುದೇ ಕಾರಣಕ್ಕೂ ಇತರೇ ವಿಚಾರಗಳಿಂದ ಕಲುಷಿತರಾಗಬೇಡಿ, ಸ್ವಂತ ಆಲೋಚನೆ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ. ವಿದ್ಯಾರ್ಥಿಗಳು ಎಂದಿಗೂ ತಾವು ಬೆಳೆದು ಬಂದ ಹಾಗೂ ಬೆಳೆಯುವ ದಾರಿ ಮರೆಯಬಾರದು ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ದೀಪ ಬೆಳಗಿಸಿ ಹುಟ್ಟುಹಬ್ಬ ಆಚರಣೆ ಮಾಡಿ
‘ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಂ. ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೇ’ ಎನ್ನುವ ಶ್ಲೋಕವನ್ನು ಹೇಳಿ ದೀಪ ಬೆಳಗಿಸುತ್ತೇವೆ. ಇಂದಿನ ವಿದ್ಯಾರ್ಥಿಗಳು ಹುಟ್ಟುಹಬ್ಬ ಆಚರಣೆ ವೇಳೆ, ದೀಪವನ್ನು ಆರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಾವು ದೀಪ ಬೆಳಗುವವರಾಗಬೇಕೇ ಹೊರತು, ದೀಪ ಆರಿಸುವವರಾಗಬಾರದು. ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವನಾಗಿದ್ದಾಗ ಅಂತಾರಾಷ್ಟ್ರೀಯ ಮಟ್ಟದ ಸಹಕಾರಿ ಸಮ್ಮೇಳನ ಆಯೋಜಿಸಲಾಗಿತ್ತು. ನಾನು ಸಮ್ಮೇಳದ ಪ್ರಮುಖರೊಬ್ಬರಿಗೆ ನನ್ನ ಪರಿಚಯ ಮಾಡಿಕೊಂಡು ಮಾತನಾಡುತ್ತಿದ್ದೆ. ಅವರಿಗೆ ಆ ದಿನ ನನ್ನ 39ನೇ ಹುಟ್ಟುಹಬ್ಬ ಎಂದು ಗೊತ್ತಾಯಿತು. ಅವರು ಕೂಡಲೇ ಹುಟ್ಟುಹಬ್ಬ ಆಚರಣೆಯನ್ನು ನನಗೆ ಗೊತ್ತಾಗದಂತೆ ಆಯೋಜನೆ ಮಾಡಿದರು. ಕೇಕ್‌ ಆರ್ಡರ್‌ ಮಾಡಿ ಕ್ಯಾಂಡಲ್‌ ಇಟ್ಟು, ನನ್ನ ಕರೆದರು. ನಾನು ಕ್ಯಾಂಡಲ್‌ ಆರಿಸಬೇಕು ಎಂಬಷ್ಟರಲ್ಲಿ ವ್ಯಕ್ತಿಯೊಬ್ಬ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಜೋರಾಗಿ ಕೂಗಿಕೊಂಡ. ಅಂದು ನಮ್ಮದು ದೀಪವನ್ನು ಹಚ್ಚುವ ಸಂಸ್ಕೃತಿ, ಆರಿಸುವ ಸಂಸ್ಕೃತಿಯಲ್ಲ ಎಂದು ನನಗೆ ಅರಿವಾಯಿತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಮಾಹೆ ಅಧ್ಯಕ್ಷ ರಂಜನ್‌ ಆರ್‌. ಪೈ, ಮಾಹೆ ಕುಲಪತಿ ಡಾ| ಎಂ.ಬಿ. ವೆಂಕಟೇಶ್‌, ಮಾಹೆ ರಿಜಿಸ್ಟ್ರಾರ್‌ ಗಿರಿಧರ್‌ ಕಿಣಿ, ಶೃತಿ ಆರ್‌. ಪೈ, ಅಭಯ್‌ ಜೈನ್‌, ಮಾಹೆ ಬೆಂಗಳೂರು ಕ್ಯಾಂಪಸ್‌ ಉಪ ಕುಲಪತಿ ಪ್ರೊ| ಮಧು ವೀರ ರಾಘವನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಮಣಿಪಾಲ್‌ ಕ್ಯಾಂಪಸ್‌ ಅತ್ಯಂತ ಸುಂದರ
ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮೊಹಮದ್‌ ಯೂನಸ್‌ “ನೀವು ಹಸಿದವನಿಗೆ ಒಂದು ದಿನ ಮಾತ್ರ ಮೀನು ನೀಡಬಹುದು, ಆದರೆ ಮೀನು ಹಿಡಿಯುವುದು ಕಲಿಸಿದರೆ ಜೀವನ ಪೂರ್ತಿ ಹಸಿವು ನೀಗಿಸದಂತೆ ಎಂದಿದ್ದಾರೆ. ಅದೇ ರೀತಿ ರೀತಿ ಮಣಿಪಾಲ್‌ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಶ್ಲಾ ಸಿದರು. ರಾಮದಾಸ್‌ ಪೈ ಅವರು ಈ ರಾಜ್ಯ ಕಂಡ ಶ್ರೇಷ್ಠ ಶಿಕ್ಷಣ ತಜ್ಞರು. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ, ಇಡೀ ಮಣಿಪಾಲ್‌ ಸಮೂಹ ಸಂಸ್ಥೆಗಳು ಈ ದೇಶದ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲೇ  ಪ್ರಮುಖ ಹಾಗೂ ಆಕರ್ಷಣೀಯ ಸಂಸ್ಥೆಯಾಗಿ ರೂಪುಗೊಂಡಿದೆ. 55 ವರ್ಷಗಳ ಹಳೆಯದಾದ ಮಣಿಪಾಲ್‌ ಕ್ಯಾಂಪಸ್‌ ಅತ್ಯಂತ ಸುಂದರವಾದ ವಾತಾವರಣ ಇಲ್ಲಿದೆ. ಇದನ್ನು ನೋಡಲು ಸಂತೋಷವಾಗುತ್ತದೆ ಎಂದರು.

ಸರ್ವಕ್ಷೇತ್ರಗಳಲ್ಲೂ ಕರಾವಳಿಗರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ಎಲ್ಲ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಿಕ್ಷಣ, ವ್ಯಾಪಾರ, ಹೊಟೇಲ್‌ ಉದ್ಯಮ, ವೈದ್ಯಕೀಯ ಸೇರಿದಂತೆ ಪ್ರಮುಖ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಈಗಲೂ ಎರಡೂ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆದ ಜಿಲ್ಲೆಗಳೇ, ಆದರೆ ಕೆಲವು ವರ್ಷಗಳಿಂದ ರಾಜಕೀಯವಾಗಿ ಸಾಕಷ್ಟು ಸ್ಥಿತ್ಯಂತರಗಳು ನಡೆದು ಏರುಪೇರಾಗಿದೆ ಎಂದು ಉಪಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮೊಹಮದ್‌ ಯೂನಸ್‌ “ನೀವು ಹಸಿದವನಿಗೆ ಒಂದು ದಿನ ಮಾತ್ರ ಮೀನು ನೀಡಬಹುದು, ಆದರೆ ಮೀನು ಹಿಡಿಯುವುದು ಕಲಿಸಿದರೆ ಜೀವನ ಪೂರ್ತಿ ಹಸಿವು ನೀಗಿಸದಂತೆ ಎಂದಿದ್ದಾರೆ. ಅದೇ ರೀತಿ ರೀತಿ ಮಣಿಪಾಲ್‌ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಶ್ಲಾ ಸಿದರು. ರಾಮದಾಸ್‌ ಪೈ ಅವರು ಈ ರಾಜ್ಯ ಕಂಡ ಶ್ರೇಷ್ಠ ಶಿಕ್ಷಣ ತಜ್ಞರು. ನನಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿದೆ, ಇಡೀ ಮಣಿಪಾಲ್‌ ಸಮೂಹ ಸಂಸ್ಥೆಗಳು ಈ ದೇಶದ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲೇ ಪ್ರಮುಖ ಹಾಗೂ ಆಕರ್ಷಣೀಯ ಸಂಸ್ಥೆಯಾಗಿ ರೂಪುಗೊಂಡಿದೆ. 55 ವರ್ಷಗಳ ಹಳೆಯದಾದ ಮಣಿಪಾಲ್‌ ಕ್ಯಾಂಪಸ್‌ ಅತ್ಯಂತ ಸುಂದರವಾದ ವಾತಾವರಣ ಇಲ್ಲಿದೆ. ಇದನ್ನು ನೋಡಲು ಸಂತೋಷವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next