Advertisement

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

01:27 AM Sep 29, 2024 | Team Udayavani |

ಮೂಲ್ಕಿ: ನಗರದ ಅಂಚೆ ಕಚೇರಿ ಸಮೀಪದ ಕೊಯ್ಯಾರಿನಲ್ಲಿ ಶನಿವಾರ ರಾತ್ರಿ 8 ಗಂಟೆಗೆ ಚಿರತೆಯೊಂದು ಸಣ್ಣ ಮರಿಯ ಜತೆಗೆ ಪ್ರತ್ಯಕ್ಷ ವಾದ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.

Advertisement

ಕೆಲವು ದಿನಗಳಿಂದ ಮೂಲ್ಕಿ ಕಾರ್ನಾಡು ಹಾಗೂ ಕೊಕ್ಕರ್‌ಕಲ್‌ ಬಳಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ನಗರ ಪಂಚಾಯತ್‌ ವತಿಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಿ ಎರಡು ಬೋನುಗಳನ್ನು ಇರಿಸಲಾಗಿತ್ತು. ಆದರೆ ಚಿರತೆ ಅದರಲ್ಲಿ ಸೆರೆಯಾಗಿರಲಿಲ್ಲ. ಶನಿವಾರ ಕೊಯ್ನಾರಿನಿಂದ ನಗರ ಪಂಚಾಯತ್‌ ಕಸ ಸಂಗ್ರಹ ಪ್ರದೇಶಕ್ಕೆ ಚಿರತೆ ಹೋಗುವುದನ್ನು ಕಂಡಿರುವುದಾಗಿ ಬೈಕ್‌ ಸವಾರರೊಬ್ಬರು ತಿಳಿಸಿದ್ದಾರೆ.

ಬಳಿಕ ಅದನ್ನು ಓಡಿಸಲು ಮುಂದಾದಾಗ ಮೆಡಲಿನ್‌ ಶಾಲೆಯತ್ತ ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಐದಾರು ದಿನಗಳ ಹಿಂದೆ ಕೋಟೆಕೇರಿ ಬಳಿಯ ಕಕ್ವ ರಸ್ತೆಯ ತಿರುವು ಬಳಿ ಮರಿ ಚಿರತೆ ಕಂಡು ಬಂದಿತ್ತೆಂದು ಕೆಲವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next