ಚಿತ್ರದ ಕಥೆ, ನಿರ್ದೇಶನ, ಶೂಟಿಂಗ್ ಸ್ಪಾಟ್, ತಾರಾಗಣ, ಹಾಡುಗಳು, ಮೇಕಿಂಗ್, ತಾಂತ್ರಿಕತೆ, ಸಂಕಲನ ಹೀಗೆ ಸಾಕಷ್ಟು ವಿಷಯಗಳಿಂದ ನೋಡಲೇ ಬೇಕಾದ ನಿರೀಕ್ಷಿತ ಸಿನೆಮಾಗಳ ಪಟ್ಟಿಯಲ್ಲಿ ಬನಾರಸ್ ಸೇರಿಕೊಂಡಿದೆ. ಈ ಚಿತ್ರ ಪಂಚ ಭಾಷೆಗಳಲ್ಲೂ ಇದೇ ಕುತೂಹಲವನ್ನ ಕಾಪಾಡಿಕೊಂಡು ಬಂದಿದೆ.
ನವೆಂಬರ್ 4 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಪಂಚ ಭಾಷೆಗಳಲ್ಲೂ ರಿಲೀಸ್ ಆಗ್ತಿರುವ ಬನಾರಸ್ ಚಿತ್ರತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಮಣಿಕರ್ಣಿಕಾ ಫಿಲ್ಮ್ ಫೆಸ್ಟಿವಲ್ ನಲ್ಲೂ ಬನಾರಸ್ ಪ್ರಚಾರಕ್ಕೆ ಇಂಬು ದೊರಕಿದಂತಾಗಿದೆ.
ಹೌದು ಬೇರೆ ಬೇರೆ ರಾಜ್ಯಗಳ ಸುತ್ತಿ, ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ಕೊಡುತ್ತಾ ತಮ್ಮ ಸಿನೆಮಾ ಪ್ರಚಾರದಲ್ಲಿ ಮಗ್ನರಾಗಿದ್ದ ಬನಾರಸ್ ಜೋಡಿ ಝೈದ್ ಖಾನ್ ಹಾಗೂ ಸೋನಲ್ ಮೊಂತೆರೋ ಗೆ ಪ್ರಸಿದ್ಧ ಮಣಿಕರ್ಣಿಕಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡು ತಮ್ಮ ಸಿನೆಮಾ ಪ್ರಚಾರದೊಂದಿಗೆ , ಬಾಲಿವುಡ್ ಹಿರಿಯ ನಟ ಸಂಜಯ್ ಮಿಶ್ರಾ ರಿಂದ ಸನ್ಮಾನ ಸ್ವೀಕರಿಸುವ ಭಾಗ್ಯ ಒಲಿದು ಬಂದಿದೆ.
ಹೌದು ಪ್ರಚಾರ ಕಾರ್ಯದ ನಿಮಿತ್ತ ವಾರಣಾಸಿಗೆ ಬಂದಿಳಿದ ಬನಾರಸ್ ಜೋಡಿಗೆ, ಇದೇ ಮೊದಲ ಬಾರಿಗೆ ವಾರಣಾಸಿಯಲ್ಲಿ ನಡೆಯುತ್ತಿರುವ ಮಣಿಕರ್ಣಿಕಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗುವ ಆಹ್ವಾನ ದೊರಕಿತ್ತು. ಜೊತೆಗೆ ಆ ಕಾರ್ಯಕ್ರಮವನ್ನು ಬಾಲಿವುಡ್ ನ ಹಿರಿಯ ನಟ ಸಂಜಯ್ ಮಿಶ್ರಾ ಉದ್ಘಾಟಿಸಿ, ಬಳಿಕ ಅವರೇ ಖುದ್ದಾಗಿ ಬನಾರಸ್ ಜೋಡಿಯನ್ನು ಸನ್ಮಾನಿಸಿದ್ದಾರೆ. ಬಾಲಿವುಡ್ ನಲ್ಲೂ ಈಗಾಗಲೇ ಸದ್ದು ಮಾಡಿರುವ ಬನಾರಸ್ ಗೆ ಗೆಲುವಾಗಲೆಂದು ಶುಭ ಹಾರೈಸಿದ್ದಾರೆ. ಸಂಜಯ್ ಮಿಶ್ರಾ ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ಪ್ರತಿಭಾವಂತ ಹಿರಿಯ ನಟ. ದೂರದರ್ಶನವೂ ಸೇರಿದಂತೆ ಅನೇಕ ಭೂಮಿಕೆಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಮಿಶ್ರಾ ಬನಾರಸ್ ಬಗ್ಗೆ ಭರವಸೆಯ ಮಾತುಗಳನ್ನಾಡಿರೋದು, ನವನಾಯಕ ಝೈದ್ ಖಾನ್ ಅವರಿಗೆ ಹೊಸಾ ಚೈತನ್ಯ ನೀಡಿದಂತಾಗಿದೆ.
ಒಂದೊಳ್ಳೆ ಟರ್ನಿಂಗ್ ಅಂಡ್ ಟ್ವಿಸ್ಟ್ ಹೊಂದಿರೋ ಪ್ರೇಮಕಥಾನಕ ಚಿತ್ರವೇ ಈ ಬನಾರಸ್. ಚಿತ್ರಕ್ಕೆ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ಈಗಾಗಲೇ ಮೋಡಿ ಮಾಡಿದ್ದಾಗಿದೆ. ಇನ್ನುಳಿದಂತೆ ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದೊಂದಿಗೆ ಮೂಡಿ ಬಂದಿರುವ ಬನಾರಸ್ ಗೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡುವಳ್ಳಿ ಸಂಭಾಷಣೆ ಇರುವ ಚಿತ್ರದ ತಾರಬಳಗ ದೇವರಾಜ್, ಅಚ್ಯುತ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಸೇರಿದಂತೆ ಹಲವು ಕಲಾವಿದರ ಶ್ರಮ ನವೆಂಬರ್ 4 ರಂದು ದೇಶಾದ್ಯಂತ ಸಿನಿಪ್ರಿಯರ ಮುಂದೆ ಅನಾವರಣಗೊಳ್ಳಲಿದೆ.