Advertisement
ಅಂತಹ ಕೇಶಸೌಂದರ್ಯ ವರ್ಧಕಗಳ ಕುರಿತಾಗಿ ಈ ಕೆಳಗೆ ತಿಳಿಸಲಾಗಿದೆ.
ಚೆನ್ನಾಗಿ ಕಳಿತ ಒಂದು ಮಾವಿನ ಹಣ್ಣಿನ ತಿರುಳನ್ನು ಅರೆದು ಪೇಸ್ಟ್ ತಯಾರಿಸಬೇಕು. ಅದಕ್ಕೆ 1/4 ಕಪ್ ದಪ್ಪ ಮೊಸರು ಬೆರೆಸಿ, 1 ಚಮಚ ಬಾದಾಮಿ ತೈಲ ಬೆರೆಸಬೇಕು. ಇವೆಲ್ಲವನ್ನು ಚೆನ್ನಾಗಿ ಕಲಕಿ ಪೇಸ್ಟ್ ತಯಾರಿಸಿ ಕೂದಲಿಗೆ ಲೇಪಿಸಬೇಕು. ನಂತರ 20 ನಿಮಿಷಗಳ ಬಳಿಕ ಬೆಚ್ಚಗೆ ನೀರಲ್ಲಿ ಕೂದಲನ್ನು ತೊಳೆದರೆ ಕೂದಲಿನ ಹೊಳಪು, ಮೃದುತ್ವ ವರ್ಧಿಸುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
Related Articles
ತುಂಬಾ ಒಣಕೂದಲು ಒರಟು ಕೂದಲು ಹಾಗೂ ತೆಳ್ಳಗಿನ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್ ಉತ್ತಮ.
Advertisement
1 ಕಪ್ ಮಾವಿನ ಹಣ್ಣಿನ ತಿರುಳು, ಅಷ್ಟೇ ಭಾಗ ಚೆನ್ನಾಗಿ ಕಳಿತ ಪಪ್ಪಾಯದ ತಿರುಳು ಎರಡನ್ನೂ ಬೆರೆಸಿ ಅರೆಯಬೇಕು. ತದನಂತರ ಮೂರು ಚಮಚ ಆಲಿವ್‌ತೈಲ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದನ್ನು ಕೂದಲಿಗೆ ಚೆನ್ನಾಗಿ ಲೇಪಿಸಿ ಶವರ್‌ಕ್ಯಾಪ್ ಹಾಕಬೇಕು. ನಂತರ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ಒಣ ಕೂದಲು ಮೃದು ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ.
ಮಾವಿನಹಣ್ಣು ಹಾಗೂ ಬೆಣ್ಣೆಹಣ್ಣಿನ ಹೇರ್ಪ್ಯಾಕ್ಪೋಷಕಾಂಶಗಳ ಕೊರತೆಯಿಂದ ಹಾಗೂ ತಲೆಹೊಟ್ಟಿನಿಂದ ಕೂದಲು ಉದುರುವವರಿಗೆ ಈ ಹೇರ್‌ಪ್ಯಾಕ್ ಉತ್ತಮ.
