Advertisement
ಶಾಸಕ ವೇದವ್ಯಾಸ ಕಾಮತ್ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಂಗಳೂರಿನಲ್ಲಿ ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಸರ್ಕಸ್ ಪ್ರದರ್ಶನ ಆಯೋಜಿಸಿದ್ದು ಶ್ಲಾಘನೀಯ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಹಿತ ಆಗಮಿಸಿ ಈ ಅಪರೂಪದ ಕಲೆಯನ್ನು ಪ್ರೋತ್ಸಾಹಿಸಬೇಕು. ಒತ್ತಡದ ಬದುಕಿನಲ್ಲಿರುವ ನಗರದ ಜನರಿಗೆ ಸರ್ಕಸ್ ವಿಶಿಷ್ಟ ಮನೋರಂಜನೆ ನೀಡುತ್ತದೆ ಎಂದರು. ನಗರದ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಈ ಸರ್ಕಸ್ ನೋಡುವಂತೆ ಅವರಿಗೆ ಬೇಕಾದ ಸಹಕಾರವನ್ನು ಶಾಸಕನಾಗಿ ಒದಗಿಸಿಕೊಡುತ್ತೇನೆ ಎಂದರು.
Related Articles
Advertisement
ರ್‍ಯಾಂಬೊ ಸರ್ಕಸ್ ಕಂಪೆನಿಯರು ಮೈ ನವಿರೇಳಿಸುವ ಹೊಸ ಪ್ರಯೋಗಗಳೊಂದಿಗೆ ದಿಲ್ಲಿ, ಮುಂಬಯಿ, ಬೆಂಗಳೂರು, ಗೋವಾ, ಕೊಚ್ಚಿ ಹಾಗೂ ಇನ್ನೂ ಹಲವಾರು ಮಹಾನಗರಿಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಕೊರೊನಾ ಅಲೆಗೆ ತತ್ತರಿಸಿದ ಸರ್ಕಸ್ ಪ್ರದರ್ಶನವು ಹೊಸತನದೊಂದಿಗೆ ಜನರ ನಡುವೆ ಬರುವ ನಿಟ್ಟಿನಲ್ಲಿ ಹವಾನಿಯಂತ್ರಿತ ಸಭಾಂಗಣದಲ್ಲಿ ಏರ್ಪಡಿಸಿದೆ.
2 ಗಂಟೆಗಳ ಅವಧಿಯ ಸರ್ಕಸ್ ಇದಾಗಿದೆ. ರ್‍ಯಾಂಬೊ ತಂಡವು ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್ ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಜತೆಗೆ ಅನೇಕ ಮನೋರಂಜನಾತ್ಮಕ ಪ್ರದರ್ಶನಗಳನ್ನು ಹೊಂದಿದೆ.
ಬಾಲ್ಯದಲ್ಲಿ ಆನಂದಿಸಿದ ನಗು ತುಂಬಿದ ಹಾಸ್ಯ ಸನ್ನಿವೇಶಗಳನ್ನು ಮತ್ತೆ ಸವಿಯುವುದಕ್ಕೆ ಇಲ್ಲಿ ಅವಕಾಶವಿದೆ. ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿವೆ. ಮಾತ್ರವಲ್ಲದೆ ಬುಕ್ ಮೈ ಶೋ ಆ್ಯಪ್‌ನ ಮೂಲಕವೂ ಸೀಟು ಕಾದಿರಿಸಿಕೊಳ್ಳಬಹುದಾಗಿದೆ.
ಪ್ರದರ್ಶನ ಸಮಯ
ಸೆ. 22ರ ಮಧ್ಯಾಹ್ನ 1, ಸಂಜೆ 4, ಹಾಗೂ 7 ಗಂಟೆ ಸೆ. 23ರ ಬೆಳಗ್ಗೆ 11, ಮಧ್ಯಾಹ್ನ 1, ಸಂಜೆ 4, ಹಾಗೂ 7 ಗಂಟೆ ಸೆ. 24ರ ಬೆಳಗ್ಗೆ 11, ಮಧ್ಯಾಹ್ನ 1, ಸಂಜೆ 4 ಹಾಗೂ 7 ಗಂಟೆ