Advertisement

ಮ್ಯಾಂಗೊ’ಲೋರ್‌: ದಿಲ್‌ ಮ್ಯಾಂಗೋ ಮೋರ್‌

09:00 AM Apr 28, 2019 | Vishnu Das |

ಆನ್‌ಲೈನ್‌, ಸೂಪರ್‌ ಮಾರ್ಕೆಟ್‌ಗಳ ಭರಾಟೆಯ ನಡುವೆಯೂ ಸಾಲು ಸಾಲಾಗಿ ನಿಂತ ಮಾವಿನ ಗಾಡಿಗಳ ಎದುರು ರೇಟ್‌ ವಿಚಾರಿಸುತ್ತಾ ಪರೇಡ್‌ ನಡೆಸುವುದರಲ್ಲೇನೋ ಸುಖವಿದೆ. ಮಾವಿನ ಮಾರ್ಕೆಟ್‌ನಲ್ಲಿ ಬ್ಯಾಗ್‌ ತುಂಬಿ ತುಳುಕುವಂತೆ ಮಾವನ್ನು ಕೊಂಡುಕೊಂಡು ಮನೆಗೆ ಹೋಗುವುದರಲ್ಲೇನೋ ನೆಮ್ಮದಿಯಿದೆ.

Advertisement

ದಾರಿ ಬದಿಯ ಗಾಡಿಗಳಲ್ಲಿ, ಹಣ್ಣಿನ ಅಂಗಡಿಗಳ ಬುಟ್ಟಿಗಳಲ್ಲಿ ಮಾವು ಇಣುಕತೊಡಗಿವೆ. ಜ್ಯೂಸ್‌ ಅಂಗಡಿಗಳಿಗೆ ಹೋದಾಗಲೆಲ್ಲಾ ಮಾವು ಇನ್ನೂ ಬಂದಿಲ್ಲವೆಂದು ಹೇಳಿಸಿಕೊಂಡು ನಿರಾಶರಾಗುತ್ತಿದ್ದವರಿಗೆ ಇದು ಸಂತಸದ ಸಮಯ. ಜ್ಯೂಸ್‌ ಅಂಗಡಿಯ ಮೆನುನಲ್ಲಿ ಮ್ಯಾಂಗೋ ಜ್ಯೂಸ್‌ ಸೇರ್ಪಡೆಯಾಗಿದೆ.

ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವು ಮುಘಲ್‌ ಕಾಲದ ಕವಿ ಗಾಲಿಬ್‌ನನ್ನೇ ಬುಟ್ಟಿಗೆ ಹಾಕಿಕೊಂಡಿತ್ತು. ಎಷ್ಟರಮಟ್ಟಿಗೆ ಎಂದರೆ ಮಾವಿನ ಕುರಿತೇ ಒಂದು ಪದ್ಯವನ್ನು ಬರೆಯುವಷ್ಟು! ಇನ್ನು ನಾವೆಲ್ಲಾ ಯಾವ ಲೆಕ್ಕ? ಗಾಲಿಬ್‌ ಮಾವಿನ ಕುರಿತು ಬರೆದಿದ್ದು-
ಮಾವಿನಹಣ್ಣಿಗೆ ಮುಖ್ಯವಾಗಿ ಎರಡು ಗುಣಗಳಿರಬೇಕು
ಸಿಹಿಯಾಗಿರಬೇಕು ಮತ್ತು ಯಥೇತ್ಛವಾಗಿರಬೇಕು
ಗಾಲಿಬನ ಇವೆರಡೂ ಅರ್ಹತೆಗಳನ್ನು ಪೂರೈಸುವ ನಗರದ ಕೆಲ ಪ್ರಮುಖ ಮಾವು ಶಾಪಿಂಗ್‌ ಸ್ಥಳಗಳು ಇಲ್ಲಿವೆ.

