Advertisement

ನಾಗರಹೊಳೆ ರಸ್ತೆಗೆ ಐ.ಎಫ್.ಎಸ್. ಅಧಿಕಾರಿ ದಿ.ಮಣಿಕಂದನ್ ಹೆಸರು ನಾಮಕರಣ

05:20 PM Mar 04, 2022 | Team Udayavani |

ಹುಣಸೂರು : ವಿಶ್ವ ವನ್ಯಜೀವಿ ದಿನದ ಅಂಗವಾಗಿ ಐ.ಎಫ್.ಎಸ್.ಅಧಿಕಾರಿ ದಿ.ಮಣಿಕಂದನ್‌ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಉದ್ಯಾನದ ಡಿ.ಬಿ.ಕುಪ್ಪೆ.ವಲಯದ ಕಾಕನಕೋಟೆ ಶಾಖೆಯ ಕಾಟಿಗುಂಡಿ ಕೆರೆ ಬಳಿ ನಡೆದ ಕಾರ್ಯಕ್ರಮದಲ್ಲಿ ಕಾಟಿಗುಂಡಿ ಕೆರೆ ಬಳಿಯಿಂದ ಕಬಿನಿ ಹಿನ್ನೀರಿಗೆ ತೆರಳುವ ರಸ್ತೆಗೆ ನಾಗರಹೊಳೆಯಲ್ಲೇ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ದಿ.ಮಣಿಕಂದನ್ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಉದ್ಯಾನದಲ್ಲಿ ಚಿರಸ್ಥಾಯಿಯಾಗಿಸಲಾಯಿತು.

ಉತ್ತಮ ಸಿಬ್ಬಂದಿಗಳಿಗೆ ಸನ್ಮಾನ:
ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಾಗರಹೊಳೆ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉದ್ಯಾನದ ವಿವಿಧ ವಲಯಗಳಲ್ಲಿ ಉತ್ತಮ ಸೇವೆ ಗೈದ ಅರಣ್ಯ ಸಿಬ್ಬಂದಿಗಳಿಗೆ ಹುಲಿಯೋಜನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಂರವರು ಪ್ರಶಂಸನೀಯ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಈ ವೇಳೆ ಹುಲಿಯೋಜನೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಂ, ಅಂತರಸAತೆ ಹಾಗೂ ನಾಗರಹೊಳೆ, ಹುಣಸೂರು ವಲಯಗಳ ಎ.ಸಿ.ಎಫ್.ಗಳಾದ ಸತೀಶ್, ಗೋಪಾಲ್, ಮಹದೇವು, ಆರ್.ಎಫ್.ಓ.ಗಳಾದ ಕಿರಣ್‌ಕುಮಾರ್, ಗಿರೀಶ್‌ಚೌಗುಲೆ, ನಮನ್‌ನಾರಾಯಣ್ ನಾಯಕ, ಸಂತೋಷ್ ಹೂಗಾರ್, ಹನುಮಂತರಾಜು, ಮಹಮದ್ ಜೀಷಾ ಮತ್ತಿತರರಿದ್ದರು.

ಇದನ್ನೂ ಓದಿ : ಪುಣ್ಯಕೋಟಿ ದತ್ತು ಯೋಜನೆ,ಉಚಿತ ಬಸ್ ಪಾಸ್; ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು ಯಾವುವು?

Advertisement
Advertisement

Udayavani is now on Telegram. Click here to join our channel and stay updated with the latest news.

Next