Advertisement

ಮಣಿಪಾಲ: ಎಂಸಿಒಡಿಎಸ್‌ ಕಾಲೇಜು ದಿನಾಚರಣೆ

06:20 AM Mar 17, 2018 | Team Udayavani |

ಉಡುಪಿ: ಮಣಿಪಾಲ್‌ ಕಾಲೇಜ್‌ ಆಫ್ ಡೆಂಟಲ್‌ ಸಾಯನ್ಸಸ್‌ನ (ಎಂಸಿಒಡಿಎಸ್‌) ವಾರ್ಷಿಕ ದಿನಾಚರಣೆ ಮತ್ತು ಬಹುಮಾನ ವಿತರಣಾ ಸಮಾರಂಭ ಶನಿವಾರ ಜರಗಿತು.

Advertisement

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಹೆ ಕುಲಪತಿ ಡಾ| ಎಚ್‌.ವಿನೋದ್‌ ಭಟ್‌ ಅವರು ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮತ್ತು ಎಂಸಿಒಡಿಎಸ್‌ ಕಳೆದ 20 ವರ್ಷಗಳಿಂದ ದೇಶದ ಟಾಪ್‌ 10 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿದ್ಯಾರ್ಥಿಗಳು ಹೆತ್ತವರನ್ನು, ಶಿಕ್ಷಕರನ್ನು ಮತ್ತು ಸಮಾಜವನ್ನು ಮರೆಯಬಾರದು ಎಂದು ಹೇಳಿದರು. 

ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು. ಅಸೋಸಿಯೇಟ್‌ ಡೀನ್‌ ಡಾ| ಜಿ.ಸುಬ್ರಾಯ ಭಟ್‌ ಸ್ವಾಗತಿಸಿದರು. ಎಂಸಿಒಡಿಎಸ್‌ ಡೀನ್‌ ಡಾ| ಕೀರ್ತಿಲತಾ ಎಂ.ಪೈ ವಾರ್ಷಿಕ ವರದಿ ಮಂಡಿಸಿದರು.
 
ಡಾ| ಸುನೈನಾಪುರಿ ಅವರು “ಬೆಸ್ಟ್‌ ಔಟ್‌ ಗೋಯಿಂಗ್‌ ಸ್ಟೂಡೆಂಟ್‌’ ಮತ್ತು “2017ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ’ ಬಹುಮಾನ ಪಡೆದರು. ಡಾ| ಸುನೈನಾ ಪುರಿ, ಡಾ| ಶರೀನ್‌ ಆರೀಫ್ ಮತ್ತು ಡಾ| ಪ್ರಬ್ಜಿàತ್‌ ಸಿಂಗ್‌ ಅವರಿಗೆ ಮಾಹೆಯ ವಿದ್ಯಾರ್ಥಿವೇತನ ನೀಡಲಾಯಿತು. 32 ಮಂದಿಗೆ “ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಲಾಯಿತು. ಡಾ| ಪ್ರತೀಕ್‌ ಪಾಟೇಲ್‌ ಅವರಿಗೆ “ಡಾ| ಟಿ.ಎಂ.ಎ ಪೈ ಚಿನ್ನದ ಪದಕ’ ನೀಡಲಾಯಿತು. ಡಾ| ಶ್ರೀಕಾಂತ್‌ ಜಿ. ಮತ್ತು ಡಾ| ಅಭಯ್‌ ಕಾಮತ್‌ ಅವರಿಗೆ ಉತ್ತಮ ಆಡಿಯೋ ವೀಶುವಲ್‌ ಟೀಚಿಂಗ್‌ ಬಹುಮಾನ ನೀಡಲಾಯಿತು.

ವಿ.ವಿ. ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದ ಸ್ನಾತಕೋತ್ತರ ಪದವಿ ವಿಭಾಗದ ಡಾ| ಮತಂಗಿ ಕುಮಾರ್‌ ಅವರನ್ನು ಅಭಿನಂದಿಸಲಾಯಿತು. ಸಂಶೋಧನಾ ಪ್ರಬಂಧಕ್ಕಾಗಿ ಡಾ| ಪ್ರತ್ಯುಷ್‌ ಸಿಂಗ್‌, ಡಾ| ಜಸ್ಲಿàನ್‌ ಗ್ರೋವ್‌, ಡಾ| ಅಭಿನವ್‌ ತಡಿಕೊಂಡ, ಡಾ| ಬಿ.ಚೈತನ್ಯ ಮತ್ತು ಡಾ| ಮಾತಂಗಿ ಕುಮಾರ್‌ ಅವರಿಗೆ “ಪ್ರೈಸ್‌’ ಬಹುಮಾನ ನೀಡಲಾಯಿತು. ಡಾ| ಪ್ರತೀಕ್‌ ಮಾನ್‌ಸಿಂಗ್‌ ಅವರು ವಿದ್ಯಾರ್ಥಿ ಸಂಘದ ವರದಿ ಮಂಡಿಸಿದರು. ಡಾ| ವಿಭಾ ತಕ್ರಾಲ್‌ ಅವರು ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು. ಡಾ| ರಶ್ಮೀ ನಾಯಕ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next