Advertisement

ಬೇಸಗೆ ಬರುತ್ತಿದೆ, ಗಿಡಗಳಿಗೆ ಬೆಂಕಿ ಹಚ್ಚದಿರಿ: ಹುಲ್ಲು ತೆರವಿನ ಹೆಸರಲ್ಲಿ ಕಡ್ಡಿ ಗೀರಬೇಡಿ

10:10 PM Jan 05, 2023 | Team Udayavani |

ಮಹಾನಗರ: ಮಳೆಗಾಲ ಮುಗಿದಿದೆ, ಎಲ್ಲ ಕಡೆಗಳಲ್ಲಿ ಚಿಗುರಿದ್ದ ಹುಲ್ಲು ಒಣಗುವ ಸಮಯ. ಪರಿಸರ ಸ್ವತ್ಛಗೊಳಿಸುವ ನೆಪದಲ್ಲಿ ಕೆಲವರು ಒಣಗಿದ ಹುಲ್ಲಿಗೆ ಬೆಂಕಿ ಹಾಕುವ ಅಭ್ಯಾಸ ಹೊಂದಿದ್ದಾರೆ, ಇದು ನಗರದಲ್ಲಿ ಅಳಿದುಳಿದ ಮರಗಿಡಗಳಿಗೂ ಮಾರಕವಾಗಿ ಪರಿಣಮಿಸುತ್ತಿದೆ.

Advertisement

ನಗರದ ಹಲವು ಭಾಗಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ, ಕೆಲವೊಂದು ಖಾಲಿ ಇರುವ ಸರಕಾರಿ ಜಾಗಗಳಲ್ಲಿ ಅನೇಕ ವರ್ಷಗಳಿಂದ ಗಿಡ ನೆಡಲಾಗುತ್ತಿದೆ. ಹೆದ್ದಾರಿ ಇಕ್ಕೆಲಗಳಲ್ಲಿ ಪ್ರತಿವರ್ಷ ನೆಟ್ಟ ಗಿಡಗಳಲ್ಲಿ ಶೇ.30ರಷ್ಟು ಈ ರೀತಿ ಬೆಂಕಿಗಾಹುತಿಯಾಗುತ್ತದೆ. ಪ್ರತಿ ಮಳೆಗಾಲದಲ್ಲಿ ಹೊಸ ಗಿಡ ನೆಡಬೇಕಾಗುತ್ತದೆ.

ನಗರದ ಹೊರವಲಯದ ಕುಲಶೇಖರ, ವಾಮಂ ಜೂರು, ಬೊಂದೇಲ್‌, ಕಾವೂರು ಮುಂತಾದ ಕಡೆ ಇನ್ನೂ ಕಾಡಿನ ಭಾಗಗಳು ಅಲ್ಪಸ್ವಲ್ಪ ಉಳಿದುಕೊಂಡಿದ್ದು, ನಗರಕ್ಕೆ ಶು ದ್ಧ ಉಸಿರಾಟದ ಗಾಳಿ ಪೂರೈಸುವ ಮೂಲಕ ಸಹಕಾರಿ. ಆದರೆ ಅಂತಹ ಕಾಡಿನ ಭಾಗದಲ್ಲೂ ಕಿಡಿಗೇಡಿಗಳ ಕೃತ್ಯದಿಂದಾಗಿ ಅಮೂಲ್ಯ ಹಸಿರು ನಶಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಕೆಲ ದಿನ ಹಿಂದೆ ಬೊಂದೇಲ್‌ ಬಳಿಯ ಮಂಜಲ್ಪಾದೆಯಲ್ಲಿ ಯಾರೋ ಮಾಡಿದ ಕುಕೃತ್ಯದಿಂದ ಸುಮಾರು ಅರ್ಧ ಕಿ.ಮೀ.ನಷ್ಟು ಉದ್ದಕ್ಕೆ ಮರಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್‌ ಅದನ್ನು ನೋಡಿದ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ (ಎನ್‌ಇಸಿಎಫ್‌) ಸದಸ್ಯರು ತತ್‌ಕ್ಷಣವೇ ಕದ್ರಿ ಹಾಗೂ ನವಮಂಗಳೂರು ಬಂದರಿನ ಅಗ್ನಿಶಾಮಕ ಎಂಜಿನ್‌ ತರಿಸಿ ಬೆಂಕಿ ಆರಿಸುವಲ್ಲಿ ಶ್ರಮಿಸಿದ್ದಾರೆ.

