Advertisement
ಮಧುಮೇಹ ನಿಯಂತ್ರಣಮಾವಿನ ಎಲೆಗಳು ಮಧುಮೇಹಿಗಳಿಗೆ ಉತ್ತಮವಾದ ಔಷಧ. ಇದರ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿರಿಸುವ ಸಾಮರ್ಥ್ಯ ಹೊಂದಿದೆ. 3ರಿಂದ 4 ಮಾವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಅನಂತರ ಸುಮಾರು 24 ಗಂಟೆಗಳ ಕಾಲ ಹಾಗೆಯೇ ಬಿಟ್ಟು. ಮರುದಿನ ಬೆಳಗ್ಗೆ ಆ ಬೇಯಿಸಿದ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ತರಬಹುದು.
ಅಸ್ತಮಾ ರೋಗ ನಿಯಂತ್ರಣಕ್ಕೆ ಮಾವಿನ ಎಲೆಗಳು ಔಷಧಯಾಗಿವೆ. ನೀರಿನಲ್ಲಿ ಮಾವಿನ ಎಲೆಯನ್ನು ಕುದಿಸಿ ಕುಡಿಯುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು. ಸೋಂಕಿನಿಂದ ರಕ್ಷಣೆ
ಮಾವಿನ ಎಲೆಗಳಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಔಷಧ ಗುಣಗಳು ಹಲವು ರೀತಿಯ ಬ್ಯಾಕ್ಟೀರಿಯಾಗಳ ಸೋಂಕಿನಿಂದ ದೇಹವನ್ನು ರಕ್ಷಿಸುತ್ತವೆ. ವಿಶೇಷವಾಗಿ ಜೀರ್ಣ ಕ್ರಿಯೆಯಲ್ಲಿ ತೊಂದರೆ ಮತ್ತು ಗಡ್ಡೆಗಳಾಗದಂತೆ ನೋಡಿಕೊಳ್ಳುತ್ತದೆ.
Related Articles
ಈಗಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿ ಕಾಣಸಿಗುವ ರೋಗಗಳಲ್ಲಿ ಒಂದಾಗಿದೆ. ಉಪ್ಪು ಸೇವನೆಯಲ್ಲಿ ಜಾಗರೂಕತೆ ಮಾಡುವುದರಿಂದ ಇದನ್ನು ಹತೋಟಿಯಲ್ಲಿಡಬಹುದು. ಇದಲ್ಲದೆ ಮಾವಿನ ಎಲೆ ಚಹಾ ಸೇವನೆ ರಕ್ತದೊತ್ತಡ ನಿಯಂತ್ರಣಕ್ಕೆ ಔಷಧವಾಗಿದೆ.
Advertisement
ವೈರಸ್‌ಗಳ ಸೋಂಕಿನಿಂದ ರಕ್ಷಣೆಮಾವಿನ ಎಲೆಗಳನ್ನು ಕೊಳೆಸಿ ದಾಗ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಾ ಗುತ್ತವೆ. ಈ ದ್ರವ ಒಂದು ಉತ್ತಮ ಸೌಂದರ್ಯವರ್ಧಕವೂ ಹೌದು. ವೈರಸಿನ ಸೋಂಕು ಇರುವಲ್ಲಿ ಈ ದ್ರವವನ್ನು ಬಳಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಹೆಚ್ಚು ಸಬಲಗೊಂಡಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ.