Advertisement

ಮಣಿಪಾಲ ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣ : ಮಹಿಳೆ ಸೇರಿ 9 ಮಂದಿ ಬಂಧನ

08:52 PM Nov 06, 2020 | sudhir |

ಮಣಿಪಾಲ : ಮಣಿಪಾಲದ ಎ.ಕೆ.ಎಮ್.ಎಸ್. ಬಸ್ ಮಾಲಕ ಸೈಫುದ್ದೀನ್ ಅವರನ್ನು ಐದು ಮಂದಿ ಅಪರಿಚಿತರ ತಂಡ ಹತ್ಯೆಗೆ ಯತ್ನಿಸಿದ ಹಿನ್ನೆಲೆಗೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ಒಂಬತ್ತು ಮಂದಿಯನ್ನು ಬಂಧಿಸುವಲ್ಲಿ ಪೋಲೀಸರ ತಂಡ ಯಶಸ್ವಿಯಾಗಿದ್ದರೆ.

Advertisement

ಬಂಧಿತರ ವಿವರ :
1. ದರ್ಶನ್ ದೇವಯ್ಯ ತಂದೆ: ಪೊನ್ನಪ್ಪ, ವಿರಾಜಪೇಟೆ
2. ಸಂತೋಷ್ , ತಂದೆ: ಕರುಣಾಕರ ಪೂಜಾರಿ, ಮಾರ್ನಾಡು, ಮೂಡುಬಿದ್ರೆ.
3. ಅನಿಲ್ ಕುಮಾರ್ ತಂದೆ:ತಿರುವೇಣಿ, ಸೋಮವಾರ ಪೇಟೆ
4. ಸುಕೇಶ್ ಪೂಜಾರಿ ತಂದೆ: ರಾಘೂ ಪೂಜಾರಿ, ಮಾರೋಡಿ, ಬೆಳ್ತಂಗಡಿ.
5. ಗೋಪಾಲ ತಂದೆ: ಪುರಾಲ, ಮಾರ್ನಾಡು. ಮೂಡುಬಿದ್ರೆ.
6. ಮೋಹನ ತಂದೆ: ಚನ್ನಪ್ಪ ಗೌಡ, ಟಿ.ಬಿ ಕ್ರಾಸ್ ಬೆಳ್ತಂಗಡಿ..
7. ಸೋಮು ತಂದೆ: ಕರಿಯಯ್ಯ, ಶ್ರೀ ರಾಂಪುರ, ಕೆ.ಆರ್ ನಗರ
8. ಮಹೇಶ್ ಬಾಬು, ತಂದೆ:ಅಶ್ವತ್ತಪ್ಪ, ಪಿರಿಯಾಪಟ್ಟಣ
9. ಸೌಭಾಗ್ಯ ಗಂಡ: ದರ್ಶನ್ ದೇವಯ್ಯ, ವಿರಾಜಪೇಟೆ

ನವೆಂಬರ್ 4 ರಂದು ಸೈಫುದ್ದೀನ್ ಅವರು ಮಣಿಪಾಲದ ತಮ್ಮ ಕಚೇರಿಯಲ್ಲಿ ಇದ್ದ ಸಂದರ್ಭ ಕಾರಿನಲ್ಲಿ ಬಂದ ಐದು ಮಂದಿ ಅಪರಿಚಿತರ ತಂಡ ಮಾರಕಾಸ್ತ್ರಗಳಿಂದ ಕಚೇರಿ ಒಳಗೆ ಪ್ರವೇಶಿಸಿ ಹತ್ಯೆಗೆ ವಿಫಲ ಯತ್ನ ನಡೆಸಿದ್ದು, ನಂತರ ತಂಡ ಕಾರಿನಲ್ಲಿ ಪರಾರಿಯಾಗಿದ್ದರು.

ಇದನ್ನೂ ಓದಿ:ರಾಯಲ್ ಎನ್ ಫೀಲ್ಡ್ Meteor 350 ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

ಈ ಕುರಿತು ಸೈಫುದ್ದೀನ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ತನಿಖೆಗಾಗಿ ಮೂರು ತಂಡಗಳನ್ನು ರಚನೆ ಮಾಡಿದ್ದರು.

Advertisement

ತನಿಖಾ ತಂಡಕ್ಕೆ ಸಿಕ್ಕಿದ ಮಾಹಿತಿಗಳ ಪ್ರಕಾರ ಆರೋಪಿಗಳು ಕಾರ್ಕಳದ ಮುರತ್ತಂಗಡಿಯಲ್ಲಿರುವ ಲಾಡ್ಜ್ ಒಂದರಲ್ಲಿ ಇರುವ ಕುರಿತು ದಾಳಿ ನಡೆಸಿದ ತಂಡ 9 ಮಂದಿಯನ್ನು ವಶಕ್ಕೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next