-ಜಿಕೆವಿಕೆ(ಗಾಂಧಿ ಕೃಷಿ ವಿಜ್ಞಾನ ಕೇಂದ್ರ)- ಸಹಕಾರನಗರದಲ್ಲಿರುವ ಜಿ.ಕೆವಿಕೆ ಕೃಷಿ ಕಾಲೇಜು ನೂರಾರು ಎಕರೆಗಳಷ್ಟು ಮಾವಿನ ಹಣ್ಣಿನ ತೋಟ ಹೊಂದಿದೆ. ಸ್ಥಳೀಯ ತಳಿಗಳಲ್ಲದೆ, ಹೈಬ್ರಿಡ್‌ ಮಾವನ್ನೂ ಇಲ್ಲಿ ಬೆಳೆಸಲಾಗುತ್ತದೆ. ಬೇಸಗೆಯಲ್ಲಿ ಕ್ಯಾಂಪಸ್‌ನ ಒಳಗೆ ಮಾವಿನ ಮಾರುಕಟ್ಟೆ ತೆರೆಯಲ್ಪಡುತ್ತದೆ. ಅಲ್ಲಿಯೇ ಬೆಳೆದ ಮಾವನ್ನು ಗ್ರಹಕರು ದೂರದಿಂದೆಲ್ಲಾ ಬಂದು ಕೊಳ್ಳುತ್ತಾರೆ. ಮಾರುಕಟ್ಟೆಯ ಬೆಲೆಯೇ ಆಗಿದ್ದರೂ ತಾಜಾತನದಿಂದ ಕೂಡಿರುವುದರಿಂದ ಗ್ರಾಹಕರು ಇಲ್ಲಿಗೆ ಬರುತ್ತಾರೆ.

-ಜಯಮಹಲ್‌ ರಸ್ತೆ
ಜೆ.ಸಿ.ನಗರದ ಟಿವಿ ಟವರ್‌ ಬಳಿ ಪ್ರತಿ ವರ್ಷ ಏಪ್ರಿಲ್‌ನಿಂದ ಜೂನ್‌ ತನಕ ತೆರೆದುಕೊಳ್ಳುವ ಮಾವಿನ ಮಾರುಕಟ್ಟೆ 1960ರಿಂದಲೇ ಕಾರ್ಯಾಚರಿಸುತ್ತಿದೆ ಎನ್ನಲಾಗುತ್ತದೆ. ಒಂದು ಕಿ.ಮೀ ಉದ್ದಕ್ಕೆ ಚಾಚಿಕೊಂಡಿರುವ ಇಲ್ಲಿನ ಮಾವು ಮಾರುಕಟ್ಟೆಯಲ್ಲಿ ದೇಶಾದ್ಯಂತ ಪ್ರಚಲಿತದಲ್ಲಿರುವ ಸುಮಾರು 50 ಬಗೆಯ ಮಾವಿನಹಣ್ಣುಗಳ ರುಚಿಯನ್ನು ಸವಿಯಬಹುದು. ನಗರದ ಹೆಸರಾಂತ ಮಾವು ಮಾರುಕಟ್ಟೆಗಳಲ್ಲಿ ಜಯಮಹಲ್‌ ರಸ್ತೆಯ ಮಾರುಕಟ್ಟೆ ಪ್ರಮುಖವಾದುದು. ಮಾವು ಮಾರಲೆಂದೇ ಹೊರರಾಜ್ಯಗಳಿಂದ ಇಲ್ಲಿಗೆ ಬರುವವರಿದ್ದಾರೆ ಎಂದರೆ ಇಲ್ಲಿನ ಪ್ರಖ್ಯಾತಿಯನ್ನು ತಿಳಿಯಬಹುದು.

Advertisement

– ಲಾಲ್‌ಬಾಗ್‌
ಇಲ್ಲಿನ ಮಾವುಮೇಳದ ಬಗ್ಗೆ ಹೆಚ್ಚೇನೂ ಹೇಳುವುದೇ ಬೇಕಿಲ್ಲ. ಮೇ ಮಧ.Âಭಾಗದಲ್ಲಿ ನಡೆಯುವ ಮಾವು ಮೇಳಕ್ಕೆ ಬರುವವರೆಲ್ಲರೂ ತಮ್ಮ ಜೊತೆ ಏನಿಲ್ಲವೆಂದರೂ ಎರಡು ಮಾರು ಬ್ಯಾಗುಗಳನ್ನು ಒಯ್ಯುತ್ತಾರೆ. ಹೊರಬರುವಾಗ ಅವಷ್ಟನ್ನೂ ತುಂಬಿಕೊಂಡು ಬರುತ್ತಾರೆ. ಕುಟುಂಬ ಸಮೇತ ಇಲ್ಲಿಗೆ ಬಂದು ಮಾವಿನಹಣ್ಣಿನ ಶಾಪಿಂಗ್‌ನಲ್ಲಿ ತೊಡಗುವುದು ಒಂದು ರೀತಿಯಲ್ಲಿ ಸಂಪ್ರದಾಯದಂತೆ ಪಾಲಿಸಿಕೊಂಡು ಬರುತ್ತಿರುವವರೂ ಇದ್ದಾರೆ. ಈ ವರ್ಷದ ಲಾಲ್‌ಬಾಗ್‌ ಮಾವು ಮೇಳಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

