ಬೆಂಗಳೂರು: ನಾವು ಚುನಾವಣೆವಗೂ ಮೊದಲು ಪ್ರಣಾಳಿಕೆಯನ್ನು ಘೋಷಿಸಿದ್ದೆವು. ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದೆವು. ಆದರೆ ಈಗ ಯೋಜನೆಗಳ ಜಾರಿ ಕಷ್ಟವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ಚಾವುಂಡರಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏನೇ ಆದರೂ ನುಡಿದಂತೆ ನಡೆದುಕೊಳ್ಳುತ್ತೇವೆ. ಗ್ಯಾರಂಟಿಗಳನ್ನು ಜಾರಿಗೊಳಿಸಿಯೇ ತೀರುತ್ತೇವೆ. ಈ ವಿಚಾರದಲ್ಲಿ ಪಲಾಯನ ಮಾಡುವುದಿಲ್ಲ ಎಂದರು.
ಇದನ್ನೂ ಓದಿ:‘ಧೋನಿ ನನ್ನ ಅನುಮತಿ ಕೇಳಿದ್ದರು…’ CSK ತಂಡದಿಂದ ಹೊರಗುಳಿದ ಬಗ್ಗೆ ಗುಟ್ಟು ಬಿಚ್ಚಿಟ್ಟ ರೈನಾ
ನೂತನ ಸಚಿವರಿಗೆ ಪಾಠ: ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪರಮೇಶ್ವರ್ ಸಮಯದ ಪಾಠ ಮಾಡಿದರು.
“ಯಾಕಪ್ಪಾ ಇಷ್ಟು ತಡವಾಗಿ ಬರುತ್ತೀಯಾ? ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಬರಬೇಕು. ಇಲ್ಲದೇ ಹೋದರೆ ಜನರು ಸಚಿವರ ಬಗ್ಗೆ ಮಾತನ್ನಾಡಿಕೊಳ್ಳುತ್ತಾರೆ. ಸಚಿವರೇ ತಡವಾಗಿ ಬರುತ್ತಾರೆಂದು ಮಾತನ್ನಾಡುತ್ತಾರೆ” ಎಂದ ಹೇಳಿದರು. ಇದಕ್ಕೆ ಶಿವರಾಜ ತಂಗಡಗಿ ನಗುತ್ತಲೇ ತಲೆಯಾಡಿಸಿ ವೇದಿಕೆಯಲ್ಲಿ ಬಂದು ಕುಳಿತುಕೊಂಡರು.