Advertisement
ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿಎ ನಂದ ಗೋಪಾಲ ಶೆಣೈ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನ. 5ರಂದು ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು ಮಾಹೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ದಿಲೀಪ್ ಜಿ. ನಾಯಕ್ ಉದ್ಘಾಟಿಸುವರು.
Related Articles
Advertisement
ನ.5ರಂದು ಬೆಳಗ್ಗೆ 11ಕ್ಕೆ ಸ್ವಾತಂತ್ರ್ಯೋತ್ತರ ಭಾರತದ ಶಿಕ್ಷಣದಲ್ಲಿ ಕೊಂಕಣಿ ಗೋಷ್ಠಿಯಿದ್ದು, ಅಧ್ಯಕ್ಷತೆ ಯನ್ನು ಉಡುಪಿಯ ಶಿಕ್ಷಣಾಧಿಕಾರಿ ಡಾ| ಅಶೋಕ ಕಾಮತ್ ವಹಿಸುವರು. ಮಧ್ಯಾಹ್ನ 2 ಕ್ಕೆ ಕೊಂಕಣಿ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಎಚ್.ಎಂ. ಪೆರ್ನಾಲ್ ಹಾಗೂ ಗೋವಾದ ಹಿರಿಯ ಸಾಹಿತಿ ದೇವಿದಾಸ್ ಕದಮ್ ಭಾಗವಹಿಸುವರು.
ಅನಂತರ ಕೊಂಕಣಿ ವಾಚನ ಸಂಸ್ಕೃತಿ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಗೋಕುಲದಾಸ್ ಪ್ರಭು ವಹಿಸುವರು. ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಲಿವೆ.
ನ.6 ರಂದು ಬೆಳಗ್ಗೆ 9 ಗಂಟೆಗೆ ಆನ್ಲೈನ್ ಗೋಷ್ಠಿ ಇದೆ. ಬಳಿಕ ಬಳಿಕ ನಡೆಯುವ ಸಮಾರಂಭದಲ್ಲಿ ಗೋವಾ ಉದ್ಯಮಿ ಅವಧೂತ್ ತಿಂಬ್ಲೊ ಪುರಸ್ಕಾರ ಪ್ರದಾನ ಮಾಡುವರು. ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಚಿಂತಕ ಮೌಜಿನ್ಹೊ ದೆ ಅಟೈಡೆ ಅವರಿಗೆ ಪ್ರದಾನ ಮಾಡಲಾಗುವುದು.
ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕವಿ ಪ್ರಕಾಶ ಡಿ. ನಾಯಕ್ ಅವರ “ಮೊಡಕೂಳ್’ ಎಂಬ ಕೃತಿಗೆ ನೀಡಲಾಗುವುದು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮುಂಬಯಿನ ವೀಣಾ ಅಡಿಗೆ ಹಾಗೂ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಗುವುದು ಎಂದರು.
ಮಧ್ಯಾಹ್ನ 2 ಕ್ಕೆ ಕಾಸರಗೋಡು ಚಿನ್ನಾ ಹಾಗೂ ಎಚ್. ಸತೀಶ ನಾಯಕ್ ಅವರಿಂದ “ಮನಾಂತರಂಗ’ ಎಂಬ ಕೊಂಕಣಿ ಹಾಸ್ಯ ಕಾರ್ಯಕ್ರಮವಿದೆ. ಗೋವಾ ವಿವಿಯ ನಿವೃತ್ತ ಡೀನ್ ಡಾ| ಕಿರಣ್ ಬುಡ್ಕುಳೆ ಅಧ್ಯಕ್ಷತೆಯಲ್ಲಿ “ಕೊಂಕಣಿ ಸಂಶೋಧನೆ: ಸಾಧನೆ ಮತ್ತು ಸವಾಲುಗಳು’ ವಿಚಾರಗೋಷ್ಠಿ ಜರಗಲಿದೆ ಎಂದರು.
ಕೇಂದ್ರದ ಕಾರ್ಯದರ್ಶಿ ಡಾ| ಕಸ್ತೂರಿ ಮೋಹನ್ ಪೈ, ಕೋಶಾಧಿಕಾರಿ ಬಿ.ಆರ್.ಭಟ್, ವಿಶ್ವಸ್ಥ ಮಂಡ ಳಿಯ ರಮೇಶ್ ನಾಯಕ್, ದೇವದಾಸ ಪೈ ಉಪಸ್ಥಿತರಿದ್ದರು.