– ರಸೆಲ್‌ ಮಾರುಕಟ್ಟೆ
ನಗರದ ಪುರಾತನ ಮಾರುಕಟ್ಟೆಗಳಲ್ಲೊಂದಾದ ಶಿವಾಜಿನಗರದ ರಸೆಲ್‌ ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳು, ಅಪರೂಪದ ಹಣ್ಣುಗಳಾದ ಡ್ರ್ಯಾಗನ್‌ ಫ‌ೂÅಟ್‌, ಕಿವಿ ಅಷ್ಟು ಮಾತ್ರವೇ ಇಲ್ಲ. ಒಳಹೊಕ್ಕರೆ ಮಾವಿನ ಲೋಕವೂ ತೆರೆದುಕೊಳ್ಳುತ್ತದೆ. ರಸಪುರಿ, ಅಲೊ#àನ್ಸೋ ಸೇರಿದಂತೆ ಥರಹೇವಾರಿ ಮಾವು ಇಲ್ಲಿ ಲಭ್ಯ.

– ಕೆ. ಆರ್‌. ಮಾರುಕಟ್ಟೆ
ನಗರಕ್ಕೆ ಅಗತ್ಯವಿರುವ ಎಲ್ಲವನ್ನೂ ಸರಬರಾಜು ಮಾಡುವ ಕೆ.ಆರ್‌ ಮಾರುಕಟ್ಟೆಯಲ್ಲಿ ನಗರದ ಹಲವು ಭಾಗಗಳಿಗೆ ಮಾವನ್ನು ಸರಬರಾಜು ಮಾಡುತ್ತದೆ. ಸಾಮಾನ್ಯವಾಗಿ ಹಣ್ಣಿನ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರಾದರೂ ಇಲ್ಲಿಗೇ ಬಂದು ಮಾವನ್ನು ಕೊಳ್ಳುವವರ ಸಂಖ್ಯೆಯೂ ಕಮ್ಮಿಯೇನಿಲ್ಲ. ಆದರೆ ಮಾರುಕಟ್ಟೆ ಜನರಿಂದ ಗಿಜಿಗುಡುವುದರಿಂದ ಬೆಳಗ್ಗೆ ಬಹಳ ಬೇಗ ಬಂದರೆ ಒಳ್ಳೆಯದು.

– ಎಚ್‌.ಎ.ಎಲ್‌ ಮಾರ್ಕೆಟ್‌
ಕೆ.ಆರ್‌. ಮಾರ್ಕೆಟ್‌ನಂತೆಯೇ ಕಿಕ್ಕಿರಿದು ತುಂಬಿರುವ ಮಾರುಕಟ್ಟೆ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಎಚ್‌.ಎ.ಎಲ್‌ ಮಾರ್ಕೆಟ್‌. ಇಲ್ಲಿನ ಗಲ್ಲಿಗಳಲ್ಲಿ ನುಗ್ಗಿದಾಗಲಷ್ಟೇ ಇದರ ವ್ಯಾಪ್ತಿ ಅರಿವಾಗುವುದು. ತರಕಾರಿ ಶಾಪಿಂಗ್‌ಗೆ ಬರುವಷ್ಟೇ ಸಗಟು ವ್ಯಾಪಾರಸ್ಥರೂ ಬಂದಿರುತ್ತಾರೆ. ಹೀಗಾಗಿ ಸದಾ ಗಿಜಿಗುಡುತ್ತಿರುತ್ತದೆ. ಇಲ್ಲಿಯೂ ಥರಹೇವಾರಿ ಮಾವಿನ ತಳಿಗಳ ರುಚಿ ನೋಡಬಹುದು.

