Advertisement

Mangaluru University: ಗಣೇಶ ಹಬ್ಬಕ್ಕೆ ಬಂದ “ವಿಘ್ನ’ ನಿವಾರಣೆ

12:42 AM Sep 13, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿಯೇ ಗಣೇಶ ಚತುರ್ಥಿ ಆಚರಿಸುವ ಮಹತ್ವದ ತೀರ್ಮಾನವನ್ನು ವಿ.ವಿ. ಕೈಗೊಂಡಿದ್ದು, “ವಿವಾದ’ಕ್ಕೆ ಸದ್ಯ ತೆರೆಬಿದ್ದಿದೆ.

Advertisement

ಕುಲಪತಿ ಪ್ರೊ| ಜಯರಾಜ್‌ ಅಮೀನ್‌ “ಉದಯವಾಣಿ’ಗೆ ಪ್ರತಿಕ್ರಿ ಯಿಸಿ, ವಿ.ವಿ. ಆವರಣದಲ್ಲಿ ಗಣೇಶ ಚತುರ್ಥಿ ಆಚರಣೆಗೆ ನಮ್ಮ ವಿರೋಧ ಇರಲಿಲ್ಲ. ಪ್ರತೀ ವರ್ಷದಂತೆ ಮಂಗಳಾ ಸಭಾಂಗಣದಲ್ಲಿಯೇ ಈ ಬಾರಿಯೂ ಆಯೋಜಿಸಲಿದ್ದೇವೆ. ವಿ.ವಿ.ಯ ಹೊರಗಿನ ಭಕ್ತರೂ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದರು.

ಏನಿದು ವಿವಾದ?: ಈ ಹಿಂದೆ ವಿ.ವಿ.ಯ ಹಾಸ್ಟೆಲ್‌ನಲ್ಲಿ ಆಚರಿಸ ಲಾಗುತ್ತಿದ್ದ ಚೌತಿ ಹಬ್ಬವನ್ನು ಕೊರೊನಾ ಬಳಿಕ 2 ವರ್ಷಗಳಿಂದ ಮಂಗಳಾ ಸಭಾಂಗಣದಲ್ಲಿ ಆಚರಿಸ ಲಾಗುತ್ತಿದೆ. ಇದರ ವೆಚ್ಚವನ್ನು ವಿ.ವಿ. ಭರಿಸಿರುವುದಕ್ಕೆ ಲೆಕ್ಕಪತ್ರ ಪರಿಶೋಧನೆಯಲ್ಲಿ ಸರಕಾರದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಮಂಗಳಾ ಸಭಾಂಗಣದಲ್ಲಿ ಆಚರಣೆ ಕುರಿತಂತೆ ಸೂಕ್ತ ನಿರ್ದೇಶನ ಕೋರಿ ಕುಲಪತಿಯವರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಆ ಪತ್ರ ವೈರಲ್‌ ಆಗಿದ್ದರಿಂದ ಗಣೇಶ ಚತುರ್ಥಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಪರ-ವಿರೋಧ ಚರ್ಚೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next