ವಿಧಾನ: 1 ಕಪ್ ಮಾವಿನ ಹಣ್ಣಿನ ತಿರುಳು, 1/2 ಕಪ್ ಬೆಣ್ಣೆಹಣ್ಣಿನ ತಿರುಳು ಎರಡನ್ನೂ ಚೆನ್ನಾಗಿ ಬೆರೆಸಿ, ಕಲಕಿ ಪೇಸ್ಟ್ ತಯಾರಿಸಬೇಕು. ಇದಕ್ಕೆ 2 ಚಮಚ ಮೆಂತ್ಯ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಿ ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ತೊಳೆದರೆ ತಲೆಹೊಟ್ಟು ಉದುರುವುದು, ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ. ತೈಲಯುಕ್ತ ಕೇಶ ಉಳ್ಳವರಿಗೆ ಮಾವಿನಹಣ್ಣು -ಮೊಟ್ಟೆಯ ಒಳಭಾಗದ ಹೇರ್‌ಪ್ಯಾಕ್
ಮಾವಿನ ಹಣ್ಣು ವಿಟಮಿನ್ “ಎ’, “ಸಿ’ ಹಾಗೂ ವಿಟಮಿನ್ “ಈ’ಗಳಿಂದ ಸಮೃದ್ಧವಾಗಿದೆ. ಮೊಟ್ಟೆಯ ಬಿಳಿಭಾಗ ಪ್ರೊಟೀನ್, ಕ್ಯಾಲಿÏಯಂ ಹೊಂದಿದೆ.ಎಣ್ಣೆಯ ಪಸೆ ಅಧಿಕವಿದ್ದು ಅಥವಾ ಜಿಡ್ಡಿನಂಶ ಅಧಿಕವಿರುವ ಕೂದಲುಳ್ಳವರಿಗೆ ಈ ಹೇರ್‌ಪ್ಯಾಕ್ ಉತ್ತಮ. ವಿಧಾನ: ಮಾವಿನ ಹಣ್ಣಿನ ತಿರುಳು 1 ಕಪ್, ಮೊಟ್ಟೆಯ ಬಿಳಿಭಾಗ 1/2 ಕಪ್, ಕಡಲೆಹಿಟ್ಟು 1 ಚಮಚ, ಹೆಸರುಹಿಟ್ಟು 2 ಚಮಚ- ಇವೆಲ್ಲವುಗಳನ್ನು ಚೆನ್ನಾಗಿ ಬೆರೆಸಿ ಸ್ವಲ್ಪ ಗುಲಾಬಿ ಜಲ ಬೆರೆಸಿ ಪೇಸ್ಟ್ ತಯಾರಿಸಬೇಕು. ಇದನ್ನು ತಲೆಕೂದಲಿಗೆ ಚೆನ್ನಾಗಿ ಲೇಪಿಸಿ ಹೇರ್‌ಪ್ಯಾಕ್ ಮಾಡಬೇಕು. 1/2 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕೂದಲನ್ನು ತೊಳೆಯಬೇಕು. ಇದರಿಂದ ಕೂದಲಿನ ಜಿಡ್ಡಿನ ಅಂಶ ನಿವಾರಣೆಯಾಗಿ ಕೂದಲಿನ ಸೌಂದರ್ಯ, ಕಾಂತಿ ವರ್ಧಿಸುತ್ತದೆ. ರೇಶಿಮೆಯಂತಹ ಕೂದಲಿಗಾಗಿ
ಕೂದಲು ರೇಶಿಮೆಯಂತಹ ನುಣುಪು, ಕಾಂತಿ ಪಡೆದು ಸೊಂಪಾಗಿ ಬೆಳೆಯಲು ಈ ಹೇರ್‌ಪ್ಯಾಕ್ ಉಪಯುಕ್ತ.
ವಿಧಾನ: 2 ಕಪ್ ಚೆನ್ನಾಗಿ ಕಳಿತ ಮಾವಿನ ಹಣ್ಣಿನ ತಿರುಳು ಹಾಗೂ ಎಳನೀರು 1/2 ಕಪ್ ಅರೆದು ತಾಜಾ ಗುಲಾಬಿ ಪಕಳೆಗಳ ಪೇಸ್ಟ್ 2 ಚಮಚ ಸೇರಿಸಿ ಎಲ್ಲವನ್ನು ಮಿಶ್ರಮಾಡಿ ಕೂದಲಿಗೆ ಲೇಪಿಸಿ 1/2 ಗಂಟೆಯ ಬಳಿಕ ಸ್ನಾನಮಾಡಿದರೆ ಕೇಶರಾಶಿ ರೇಶಿಮೆಯ ಹೊಳಪಿನಿಂದ ಕಂಗೊಳಿಸುತ್ತದೆ. – ಡಾ| ಅನುರಾಧಾ ಕಾಮತ್