Advertisement
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಳಚ್ಚಿಲ್‌ನ ಖಾಸಗಿ ಕಾಲೇಜಿನ 45 ವಿದ್ಯಾರ್ಥಿಗಳಿಗೆ ಆಹಾರ ಸೇವಿಸಿದ ಅನಂತರ ಅನಾರೋಗ್ಯ ಕಂಡುಬಂದಿತ್ತು. ತಕ್ಷಣವೇ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ನೀರು, ಆಹಾರ ಪದಾರ್ಥಗಳನ್ನು ಪರೀಕ್ಷೆ ನಡೆಸಿದೆ. ಅಲ್ಲಿನ ಕಿಚನ್ ಬಂದ್ ಮಾಡಲಾಗಿದೆ. ಆಹಾರದ ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದರು.
Related Articles
ಎಲ್ಲ ವಸತಿ ನಿಲಯಗಳು, ಪೆಯಿಂಗ್ ಗೆಸ್ಟ್ ಗಳಲ್ಲಿ ಅಥವಾ ವಸತಿ ನಿಲಯ ಶಾಲೆಗಳಿಗೆ ಆಹಾರ ಪೂರೈಸುವ ಸಂಸ್ಥೆಗಳು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಪರವಾನಿಗೆ ಪಡೆಯಬೇಕು. ಬಿಸಿಯೂಟ ತಯಾರಿಸುವ ಪ್ರತೀ ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ| ಪ್ರವೀಣ್ ಕುಮಾರ್ ಹೇಳಿದರು.
Advertisement
ಕಳೆದವಾರ ವಸತಿನಿಲಯಗಳಲ್ಲಿ ಆದ ಪ್ರಕರಣಗಳು ಮಾರಣಾಂತಿಕ ಸಮಸ್ಯೆಯಾಗದ ಹಿನ್ನೆಲೆ ದೂರು ದಾಖಲಿಸದೆ ನೊಟೀಸ್ ನೀಡಿದ್ದೇವೆ. ಕಳೆದ ವರ್ಷ ಮಂಗಳೂರಿನ ಖಾಸಗಿ ಸಂಸ್ಥೆಯ ಹಾಸ್ಟೆಲ್‌ನಲ್ಲಿ ನಡೆದ ಪ್ರಕರಣ ಸ್ವಲ್ಪ ಗಂಭೀರ ಸ್ವರೂಪದ್ದಾಗಿತ್ತು. ಆ ಸಂದರ್ಭದಲ್ಲಿ ಕೇಸ್ ದಾಖಲಾಗಿದ್ದು ಪ್ರಕರಣಕೋರ್ಟ್ನಲ್ಲಿ ತನಿಖಾ ಹಂತದಲ್ಲಿದೆ ಎಂದು ಅವರು ತಿಳಿಸಿದರು. ಅಡುಗೆ ಕೋಣೆ ಶುಚಿಯಾಗಿಡಿ,
ಇಲಿ ಹೆಗ್ಗಣಗಳನ್ನು ದೂರವಿಡಿ!
ಹಾಸ್ಟೆಲ್‌ಗಳ ಅಡುಗೆ ಕೋಣೆಗೆ ಅಪರಿಚಿತ ವ್ಯಕ್ತಿಗಳು ಪ್ರವೇಶಿಸದಂತೆ ಮುಂಜಾಗ್ರತೆ ವಹಿಸಬೇಕು. ಸರಿಯಾದ ಬೆಳಕು ಮತ್ತು ಗಾಳಿಯ ವ್ಯವಸ್ಥೆ ಮಾಡಬೇಕು. ದಾಸ್ತಾನು ಕೊಠಡಿಯಲ್ಲಿ ಸ್ವಚ್ಚತೆ ಕಾಪಾಡಬೇಕು. ಆಹಾರ ಪದಾರ್ಥಗಳನ್ನು ಶಿಸ್ತುಬದ್ಧವಾಗಿ ಜೋಡಿಸಬೇಕು. ಇಲಿ, ಹೆಗ್ಗಣ, ಹಲ್ಲಿ, ಬೆಕ್ಕು, ಇರುವೆ, ಹಾವು, ನಾಯಿ, ಕ್ರಿಮಿಕೀಟ ನುಸುಳದಂತೆ ನೋಡಿಕೊಳ್ಳಬೇಕು. ಸ್ಟೀಲ್, ಕಲಾಯಿ ಮಾಡಿದ ತಾಮ್ರ, ಕಂಚಿನ ಪಾತ್ರೆಗಳನ್ನೇ ಅಡುಗೆಗೆ ಬಳಸಬೇಕು. ಜತೆಗೆ ಬಿಸಿ ನೀರಿನಲ್ಲಿ ಪಾತ್ರೆಗಳನ್ನು ಸ್ವಚ್ಚಗೊಳಿಸಬೇಕು. ಆಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು. ಮುದ್ರಿತ ಕಾಗದಗಳಲ್ಲಿ ಆಹಾರ ವಿತರಿಸಬಾರದು ಎಂದು ತಿಳಿಸಿದ್ದಾರೆ. ಅಡುಗೆ ತಯಾರಕರು, ಸಹಾಯಕರನ್ನು ಪ್ರತೀ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಜತೆ ಅವರು ಕೈಗವಚ, ತಲೆಟೋಪಿ ಬಳಸಬೇಕು. ಮಧ್ಯಪಾನ, ಧೂಮಪಾನ, ತಂಬಾಕು ಬಳಕೆ ಮಾಡಬಾರದು ಎಂದು ಎಚ್ಚರಿಸಿದ್ದಾರೆ.