Advertisement

Mangaluru;ಆಸ್ಪತ್ರೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

12:20 AM Oct 19, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 30 ಹಾಸಿಗೆಗಿಂತ ಹೆಚ್ಚಿರುವ ಆಸ್ಪತ್ರೆಗಳು ನಿಯಾಮಾನುಸಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 1974ರ ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1981ರ ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ ಮತ್ತು ಜೀವ ವೈದ್ಯಕೀಯ ತ್ಯಾಜ್ಯ ಕಾಯ್ದೆ 2016ರಡಿಯಲ್ಲಿ ಅ ಧಿಕಾರ ಪತ್ರ ಪಡೆಯುವುದು ಕಡ್ಡಾಯವಾಗಿದೆ.

Advertisement

30 ಹಾಸಿಗೆಗಿಂತ ಕಡಿಮೆ ಹಾಗೂ ಹಾಸಿಗೆ ರಹಿತ ಆಸ್ಪತ್ರೆಗಳು ನಿಯಾಮಾನುಸಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜೀವ ವೈದ್ಯಕೀಯ ತ್ಯಾಜ್ಯ ಕಾಯ್ದೆ 2016 ರಡಿಯಲ್ಲಿ ಶ್ವೇತವರ್ಣದಡಿಯಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ಅ ಧಿಕಾರ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಈ ಹಿನ್ನಲೆಯಲ್ಲಿ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ/ಅ ಧಿಕಾರ ಪತ್ರ ಪಡೆದು ನವೀಕರಣಗೊಳಿಸದೆ ಹಾಗೂ ಪಡೆಯದೆ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ/ಅ ಧಿಕಾರ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿರುವಂತೆ ಈ ಮೂಲಕ ಸೂಚಿಸಲಾಗಿದೆ. ತಪ್ಪಿದಲ್ಲಿ ಮಂಡಳಿಯು ಅನ್ವಯವಾಗುವ ಕಾನೂನಿನ ಪ್ರಕಾರ ಕ್ರಮ ಜರಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ ಇಲ್ಲಿ ಸಂಪರ್ಕಿಸುವಂತೆ ಪರಿಸರ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next