ಅಗ್ನಿಶಾಮಕ ದಳ ಬರುವುದಕ್ಕೆ ಮೊದಲೇ ಎನ್‌ಇಸಿಎಫ್‌ ಕಾರ್ಯಕರ್ತರು ಬಕೆಟ್‌ ಹಾಗೂ ಸಿಕ್ಕಿದ ಪಾತ್ರೆಗಳನ್ನು ಬಳಸಿಕೊಂಡು ಬೆಂಕಿಯ ತೀವ್ರತೆ ಕಡಿಮೆ ಮಾಡಲು, ಅದು ಹರಡದಂತೆ ನೀರು ಹಾಕಿ ಯೋಜನೆ ಹೂಡಿದ್ದರು. ಆದರೂ ಒಂದಷ್ಟು ಮರಗಳು ಕರಟಿವೆ.

ನಗರದ ವ್ಯಾಪ್ತಿಯಲ್ಲಿರುವ ಹಲವು ಶ್ಮಶಾನಗಳಲ್ಲಿ ಗಿಡ ಗಳನ್ನು ಪರಿಸರ ಪ್ರೇಮಿ ಜೀತ್‌ ಮಿಲನ್‌ ಅವರು ನೆಟ್ಟು ಬೆಳೆಸಿದ್ದರೆ, ನಗರದ ರಸ್ತೆ ಪಕ್ಕ ಎನ್‌ಇಸಿಎಫ್‌, ಮಾಧವ ಉಳ್ಳಾಲ ಮತ್ತಿತರರು ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ನಂದಿ ಗುಡ್ಡೆಯಂತಹ ಹಿಂದು ರುದ್ರಭೂಮಿಗಳಲ್ಲು ಹಸುರು ಚಿಗಿತುಕೊಂಡಿದೆ, ಆದರೆ ಇಲ್ಲೂ ಬೇಸಗೆಯಲ್ಲಿ ಬೆಂಕಿ ಹಾಕಿ ಗಿಡಗಳನ್ನು ಕೊಲ್ಲುವ ಕಿಡಿಗೇಡಿಗಳಿದ್ದಾರೆ.

Advertisement

ಅನುಸರಿಸಬೇಕಾದ ಕ್ರಮಗಳು
ಯಾವುದೇ ಪ್ರದೇಶದಲ್ಲಿ ಒಣಹುಲ್ಲು ಇದ್ದರೆ ಅದನ್ನು ಕಾರ್ಮಿಕರನ್ನು ಬಳಸಿ ಗ್ರಾಸ್‌ ಕಟ್ಟರ್‌ ಮೂಲಕ ತೆರವು ಗೊಳಿಸುವುದು ಸೂಕ್ತ. ಬೆಂಕಿ ಹಚ್ಚುವ ಕೆಲಸ ಬೇಡ.
ಮರಗಳ ಸುತ್ತಲೂ ಇರುವ ಕಸ, ಹುಲ್ಲು ಇತ್ಯಾ ದಿಗಳನ್ನು ಮಳೆಗಾಲದ ಕೊನೆಯಲ್ಲೇ ತೆರವು ಮಾಡಿ ಸ್ವತ್ಛಗೊಳಿಸಿದರೆ ಮುಂದೆ ಬೆಂಕಿ ಬೀಳುವ ಸಾಧ್ಯತೆ ಕಡಿಮೆ.
ನಾಗರಿಕರು ತಮ್ಮ ಪರಿಸರದಲ್ಲಿ ಎಲ್ಲಾದರೂ ಗಿಡಗಳು, ಕಾಡಿಗೆ ಬೆಂಕಿ ಬಿದ್ದದ್ದು ಕಂಡರೆ ತತ್‌ಕ್ಷಣ ಅದನ್ನು ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆಗೆ ತಿಳಿಸುವ ಮೂಲಕ ಸಂರಕ್ಷಣೆಗೆ ನೆರವಾಗಬೇಕು.

ಕಸ ತೆರವು ಆರಂಭ
ಅರಣ್ಯ ಇಲಾಖೆ ಕೆಲವು ಕಡೆಗಳಲ್ಲಿ ನೆಡುತೋಪುಗಳಲ್ಲಿ ಕಸ ತೆರವು ಪ್ರಾರಂಭಿಸಿದೆ. ತಲಪಾಡಿಯಿಂದ ಪಂಪ್‌ವೆಲ್‌, ಪಂಪ್‌ವೆಲ್‌ನಿಂದ ನಂತೂರು ವರೆಗೆ ಹೆದ್ದಾರಿ ಇಕ್ಕೆಲಗಳಲ್ಲಿ ಗಿಡಗಳ ಸುತ್ತ ಒಣಹುಲ್ಲು ತೆರವು ಮಾಡಿದ್ದೇವೆ, ಶಕ್ತಿನಗರ, ವಾಮಂಜೂರು ಬಳಿಯೂ ಕೆಲಸವಾಗುತ್ತಿದೆ, ಸಾಧ್ಯವಾದಷ್ಟೂ ಎಲ್ಲ ರಸ್ತೆ ಬದಿ ಗಿಡಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತೇವೆ.
– ಪ್ರಶಾಂತ ಪೈ, ವಲಯ ಅರಣ್ಯಾಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next