Advertisement
ಹಾಜಿ ಯು.ಕೆ.ಮೋನುಹಾಜಿ ಯು.ಕೆ. ಮೋನು ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡ ಸ್ಟ್ರೀಸ್‌ನ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಸ್ಥಳೀಯ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2002ರಲ್ಲಿ ಅವರು ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸ್ಥಾಪಿಸಿದರು. ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕಣಚೂರ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಸಹಿತ ವಿವಿಧ ಸ್ತರದ ಶೈಕ್ಷಣಿಕ-ಆರೋಗ್ಯ ಸಂಸ್ಥೆ ಸ್ಥಾಪಿಸಿದ್ದಾರೆ.
ಜಿ ರಾಮಕೃಷ್ಣ ಆಚಾರ್ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದರು.
ಒಂದು ಶೆಡ್‌ನಲ್ಲಿ ಕೇವಲ 25 ಸಾವಿರ ರೂ. ಬಂಡವಾಳ ದೊಂದಿಗೆ ವೃತ್ತಿ ಜೀವನ ಆರಂಭಿಸಿದ ಅವರು ಇಂದು ಫ್ಯಾಬ್ರಿಕೇಶನ್ ಕಂಪೆನಿ ಹೊಂದಿದ್ದಾರೆ. ಇದು ಕೃಷಿ, ನೀರು ನಿರ್ವಹಣೆ ಮತ್ತು ಒಳಚರಂಡಿ ಸಂಸ್ಕರಣೆ ಕ್ಷೇತ್ರದಲ್ಲಿ ವರ್ಷಕ್ಕೆ 250 ಕೋ.ರೂ.ಗಳಷ್ಟು ವಾರ್ಷಿಕ ವಹಿವಾಟು ಹೊಂದಿದೆ ಮತ್ತು 3000 ಕ್ಕೂ ಹೆಚ್ಚು ಜನರಿಗೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ನೀಡಿದೆ. ಅವರು ಸುಮಾರು 100 ಕೋ.ರೂ. ಮೊತ್ತದ ಮೂಲಸೌಕರ್ಯಗಳನ್ನು ನಿರ್ಮಿಸಿದ್ದಾರೆ.
Related Articles
Advertisement
ಪ್ರೊ| ಎಂ.ಬಿ ಪುರಾಣಿಕ್ಪ್ರೊ| ಎಂ.ಬಿ. ಪುರಾಣಿಕ್ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಬೋಧನೆಯಲ್ಲಿ 34 ವರ್ಷ ಅನುಭವ ಹೊಂದಿದ್ದಾರೆ. 30 ವರ್ಷಗಳಲ್ಲಿ ಅವರು ನಾಲ್ಕು ವಿಭಿನ್ನ ಕ್ಯಾಂಪಸ್‌ಗಳಲ್ಲಿ 10 ಶಿಕ್ಷಣ ಸಂಬಂಧಿ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಂದಾಳತ್ವ ವಹಿಸಿಕೊಂಡಿರುವ ಅವರು ಮಂಗಳ ಸೇವಾ ಸಮಿತಿ ಟ್ರಸ್ಟ್ (ಬಾಲ ಸಂರಕ್ಷಣ ಕೇಂದ್ರ, ಕುತ್ತಾರ್ ಪದವು) ಎಂಬ ಅನಾಥಾಶ್ರಮದ ಅಧ್ಯಕ್ಷರು. ಪಜೀರ್‌ನಲ್ಲಿ 400 ಹಸುಗಳು ಮತ್ತು ಕೆಲವು ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡುವ ಗೋವನಿತಾಶ್ರಯ ಟ್ರಸ್ಟ್ ಪ್ರಾರಂಭಿಸಿದರು. ಆರ್‌ಸಿಪಿಎಚ್‌ಡಿ ಟ್ರಸ್ಟ್ ಅಧ್ಯಕ್ಷರು. ಇದು ಆರ್ಥಿಕವಾಗಿ ವಂಚಿತರು ಮತ್ತು ದೈಹಿಕವಾಗಿ ವಿಕಲಾಂಗ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿದೆ. ಪ್ರತೀ ವರ್ಷ ಸುಮಾರು 100 ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಾರೆ ಮತ್ತು ಇದುವರೆಗೆ 21 ಅನಾಥ ಹುಡುಗಿಯರಿಗೆ ವಿವಾಹ ನಡೆಸಿಕೊಟ್ಟಿದ್ದಾರೆ. ಇಂದು ಘಟಿಕೋತ್ಸವ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 41ನೇ ವಾರ್ಷಿಕ ಘಟಿಕೋತ್ಸವ ಮಾ. 15ರಂದು ಮಂಗಳೂರು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಮೌಲಿÂàಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಎಸ್.ಸಿ. ಶರ್ಮಾ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.