Advertisement
ಪೂರ್ವಾಹ್ನ 11.20ರಿಂದ 12.20ರ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಿತು. ಕುಕ್ಕೆಯ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಒಟ್ಟು 6 ಜೋಡಿಗಳು ಮತ್ತು ಕೊಲ್ಲೂರಿನಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ಸುಬ್ರಹ್ಮಣ್ಯದಲ್ಲಿ ದೇಗುಲದ ಪುರೋಹಿತ ಮಧುಸೂದನ ಕಲ್ಲೂರಾಯ ಮತ್ತು ಕೊಲ್ಲೂರಿನಲ್ಲಿ ದೇಗುಲದ ಪುರೋಹಿತ ಗಜಾನನ ಜೋಯಿಸ್ ಧಾರ್ಮಿಕ ವಿಧಿ ನೆರವೇರಿಸಿದರು.
ಜಟ್ಟಿಪಳ್ಳದ ಪ್ರಮೋದ್-ಬಾಳುಗೋಡಿನ ವಿದ್ಯಾ ಪಿ., ಸುಬ್ರಹ್ಮಣ್ಯದ ನೂಚಿಲದ ಲೋಕೇಶ್ ಎನ್.-ಗೋಳಿತೊಟ್ಟಿನ ಸುಮಲತಾ ಎಸ್.ವಿ., ಸೋಣಂಗೇರಿಯ ಲೋಕೇಶ್-ದೊಡ್ಡತೋಟದ ನವ್ಯಾ ಎಂ., ಉಬರಡ್ಕ ಕುತ್ತುಮೊಟ್ಟೆಯ ಜಯಂತ- ಬೆಟ್ಟಂಪಾಡಿ ಗುಂಡಿಯಡ್ಕದ ಸರಸ್ವತಿ, ಮರಟಗೆರೆ ರೂಪನಗರದ ವಿನಯ ಎಸ್. ನಾಯಕ್-ಹೊಸಪೇಟೆ ಕಲ್ಲಹಳ್ಳಿಯ ಪೆರಿ ಬಾಯಿ, ಬಳ್ಪ ಎಣ್ಣೆಮಜಲಿನ ದಿವಾಕರ ಎ.-ನಾಲ್ಕೂರು ಗ್ರಾಮದ ಚತ್ರಪ್ಪಾಡಿಯ ವಿದ್ಯಾ ಸಿ.ಎಲ್. ಹಸೆಮಣೆಯೇರಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿ ಕಾರಿ ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
Related Articles
ಕಂಬದಕೋಣೆಯ ಸುಬ್ರಹ್ಮಣ್ಯ ಪೂಜಾರಿ – ಆಲೂರಿನ ಅಶ್ವಿನಿ, ಹೆಂಗವಳ್ಳಿಯ ಅಜಿತ್ – ಹೊಂಬಾಡಿ ಮಂಡಾಡಿಯ ಮೂಕಾಂಬು, ಹೊಂಬಾಡಿ ಮಂಡಾಡಿಯ ವಿಟ್ಠಲ – ಹೆಂಗವಳ್ಳಿಯ ಅನಿತಾ, ಹಳ್ಳಿಹೊಳೆಯ ದೇವರಬಾಳು ನಿವಾಸಿ ಅನಿಲ್ – ಹಳ್ಳಿಹೊಳೆಯ ವಸಂತಿ, ಹಕ್ಲಾಡಿಯ ಚಂದ್ರಶೇಖರ – ಕುಂದಾಪುರದ ಜಲಜಾ ಹಸೆಮಣೆಯೇರಿದರು.
Advertisement
ದೇಗುಲದ ಸಿಇಒ ಪ್ರಶಾಂತ ಕುಮಾರ್ ಶೆಟ್ಟಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಉಪ ಕಾರ್ಯನಿರ್ವಹಣಾಧಿ ಕಾರಿ ಪುಷ್ಪಲತಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷೆ ವನಿತಾ ಸೇರುಗಾರ್, ಬೈಂದೂರು ತಹಶೀಲ್ದಾರ್ ನಾಗರಾಜ್, ಮೊದಲಾದವರು ಉಪಸ್ಥಿತರಿದ್ದರು.
ವಧುವಿಗೆ 10 ಸಾವಿರ ರೂ., ವರನಿಗೆ 5 ಸಾವಿರ ರೂ., ವಧುವಿಗೆ ತಾಳಿಗುಂಡು, ಸಹಿತ ವಧೂವರರಿಗೆ ಸೀರೆ ಪಂಚೆ ಮುಂತಾದವುಗಳನ್ನು ದೇಗುಲದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾಯಿತು.