Advertisement
ಮಲ್ಪೆ ಬೀಚ್‌ಗೆ ದಿನಕ್ಕೆ ಸರಾಸರಿ 10 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದರೆ, ಸೈಂಟ್‌ಮೇರಿಸ್ ದ್ವೀಪಕ್ಕೆ ಸರಾಸರಿ 1000 ಮಂದಿ ಆಗಮಿಸುತ್ತಾರೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಕೆಲವೊಂದು ಮೂಲಭೂತ ಸೌಕರ್ಯಗಳಲ್ಲೊಂದಾದ ವಾಹನ ಪಾರ್ಕಿಂಗ್, ಶೌಚಾಲಯ, ಸ್ನಾನಗೃಹದ ಸಮಸ್ಯೆ ಎದುರಾಗುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ. ರಜಾ ದಿನಗಳಲ್ಲಿ ದೂರದ ಪ್ರವಾಸಿಗರ ಜತೆಗೆ ಸ್ಥಳೀಯರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿಲ್ಲದೆ ಹಿಂತಿರುಗುವುದೂ ಇದೆ.
ಪ್ರವಾಸಿಗರ ಸುರಕ್ಷತೆಗೆ ನಿರಂತರ ಗಸ್ತು ತಿರುಗಲು ಎವಿಟಿ ಬೈಕ್ ನಿಯೋಜಿಸಲಾಗಿದೆ. 9 ಮಂದಿ ಎನ್‌ಐಡಬ್ಲ್ಯುಎಸ್-ಆರ್‌ಎಲ್‌ಎಸ್ ಪ್ರಮಾಣೀಕೃತ ಲೈಫ್‌ಗಾರ್ಡ್ ರಕ್ಷಣೆಗೆ ಸನ್ನದ್ದರಾಗಿದ್ದಾರೆ. ಕರಾವಳಿ ಕಾವಲು ಪಡೆಯ ಮೂವರು ಪೊಲೀಸರು ಬೀಚ್‌ನಲ್ಲಿ ನಿಗಾ ಇಟ್ಟಿರುತ್ತಾರೆ. ಸ್ಥಳೀಯ ರಕ್ಷಣ ತಂಡಗಳ ಸ್ವಯಂಸೇವಕರೂ ಇದ್ದಾರೆ. ಆದರೂ ಉತ್ಸಾಹದಿಂದ ನೀರಿಗೆ ಹಾರುವ ಜನರನ್ನು ಸಂಭಾಳಿಸುವುದೇ ಇಲ್ಲಿ ಸವಾಲಾಗಿದೆ.
Related Articles
ಈಗ ಬೀಚ್‌ನಲ್ಲಿ 2 ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹ ಗಳಿವೆ. ಆದರೆ, ಪ್ರವಾಸಿಗರ ಲೆಕ್ಕ ನೋಡಿದರೆ ಇದು ಸಾಲದು. ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಹೀಗಾಗಿ ಹೆಚ್ಚುವರಿ ಶೌಚಾಲಯ ಬೇಕು.
- ಪಾರ್ಕಿಂಗ್ ಏರಿಯಾದಲ್ಲಿ ಒಂದು ಸುಸಜ್ಜಿತ ಶೌಚಾಲಯದ ವ್ಯವಸ್ಥೆ
- ಪ್ರವಾಸಿಗರ ರಕ್ಷಣೆಗಾಗಿ ಜೆಟ್‌ಸ್ಕೀ (ಜೆಟ್ ಸ್ಕೂಟರ್)
- ಹೆಚ್ಚುವರಿ ವಾಹನ ಪಾರ್ಕಿಂಗ್ ವ್ಯವಸ್ಥೆ, ದೀಪಗಳ ಅಳವಡಿಕೆ
- ಬೀಚ್‌ನ ಸ್ವಾಗತ ಗೋಪುರದಿಂದ ಶೌಚಾಲಯದವರೆಗೆ ರಸ್ತೆಯ ಎರಡೂ ಬದಿಯ ಫುಟ್‌ಪಾತ್ ನಿರ್ಮಾಣ
- ಸೂಕ್ತ ಭದ್ರತೆಗಾಗಿ ಪೊಲೀಸ್ ಚೌಕಿ ಸ್ಥಾಪನೆ, ಹೆಚ್ಚುವರಿಸಿಸಿ ಕೆಮರಾ
- ಪ್ರಥಮ ಚಿಕಿತ್ಸಾ ಸೌಲಭ್ಯಗಳು
Advertisement
-ನಟರಾಜ್ ಮಲ್ಪೆ