Advertisement
ನ. 19ರಂದು 4.29ಕ್ಕೆ ಸ್ಫೋಟ ಸಂಭವಿಸಿದ್ದು ಈತ 6.13ಕ್ಕೆ ಟ್ವೀಟ್ ಮಾಡಿದ್ದಾನೆ. ಆತ್ಮಾಹುತಿ ಬಾಂಬ್ ಬಗ್ಗೆ ಯೂ ಟ್ಯೂಬ್‌ನಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದ ಝಕೀರ್, ಅದರ ಲಿಂಕ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ.
ಮಂಗಳೂರಿನಲ್ಲಿಯೂ ಝಾಕೀರ್ ನಾಯ್ಕ…ನ ಅನುಯಾಯಿಗಳು ಇದ್ದು 2015ರ ಡಿಸೆಂಬರ್‌ನಲ್ಲಿ ಆತ ಮಂಗಳೂರಿನಲ್ಲಿ ಧರ್ಮ ಸಂದೇಶ ನೀಡುವ ಕಾರ್ಯ ಕ್ರಮ ನಿಗದಿಯಾಗಿತ್ತು. ಅದು ವಿವಾದ ಸೃಷ್ಟಿಸಿತ್ತು. ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಪ್ರವೀಣ್ ಭಾç ತೊಗಾಡಿಯಾ ಕಾರ್ಯಕ್ರಮ ಕೂಡ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಸರಕಾರ ಇಬ್ಬರಿಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಕ್ಕೆ ನಿಷೇಧ ಹೇರಿತ್ತು. ಆಸ್ಪತ್ರೆಯಲ್ಲಿ ಬಿಗಿ ಕಾವಲು
ಶಾರೀಕ್ ಚಿಕಿತ್ಸೆ ಪಡೆಯು ತ್ತಿರುವ ನಗರದ ಖಾಸಗಿ ಆಸ್ಪತ್ರೆಗೆ ಇನ್‌ಸ್ಪೆಕ್ಟರ್, ಪಿಎಸ್‌ಐ ಸಹಿತವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಕೀರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಇನ್ನೂ ಮಾತನಾಡುವ ಸ್ಥಿತಿಗೆ ಬಂದಿಲ್ಲ. ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಪೊಲೀಸರು ಇನ್ನೂ ಕೂಡ ಆತನನ್ನು ವಿಚಾರಿಸಿಲ್ಲ ಎಂದು ಮೂಲಗಳು ತಿಳಿಸಿವೆ.