Advertisement
ಜಿಲ್ಲಾದ್ಯಂತ ಕಳೆದ ನಾಲ್ಕಾರು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ಮಾವು ಬೆಳೆಗಾರರ ಆತಂಕ ಹೆಚ್ಚಿಸಿದೆ. ಕೆಲ ದಿನಗಳಹಿಂದೆ ಜೋರಾದ ಚಳಿ ವಾತಾವರಣದಿಂದ ಮಾವಿನ ಮರಗಳಲ್ಲಿ ಹಸಿರೆಲೆ ಕಾಣದಷ್ಟು ಹೂಬಿಟ್ಟಿದ್ದವು. ಕೆಲ ಗಿಡಗಳಲ್ಲಿ ಕಡಲೆ ಗಾತ್ರದ ಮಿಡಿಗಾಯಿಗಳಾಗಿದ್ದವು. ಎರಡೂ¾ರು ತಿಂಗಳಲ್ಲಿ ಭಾರೀ ಇಳುವರಿ ನಿರೀಕ್ಷೆ ಹೊಂದಲಾಗಿತ್ತು. ಮುಂಗಾರು ಬೆಳೆ ಕೈಕೊಟ್ಟರೂ ಮಾವು ಕೈಹಿಡಿಯುವ ಆಶಾವಾದ ಹೊಂದಿದ್ದರು. ಆದರೆ, ಅನಿರೀಕ್ಷಿತವಾಗಿ ಸುರಿದ ಮಳೆ ಮಾವುಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಮಾವು ಬೆಳೆ ಕಡಿಮೆಯಿದ್ದರೂ ಇದ್ದ ಬೆಳೆಯನ್ನೂ ಮಾರಾಟ ಮಾಡಲಾಗದೇ ಬೆಳೆಗಾರರು ನಷ್ಟ ಅನುಭವಿಸಿದ್ದರು. ಮಾವಿನ ಸೀಸನ್ ವೇಳೆಯೇ ಕೊರೊನಾ ಸೋಂಕು ಆರಂಭವಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಇದ್ದ ಬೆಳೆಯನ್ನು ಸಾಗಿಸಲೂ ಆಗದೇ, ಮಾರುಕಟ್ಟೆಗೂ ಒಯ್ಯಲಾಗದೇ ರೈತರು ನಷ್ಟ ಅನುಭವಿಸಿದ್ದರು. ಈ ಸಲವಾದರೂ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿರುವ ರೈತರಿಗೆ ಅನಿರೀಕ್ಷಿತ ಮಳೆ ನಷ್ಟಕ್ಕೆ ನೂಕಿದೆ.
Related Articles
ಜಿಲ್ಲೆಯ 5,700 ಹೆಕ್ಟೇರ್ ಪ್ರದೇಶದಲ್ಲಿ ಗುಣಮಟ್ಟದ ಮಾವು ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳೆಗಾರರ ಸಂಖ್ಯೆ ಹೆಚ್ಚಿದ್ದು, ಇಲ್ಲಿಯ ಆಪೂಸು ತಳಿಯ ಮಾವಿನ ಹಣ್ಣಿಗೆ ವಿವಿಧೆಡೆ ಹೆಚ್ಚಿನ ಬೇಡಿಕೆಯೂ ಇದೆ. ಇಲ್ಲಿಯ ಮಾವಿಗೆ ಬ್ರಾಂಡ್
ನೀಡಲಾಗಿದ್ದು, ವರದಾ ನದಿ ತೀರದ ಆಪೂಸು ಜಾತಿಯ ಮಾವಿಗೆ ವರದಾ ಗೋಲ್ಡ್ ಎಂದು ಬ್ರಾಂಡ್ ಮಾಡಿ ಮಾರುಕಟ್ಟೆ ಮಾಡಲಾಗುತ್ತಿದೆ. ಹಾನಗಲ್ಲ ಭಾಗದ ರೈತರು ಮಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಪಕ್ಕದ ಮಹಾರಾಷ್ಟ್ರದ
ಜ್ಯೂಸ್ ಫ್ಯಾಕ್ಟರಿಗಳಿಗೆ ಇಲ್ಲಿಯ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.
Advertisement