ಮ್ಯಾಂಗೋ ಟೂರಿಸಂ
ಕಾಂಕ್ರೀಟ್‌ ಕಾಡಿನಲ್ಲಿರುವವರಿಗೆ ಯಾವಾಗಲೂ ಹಸಿರು ಕಾಡಿನದೇ ಧ್ಯಾನ. ದಿನ ಬೆಳಗಾದರೆ ಕಂಪ್ಯೂಟರ್‌ ಮುಂದೆ ಕೂರುವ ದಂಪತಿಗಳಿಗೆ ತಮ್ಮ ಮಕ್ಕಳಿಗೆ ತಾವು ಬೆಳೆದ ಬಾಲ್ಯವನ್ನು ಸವಿಯನ್ನು ಉಣಿಸಬೇಕೆಂಬ ಹಪಾಹಪಿ. ಅದಕ್ಕೆ ನೆಪವಾಗಿ ಪರಿಣಮಿಸಿದೆ ಮ್ಯಾಂಗೊ ಟೂರ್‌. ನಗರದ ಹೊರವಲಯದಲ್ಲಿರುವ ಮಾವಿನ ಫಾರ್ಮ್ಗಳ ಮಾಲೀಕರು ಈ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ನಿರ್ದಿಷ್ಟ ದಿನದಂದು ಆಸಕ್ತರು ಫಾರ್ಮಿಗೆ ಭೇಟಿ ನೀಡಿ ಹಳ್ಳಿ ಆಟಗಳು, ಎತ್ತಿನ ಬಂಡಿ ಸವಾರಿ, ಟ್ರ್ಯಾಕ್ಟರ್‌ ಸವಾರಿ, ಕುಂಟೆ ಬಿಲ್ಲೆ ಮುಂತಾದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಅಲ್ಲದೆ ಮುಖ್ಯವಾಗಿ ಮಾವಿನ ತೋಪುಗಳಲ್ಲಿ ನಡೆದಾಡುವ, ನೇರವಾಗಿ ಮರದಿಂದಲೇ ಹಣ್ಣು ಕೊಯ್ಯುವ ಸುವರ್ಣಾವಕಾಶವನ್ನು ಇಂಥಾ ಕಾರ್ಯಕ್ರಮಗಳು ಒದಗಿಸುತ್ತವೆ. ನಗರದ ಅನೇಕ ಸಂಘಸಂಸ್ಥೆಗಳೂ ಮ್ಯಾಂಗೋ ಟೂರಿಸಂಅನ್ನು ಆಯೋಜಿಸುವಲ್ಲಿ ನಿರತವಾಗಿವೆ. “ಮಣ್‌ಮಯೀ’ ಅಂಥ ಸಂಸ್ಥೆಗಳಲ್ಲೊಂದು. ಮೇ ತಿಂಗಳ ಮಧ್ಯದಲ್ಲಿ ಅವರು ಕಾರ್ಯಕ್ರಮವನ್ನು ಮಾವಿನ ತೋಟದಲ್ಲಿ ಆಯೋಜಿಸುತ್ತಾರೆ.

