Advertisement

ಕದ್ರಿ ದೇವಸ್ಥಾನಕ್ಕೆ ಅಕ್ರಮ ಪ್ರವೇಶ; ಉನ್ನತ ಮಟ್ಟದ ತನಿಖೆಗೆ ಆಗ್ರಹ : ವಿಶ್ವ ಹಿಂದೂ ಪರಿಷತ್

02:49 PM May 12, 2023 | Team Udayavani |

ಮಂಗಳೂರು: ಮಂಗಳೂರಿನ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅಂಗಣಕ್ಕೆ ಗುರುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಮೂವರು ಅನ್ಯ ಕೋಮಿನವರು ಬಂದುದಲ್ಲದೆ ಸಂಶಯಾಸ್ಪದವಾಗಿ ವರ್ತಿಸಿದ ಘಟನೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.

Advertisement

ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಭದ್ರತಾ ಸಿಬ್ಬಂದಿ ಇರುವಾಗಲೇ ದೇವಸ್ಥಾನದ ಗೇಟ್ ಅಕ್ರಮ ಪ್ರವೇಶಿಸಿ ಪವಿತ್ರವಾದ ದೇವಸ್ಥಾನದ ಅಂಗಣದಲ್ಲಿ ಪಾದರಕ್ಷೆ ಸಹಿತ ದ್ವಿಚಕ್ರ ವಾಹನದಲ್ಲಿ ಸುತ್ತು ಬಂದು ಅಪವಿತ್ರಗೊಳಿಸುವ ಸಂಚು ನಡೆಸಿದ್ದು, ಈ ಹಿಂದೆ ಶಾಕೀರ್ ಅನ್ನುವಂತಹ ಭಯೋತ್ಪಾದಕ ಕುಕ್ಕರ್ ಬಾಂಬ್ ಮೂಲಕ ದೇವಸ್ಥಾನ ಗುರಿಯಾಗಿಟ್ಟುಕೊಂಡಿದ್ದು, ಈ ಯುವಕರು ಅಂತಹ ಭಯೋತ್ಪಾದಕ ಕೃತ್ಯ ಅಥವಾ ದೇವಸ್ಥಾನಕ್ಕೆ ಅಪವಿತ್ರ ನಡೆಸುವ ದುಷ್ಕೃತ್ಯಕ್ಕೆ ಸಂಚು ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕಾಂಗ್ರೆಸ್ ಬಹುಮತ ಸಮೀಕ್ಷೆ ಹಿನ್ನೆಲೆಯಲ್ಲಿ ಜಿಹಾದಿಗಳು ಇಂತಹ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದಿದೆ.

ಹಾಗಾಗಿ ಅವರನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ , ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರಿಗೆ ಮನವಿ ನೀಡಿದ್ದು, ಕದ್ರಿ ದೇವಸ್ಥಾನಕ್ಕೆ ಶಾಶ್ವತ ಪೋಲಿಸ್ ಸಿಬ್ಬಂದಿ ನೀಡಿ ಸೂಕ್ತ ಭದ್ರತೆ ನೀಡಬೇಕೆಂದು ವಿಶ್ವ ಹಿಂದೂ ಪರಿಷತ್ ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next