Advertisement
ನ.2ರಂದು ಧರ್ಮಸಭೆಯಲ್ಲಿ ಈ ಆಚರಣೆ ನಡೆಸಲಾಗುತ್ತದೆ. ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ(ಆಲ್ ಸೋಲ್ಸ್ ಡೇ)ವನ್ನು ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಸಮಾಧಿಯಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಆಚರಿಸಲಾಗುತ್ತದೆ. ನಮ್ಮೊಂದಿಗಿದ್ದು ನಮ್ಮನ್ನು ಅಗಲಿದವರು ಅನೇಕರು ದೇವರ ವಾಕ್ಯದಂತೆ ನಡೆಯದೆ ಸ್ವರ್ಗಸ್ಥರಾಗದೇ ಶುದ್ಧೀಕರಣದ ಸ್ಥಳದಲ್ಲಿದ್ದು, ಅಂತಹ ಆತ್ಮಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ನ. 2ರಂದು ಪವಿತ್ರ ಸಭೆ, ಸಮಸ್ತ ಕೆಥೋಲಿಕರು ಪ್ರಾರ್ಥನೆ ಸಲ್ಲಿಸುತ್ತಾರೆ.
Related Articles
ಪವಿತ್ರ ಸಭೆಯಿಂದ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ದೇವರ ಸಾಮ್ರಾಜ್ಯದಲ್ಲಿರುವ ಎಲ್ಲ ಸಂತ ಭಕ್ತರನ್ನು ನ.1ರಂದು ಸಾಮೂಹಿಕ ಪ್ರಾರ್ಥನೆ ಮೂಲಕ ಸ್ಮರಿಸುವ ದಿನವಾಗಿದ್ದು, ಅವರೊಡದೆ ದೇವರಿಗೆ ಸ್ತುತಿ ಸ್ತೋತ್ರ ಅರ್ಪಿಸಲಾಗುತ್ತದೆ. ಕೆಥೋಲಿಕ ಪವಿತ್ರ ಸಭೆಯಲ್ಲಿ ಅನೇಕ ಸಂತರನ್ನು ಪ್ರತ್ಯೇಕವಾಗಿ ಸ್ಮರಿಸಲಾಗುತ್ತದೆ. ಆದಾಗ್ಯೂ ಸ್ವರ್ಗಸ್ಥರಾಗಿ ಪ್ರತ್ಯೇಕ ದಿನದಂದು ಸ್ಮರಿಸದೇ ಇರುವ ಸಂತ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಜತೆಯಾಗಿ ಸ್ಮರಿಸುವ ದಿನವೇ ಸಮಸ್ತ ಸಂತಭಕ್ತರ ದಿನವಾಗಿದೆ. ಕೆಥೋಲಿಕರ ಪಾಲಿಗೆ ಇದು ಮಹಾ ಹಬ್ಬವೂ ಆಗಿದೆ.
Advertisement