ಮಣ್‌ಮಯಿ- ಕೀರ್ತಿಪ್ರಸಾದ್‌
9611105029
manmayeeblr.blogspot.com

ಅದಿತಿ ಫಾರ್ಮ್ಸ್‌ , ಕನಕಪುರ ರಸ್ತೆ
9886400312

ಚಿಗುರು ಫಾರ್ಮ್ಸ್‌, ದೊಡೂxರು, ಕನಕಪುರ
9845258575

ಕೊಳ್ಳುವ ಮುನ್ನ ಸವಿ ಮಾತು!
1. ಸಿಹಿಯ ಪರಿಮಳ ಹೇಗಿರುತ್ತದೆ ಎನ್ನುವುದು ಮಾವುಪ್ರಿಯರಿಗಷ್ಟೇ ಗೊತ್ತು! ಹುಳಿ ವಾಸನೆ ಬಂದರೆ ಜಾಸ್ತಿ ಹಣ್ಣಾಗಿದೆ ಎಂದರ್ಥ.
2. . ಮಾವನ್ನು ಮೃದುವಾಗಿ ಕೈಯಲ್ಲಿ ಹಿಡಿಯುವುದರ ಮೂಲಕ ಮಾವು ಚೆನ್ನಾಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು. ಅಪ್ಪಚ್ಚಿಯಾಗುವಷ್ಟು ಮೃದುವಿದ್ದರೆ ಹಣ್ಣನ್ನು ಮನೆಯಲ್ಲಿ ತುಂಬಾ ದಿನಗಳ ಕಾಲ ಇಡಲಾಗುವುದಿಲ್ಲ.
3. ಪರಿಚಿತ ಅಥವಾ ಪ್ರಮಾಣೀಕೃತ ಸ್ಥಳಗಳಲ್ಲಿ ಮಾವನ್ನು ಖರೀದಿಸಿ
4. ಹಣ್ಣು ಸುಕ್ಕುಗಟ್ಟಿದ್ದರೆ ಕೊಳ್ಳದಿರಿ
5. ಚೆನ್ನಾಗಿ ಹಣ್ಣಾದ ಮಾವಿನ ತೂಕ, ಪೂರ್ತಿ ಹಣ್ಣಾಗದ ಅಥವಾ ಕಾಯಿಯ ತೂಕಕ್ಕಿಂತ ಹೆಚ್ಚಿರುತ್ತದೆ.
6. ಫ್ರಿಜ್‌ನಲ್ಲಿಡುವುದರಿಂದ ಹಣ್ಣಿನ ಸಿಹಿ ಕಡಿಮೆಯಾಗುತ್ತದೆ.

ಸಾವಯವ ಮತ್ತು ರಾಸಾಯನಿಕ ವಿಧಾನ ಬಳಸಿ ಹಣ್ಣಾಗಿಸಿದ ಮಾವನ್ನು ಬರಿಗಣ್ಣಿನಿಂದ ಪತ್ತೆ ಮಾಡುವುದು ಕಷ್ಟ. ಈ ರಾಸಾಯನಿಕಗಳು ಹಣ್ಣಿನ ಒಳಗೆ ಇರುವುದಿಲ್ಲ, ಮೇಲ್ಮೆ„ಯಲ್ಲಷ್ಟೆ ಇರುತ್ತದೆ. ಹೀಗಾಗಿ ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ತಿನ್ನಬೇಕು. ಕೆಲವೆಡೆ ಅಂಗಡಿಗಳಲ್ಲಿ ರಾಸಾಯನಿಕವನ್ನು ಕುಂಕುಮದ ಪೊಟ್ಟಣದಂತೆ ನ್ಯೂಸ್‌ಪೇಪರ್‌ನಲ್ಲಿ ಪೊಟ್ಟಣ ಕಟ್ಟಿ ಹಣ್ಣುಗಳ ನಡುವೆ ಇರಿಸಿ ಮಾವಿನಕಾಯಿಯನ್ನು ಹಣ್ಣಾಗಿಸುತ್ತಾರೆ. ಗ್ರಾಹಕರು ಇದನ್ನು ಗಮನಿಸಿ ಅ ಅಂಗಡಿಗಳಿಂದ ದೂರವುಳಿಯಬಹುದು.
– ಬಿ.ಎನ್‌. ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್‌

ಮಾವು ಅಂದರೆ ತುಂಬಾ ಇಷ್ಟ. ಜಯಮಹಲ್‌ನ ಮ್ಯಾಂಗೋ ಮಾರ್ಕೆಟ್‌ನಲ್ಲೇ ನನ್ನ ಮ್ಯಾಂಗೋ ಶಾಪಿಂಗ್‌ ನಡೆಯುತ್ತೆ. ವೀಕ್‌ಡೇಸ್‌ನಲ್ಲಿ ಆಫೀಸ್‌ ಕೆಲಸ ಅಂತ ಬ್ಯುಸಿ ಇರಿ¤àನಿ. ಹಾಗಾಗಿ ಶನಿವಾರ, ಭಾನುವಾರ ಮನೆ ಮಂದಿ ಜೊತೆ ಮಾವು ಖರೀದಿಸುತ್ತೇನೆ. ಇಲ್ಲಿನ ಮಾರುಕಟ್ಟೆಯಲ್ಲಿ ತುಂಬಾ ಆಯ್ಕೆಗಳಿರುತ್ತವೆ.
– ಕರೀಷ್ಮಾ ಉಚ್ಚಿಲ್‌, ಐಟಿ ಉದ್ಯೋಗಿ, ನಾಗವಾರ

Advertisement

Udayavani is now on Telegram. Click here to join our channel and stay updated with the latest news.

Next