Advertisement
ಏಷ್ಯಾ ಖಂಡದಲ್ಲಿಯೆ ಹೆಚ್ಚು ಮಾವು ಬೆಳೆಯುವ ಹೆಗ್ಗಳಿಕೆ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಇದೆ. ಅದರಲ್ಲೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹಾಗೂ ಜಿಲ್ಲೆಯ ಚಿಂತಾಮಣಿ ತಾಲೂಕು ಹೆಚ್ಚು ಮಾವು ಬೆಳೆ ಪ್ರದೇಶ ಹೊಂದಿದ್ದು ಚಿಂತಾಮಣಿ ತಾಲೂಕು ಒಂದರಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಮಾವು ಬೆಳೆಯಲಾಗುತ್ತಿದೆ.
Related Articles
Advertisement
ಪ್ರಸ್ತುತ ಆಂಧ್ರದ ಮಾವು ಜಿಲ್ಲೆಯ ಮಾರುಕಟ್ಟೆ ಪ್ರವೇಶಿಸಿದೆ. ಆಂಧ್ರದಲ್ಲಿ ತೋತಾಪುರಿ, ಬೇನಿಷಾ, ನಿಲಂ, ಮಲ್ಲಿಕಾ ಮಾವುಗೆ ಹೆಚ್ಚು ಹೆಸರುವಾಸಿಯಾಗಿದೆ. ಆಂಧ್ರದ ಮಾವುಗೆ ಅಲ್ಲಿನ ವಾತಾವರಣ ಹೊಂದಿಕೆಯಾಗಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನವೇ ಆಂಧ್ರದ ಮಾವು ಜಿಲ್ಲೆಯ ಜನರ ಕೈ ಸೇರುತ್ತಿದೆ. ಜಿಲ್ಲೆಯ ಮಾವುಗೆ ಈ ಬಾರಿ ಮಳೆ ಕೊರತೆ ಜತೆಗೆ ತೀವ್ರ ಬಿಸಿಲಿನ ಪರಿಣಾಮ ಕೊಯ್ಲಿಗೆ ಬಂದಿರುವ ಮಾವು ಉದುರುವ ಮೂಲಕ ಸಾಕಷ್ಟು ಪ್ರಮಾಣದ ಮಾವು ರೈತನ ಕೈಗೆ ಸಿಗದೇ ಮಣ್ಣು ಪಾಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತೆ ಮಾಡಿದೆ. ಇದರಿಂದ ಆಂಧ್ರದ ಮಾವುಗೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಕೆ.ಜಿ. ಮಾವು 80 ರಿಂದ 100 ರು, ವರೆಗೂ ಮಾರಾಟವಾಗುತ್ತಿದೆ. ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವವರೆಗೂ ಆಂಧ್ರದ ಮಾವುಗೆ ಬೆಲೆ ಇರಲಿದೆ.
ಜಿಲ್ಲೆಯಲ್ಲಿ ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವಿನ ಇಳುವರಿ ಸಾಕಷ್ಟು ಕುಸಿದಿದೆ. ಹೆಕ್ಟೇರ್‌ಗೆ ಸರಾಸರಿ 3-4 ಟನ್ ಮಾವು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 10,500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದ್ದು ತೋತಾಪುರಿ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ಸಾಮಾನ್ಯವಾಗಿ ಮೇ.15 ರ ನಂತರ. ತಾಪಮಾನ ಹೆಚ್ಚಳದಿಂದ ಬಿಸಿಗಾಳಿಗೆ ಮಾವು ಉದುರುತ್ತಿದೆ.-ಗಾಯತ್ರಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು
ಆರಂಭದಲ್ಲಿ ನಮ್ಮ ಮಾವಿನ ತೋಟ ತುಂಬ ಚೆನ್ನಾಗಿತ್ತು. ಹೂ ಬಿಟ್ಟಿದ್ದನ್ನು ಗಮನಿಸಿ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷೆ ಮಾಡಿದ್ದವು. ಆದರೆ, ಸಕಾಲದಲ್ಲಿ ಮಳೆ ಆಗದೇ ಇದ್ದಿದ್ದು ಈಗ ಬಿಸಿಗಾಳಿ ಆವರಿಸಿರುವುದರಿಂದ ಬಹಳಷ್ಟು ಮಾವು ಕೊಯ್ಲಿಗೆ ಬರುವ ಮೊದಲು ಉದುರುತ್ತಿವೆ. ಇದರಿಂದ ನಮಗೆ ಲಕ್ಷಾಂತರ ರೂ. ನಷ್ಟ ಆಗಿದೆ.-ನರಸಿಂಹರೆಡ್ಡಿ, ಚಿಂತಾಮಣಿಯ ಬಾರ‌್ಲಹಳ್ಳಿ ಮಾವು ಬೆಳೆಗಾರ
-ಕಾಗತಿ ನಾಗರಾಜಪ್ಪ